ದಿನಕ್ಕೆ ಹತ್ತಾರು ಬಾರಿ ಕಾಫಿ ಕುಡಿಯೋ ಅಭ್ಯಾಸವಿದೆಯಾ? ಹಾಗಿದ್ರೆ ಈ ಸಮಸ್ಯೆಗಳು ಖಚಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಿದ್ದೆ ಹೋಗಲಾಡಿಸೋಕೆ ಹೆಚ್ಚು ಪರಿಣಾಮಕಾರಿ ಆಹಾರ ಅಂದ್ರೆ ಅದು ಕಾಫಿ. ಕೆಲವರಿಗೆ ದಿನ ಬೆಳಕಾಗೋದೆ ಕಾಫಿಯಿಂದ. ರಾತ್ರಿ ಮಲಗುವಷ್ಟರಲ್ಲಿ ಹತ್ತಾರು ಬಾರಿ ಕಾಫಿ ಕುಡಿದಿರುತ್ತಾರೆ.. ನಿಮಗೂ ಈ ರೀತಿ ಹೆಚ್ಚು ಕಾಫಿ ಕುಡಿಯೋ ಅಭ್ಯಾಸ ಇದೆಯಾ? ಹಾಗಿದ್ರೆ ಇವುಗಳನ್ನು ನೀವು ತಿಳಿಯಲೇ ಬೇಕು..

  • ಆತಂಕ: ಹೆಚ್ಚು ಕಾಫಿ ಕುಡಿಯುವುದರಿಂದ ದೇಹದಲ್ಲಿ ಕಫೇನ್‌ ಅಂಶ ಸಂಗ್ರಹವಾಗುತ್ತೆ. ಇದರಿಂದ ಆತಂಕ, ಭಯ, ಚಿಂತೆಗಳು ಹೆಚ್ಚಾಗುತ್ತೆ.
  • ನಿದ್ದೆ ಸಮಸ್ಯೆ: ಕಾಫಿ ಕುಡಿಯುವುದರಿಂದ ನಿದ್ದೆ ದೂರಾಗುತ್ತದೆ. ಆದರೆ ರಾತ್ರಿ ಹೊತ್ತು ಕಾಫಿ ಕುಡಿದರೆ ಇನ್ಸೋಮೇನಿಯಾ ಸಮಸ್ಯೆ ಕಾಡಲಿದೆ.
  • ಜೀರ್ಣಕ್ರಿಯೆ: ಎಷ್ಟೋ ಜನಕ್ಕೆ ಬೆಳಗ್ಗೆ ಕಾಫಿ ಕುಡಿದರೆ ಮಾತ್ರ ವಾಶ್‌ ರೂಂ ಗೆ ಹೋಗ್ತಾರೆ.. ಆದರೆ ಹೆಚ್ಚು ಕಾಫಿ ಕುಡಿಯುವುದರಿಂದ ಉಷ್ಣ ಹೆಚ್ಚಾಗಿ ಜೀರ್ಣಕ್ರಿಯೆಗೆ ತೊಂದರೆಯಾಗುತ್ತೆ.
  • ರಕ್ತದೊತ್ತಡ: ಹೆಚ್ಚು ಕಫೇನ್‌ ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗುತ್ತದೆ. ಅಂದರೆ ಸ್ಕ್ರೋಕ್‌ ನಂತಹ ಸಮಸ್ಯೆಯೂ ಕಾಡಬಹುದು.
  • ತಲೆಸುತ್ತು: ಹೆಚ್ಚು ಕಾಫಿ ಕುಡಿಯುವುದುರಿಂದ ಆಯಾಸ ಹೆಚ್ಚಾಗಿ ತಲೆಸುತ್ತು ಬರಬಹುದು.
  • ಮೂತ್ರ ಸಮಸ್ಯೆ: ಕಫೇನ್‌ ಸೇವನೆಯಿಂದ ಹೆಚ್ಚಾಗಿ ಮೂತ್ರಕ್ಕೆ ಹೋಗಬೇಕಾದ ಪ್ರಸಂಗ ಕಾಡೀತು.
  • ಗ್ಯಾಸ್ಟ್ರಿಕ್‌: ಖಾಲಿ ಹೊಟ್ಟೆಯಲ್ಲಿ ಅಥವಾ ಹೆಚ್ಚು ಕಾಫಿ ಸೇವಿಸುವುದಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಡಲಿದೆ. ಇದರಿಂದಲೇ ಮಲಬದ್ಧತೆಯೂ ಬರುತ್ತೆ.
  • ಹುಣ್ಣು: ಗ್ಯಾಸ್ಟ್ರಿಕ್‌ ನಿಂದ ಹೊಟ್ಟೆಯಲ್ಲಿ ಹುಣ್ಣಾಗುತ್ತದೆ. ಇದು ಸಣ್ಣ ಕರಳಿಗೆ ಸಮಸ್ಯೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!