ಹೊಸದಿಗಂತ ವರದಿ ಸುಳ್ಯ:
ದೇವರಕೊಲ್ಲಿ ಬಳಿ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಬುಧವಾರ ನಡೆದಿದೆ.

ಗಾಯಾಳುವನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ:
ಗಂಭೀರ ಗಾಯಗೊಂಡವರನ್ನು ಬಿಜಾಪುರ ಮೂಲದ ಮಾಹಂತೇಶ್ ಎಂದು ತಿಳಿದು ಬಂದಿದ್ದು ಇವರು ಪುತ್ತೂರಿನ ಟ್ಯಾಕ್ಸೋ ಅರ್ಥ್ ಮೂವರ್ಸ್ ನ ಉದ್ಯೋಗಿ ಎಂದು ಹೇಳಲಾಗುತ್ತಿದೆ.

ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸುತ್ತಿರುವುದಾಗಿ ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ.



