ದೆಹಲಿಯ ರಸ್ತೆಗಳಲ್ಲಿ ಕುದುರೆ ಗಾಡಿ ರೇಸ್, 10 ಮಂದಿ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯ ರಸ್ತೆಯೊಂದರಲ್ಲಿ ಕುದುರೆ ಗಾಡಿ ಓಟ ನಡೆಸುತ್ತಿದ್ದ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಾಲ್ಕು ಕುದುರೆಗಳನ್ನು ವಶಕ್ಕೆ ಪಡೆದಿದ್ದು, ಎಂಸಿಡಿಗೆ ಒಪ್ಪಿಸಲಾಗಿದೆ. ಇನ್ನು ಎರಡು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.

ರಾಜ್‌ಘಾಡ್‌ನಿಂದ ದೆಹಲಿ ಗೇಟ್, ಸಿವಿಕ್ ಸೆಂಟರ್ ಕಡೆಗೆ ಕುದುರೆ ರೇಸ್‌ನಲ್ಲಿ ತೊಡಗಿದ್ದವರನ್ನು ಬಂಧಿಸಲಾಗಿದೆ. ನಿತ್ಯ ಸಾವಿರಾರು ವಾಹನಗಳು ಓಡಾಡುವ ರಸ್ತೆಗಳಲ್ಲಿ ಈ ರೀತಿ ಕುದುರೆ ರೇಸ್ ನಡೆಸುವಂತಿಲ್ಲ. ಇತರ ಸವಾರರಿಗೆ ಇದು ತೊಂದರೆಯಾಗುತ್ತದೆ, ಹಾಗೂ ಪ್ರಯಾಣಿಕರಿಗೆ ಸಮಯ ಹೆಚ್ಚು ವ್ಯರ್ಥವಾಗಿದೆ, ಅನುಮತಿ ಇಲ್ಲದೆ ರಸ್ತೆಯಲ್ಲಿ ರೇಸ್ ನಡೆಸುವಂತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!