ದಿನಭವಿಷ್ಯ| ನಿಮ್ಮ ಸುತ್ತಲಿನ ವಾತಾವರಣ ನಿಮಗಿಂದು ಹಿತಕರ ಎನಿಸುವುದು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಮಹತ್ವದ ಘಟನೆ ಸಂಭವಿಸಬಹುದು. ಹಳೆಯ ಪ್ರಸಂಗವೊಂದು  ನಿಮ್ಮನ್ನು ಕಾಡುವ ಸಾಧ್ಯತೆ. ಆರೋಗ್ಯ ಸಮಸ್ಯೆ ಕೂಡಾ ಉಂಟಾದೀತು.ವೃಷಭ
ಖಾಸಗಿ ಅಥವಾ ವೃತ್ತಿಯ ಸಮಸ್ಯೆಯನ್ನು  ದಿಟ್ಟವಾಗಿ ಎದುರಿಸಿ. ಅದರಿಂದ ಓಡಿಹೋಗುವ ಪ್ರಯತ್ನ ಬೇಡ. ಆರೋಗ್ಯ ಪರಿಸ್ಥಿತಿ ಸುಧಾರಣೆ.

ಮಿಥುನ
ಬಾಕಿ ಇಟ್ಟಿರುವ ಕಾರ್ಯ  ಪೂರೈಸಿ. ನಿರ್ಧಾರ ಬಾಕಿ ಉಳಿಸಿದ್ದರೆ ಅದನ್ನು ಪೂರೈಸಿ. ಭವಿಷ್ಯದ ಕುರಿತಂತೆ ಯೋಜನೆ ರೂಪಿಸಲು ಸಕಾಲ. ಸಮಸ್ಯೆ ಪರಿಹಾರ.

ಕಟಕ
ಉದ್ಯೋಗದಲ್ಲಿ ಪ್ರಗತಿ, ಪ್ರಸಿದ್ಧಿ ಸಾಧಿಸುವಿರಿ. ನಿಮ್ಮ ಸುತ್ತಲಿನ ವಾತಾವರಣ ನಿಮಗಿಂದು ಹಿತಕರ ಎನಿಸುವುದು. ಎಲ್ಲರೂ ಸಹಕಾರ ತೋರುವರು.

ಸಿಂಹ
ಇತರರು ನಿಮ್ಮ ಬಗ್ಗೆ ಏನು ಹೇಳುತ್ತಾರೆ ಎಂಬ ಕುರಿತು ಚಿಂತಿಸದಿರಿ. ನಿಮಗೆ ಸರಿಯೆನಿಸಿದ ಕಾರ್ಯ ಮಾಡಿರಿ. ವಿವಾದಕ್ಕೆ ಸಿಲುಕದಂತೆ ಎಚ್ಚರ ವಹಿಸಿರಿ.

ಕನ್ಯಾ
ಉತ್ಸಾಹದ ದಿನ. ಪ್ರೀತಿಪಾತ್ರರ ಜತೆ ವಿಶ್ವಾಸ ವೃದ್ಧಿ. ಕುಟುಂಬ ಸದಸ್ಯರ ಮನಸ್ಸು ನೋಯದಂತೆ ನಡೆದುಕೊಳ್ಳಿ. ಹೊಂದಾಣಿಕೆಯಿರಲಿ.

ತುಲಾ
ಕಷ್ಟದಲ್ಲಿ ಸಿಲುಕುವಿರಿ. ಆದರೆ ಬಹಳಷ್ಟು ನೆರವಿನ ಹಸ್ತಗಳು ನಿಮ್ಮೆಡೆಗೆ ಬರುವವು. ಕೌಟುಂಬಿಕ ಉದ್ವಿಗ್ನತೆ. ಸಮಾಧಾನದಿಂದ ವರ್ತಿಸಿರಿ.

ವೃಶ್ಚಿಕ
ಕೌಟುಂಬಿಕ ಉದ್ವಿಗ್ನತೆ ಶಮನ. ವಿವಾಹಕ್ಕೆ ಹೆತ್ತವರ ಸಮ್ಮತಿ ಕಾಯುತ್ತಿದ್ದವರಿಗೆ ಶುಭ ಬೆಳವಣಿಗೆ. ಎಲ್ಲರ ಜತೆ ಉತ್ತಮ ಹೊಂದಾಣಿಕೆ ಸಾಧಿಸುವಿರಿ.

ಧನು
ಅತಿಯಾದ ಖರ್ಚು ಒದಗುವುದು. ಖರೀದಿಗಿಂತ ಮೊದಲು ವಿವೇಚನೆಯಿಂದ ಯೋಚಿಸಿ. ಮುಖ್ಯ ಕಾರ್ಯವೊಂದು ವಿಳಂಬ ಕಾಣುವುದು.

ಮಕರ
ಹೆಚ್ಚುವರಿ ಹೊಣೆ ನಿಮ್ಮ ಹೆಗಲೇರಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ಕೆಲವರ ಜತೆ ಸಂಘರ್ಷ ಉಂಟಾದೀತು. ಸಂಯಮವಿರಲಿ.

ಕುಂಭ
ಸಂತೋಷದ ದಿನ. ಆಪ್ತರ ಜತೆ ಕಾಲ ಕಳೆಯುವ ಅವಕಾಶ. ಕೌಟುಂಬಿಕವಾಗಿ ಮನಸ್ಸಿಗೆ ನಿರಾಳತೆ ತರುವ ಬೆಳವಣಿಗೆ. ಆರೋಗ್ಯ ಸುಧಾರಣೆ.

ಮೀನ
ಕುಟುಂಬ ಸದಸ್ಯರ ಆರೋಗ್ಯ ಕಳವಳಕ್ಕೆ ಕಾರಣವಾದೀತು. ಹಲವಾರು ಪ್ರಮುಖ ವಿಷಯಗಳನ್ನು ನೀವಿಂದು ಇತ್ಯರ್ಥ ಮಾಡಬೇಕಾಗುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!