ದಿನಭವಿಷ್ಯ| ಯಾರದೋ ಮಾತು ಅಥವಾ ವರ್ತನೆ ನಿಮ್ಮ ಮನಸ್ಸು ಕೆಡಿಸಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಹಿಂದೆ ಮಾಡಿದ ಹಣದ ಹೂಡಿಕೆಯು ಫಲ ನೀಡಬಹುದು. ವೈಯಕ್ತಿಕ ಬದುಕಿನಲ್ಲಿ ನಿಮಗೆ ಪೂರಕವಾದ ಬೆಳವಣಿಗೆ. ಬಂಧುಗಳ ಭೇಟಿಯಿಂದ ಹರ್ಷ.

ವೃಷಭ
ತಪ್ಪು ಕಲ್ಪನೆಯಿಂದಾಗಿ ಆಪ್ತರ ಜತೆ ಭಿನ್ನಮತ ಉಂಟಾಗಬಹುದು. ಮಾತುಕತೆಯಿಂದ ಅದನ್ನು ಪರಿಹರಿಸಿ.  ಬಂಧುಗಳಿಂದ ಶುಭಸುದ್ದಿ.

ಮಿಥುನ
ನಿಮ್ಮ ವರ್ತನೆಯು  ಇತರರ ಜತೆಗಿನ ಬಾಂಧವ್ಯ ಕೆಡಲು ಕಾರಣವಾಗಬಹುದು. ನಡೆನುಡಿ ಬದಲಿಸುವುದು ಒಳ್ಳೆಯದು.

ಕಟಕ
ಆರ್ಥಿಕ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿ. ಹಣದ ಹರಿವು ಕಡಿಮೆಯಾಗಲಿದೆ. ಆಹಾರದಲ್ಲಿ  ಹಿತಮಿತ ಸಾಧಿಸಿ. ಇಲ್ಲವಾದರೆ ಹೊಟ್ಟೆ ಕೆಟ್ಟೀತು.

ಸಿಂಹ
ಯಾರದೋ ಮಾತು ಅಥವಾ ವರ್ತನೆ ನಿಮ್ಮ ಮನಸ್ಸು ಕೆಡಿಸಬಹುದು. ಇತರರ ತಪ್ಪು ಸಮರ್ಥಿಸುವ ಪ್ರಯತ್ನ ಮಾಡಬೇಡಿ. ಖರ್ಚು ಹೆಚ್ಚಬಹುದು.

ಕನ್ಯಾ
ಆಪ್ತರ ಜತೆಗಿನ  ಸಂಬಂಧದಲ್ಲಿ ಬಿರುಕು ಮೂಡಬಹುದು.   ಉಲ್ಬಣಗೊಳಿಸದಿರಿ. ಹೊಂದಾಣಿಕೆ ಒಳಿತು. ಉದ್ಯೋಗ ಬದಲಾವಣೆ ಸಾಧ್ಯತೆ. ಆರ್ಥಿಕ ಲಾಭ.

ತುಲಾ
ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಕೆಲವು ಸಮಸ್ಯೆ ಎದುರಿಸುವಿರಿ.  ಸಂಘರ್ಷಕ್ಕೆ ಆಸ್ಪದ ಕೊಡದೆ ಸಮಾಧಾನದಿಂದ ಮುಂದುವರಿಯಿರಿ.

ವೃಶ್ಚಿಕ
ದೈಹಿಕ ಶ್ರಮ ಅಧಿಕ. ಅದರಿಂದಾಗಿ ಮಾನಸಿಕ ಒತ್ತಡಕ್ಕೂ ಬಲಿಯಾಗುವಿರಿ. ಕೌಟುಂಬಿಕ ನೆಮ್ಮದಿ ಕೆಡಿಸುವ ಬೆಳವಣಿಗೆ ಸಂಭವಿಸಬಹುದು.

ಧನು
ಕೆಲವು ಬೆಳವಣಿಗೆ ನಿಮ್ಮ ಮನಸ್ಸು ಕುಗ್ಗಿಸುವುದು. ನಿಮಗೆ ಸಂಬಂಧ ಪಡದ ವಿಚಾರದಲ್ಲಿ  ಅನವಶ್ಯವಾಗಿ ತಲೆ ಕೆಡಿಸಿಕೊಳ್ಳದಿರಿ. ಆರ್ಥಿಕ ಒತ್ತಡ.

ಮಕರ
ವಿಶೇಷಗಳು ಘಟಿಸದ ಸಾಮಾನ್ಯ ದಿನ. ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿರಿ. ಅನವಶ್ಯ ಖರ್ಚುಗಳಿಗೆ ನಿಯಂತ್ರಣ ಹಾಕಿರಿ.

ಕುಂಭ
ಭಾವನಾತ್ಮಕ ನಿಯಂತ್ರಣ ಸಾಧಿಸಿ. ಸಂಬಂಧವು ಕೆಟ್ಟು ಹೋಗಲು ಅವಕಾಶ ಕೊಡಬೇಡಿ. ಕುಟುಂಬ ಸದಸ್ಯರ ಜತೆ ವಾಗ್ವಾದಕ್ಕೆ ಹೋಗಬೇಡಿ.

ಮೀನ
ನಿಮ್ಮ ಉದ್ದೇಶ ಸಾಧನೆಯಾಗುವ ದಿನ. ಹಣದ ಹೂಡಿಕೆಯಿಂದ ಲಾಭ ದೊರಕಲಿದೆ. ಕೌಟುಂಬಿಕ ಆವಶ್ಯಕತೆ ಪೂರೈಸಲು ಹೆಚ್ಚು ಗಮನ ಕೊಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!