ಪ್ರಮುಖ ಬೆಳವಣಿಗೆ ಸಂಭವಿಸಬಹುದು. ಎಲ್ಲರೊಡನೆ ಹೊಂದಿಕೊಂಡು ಹೋಗಬೇಕಾದ ಅಗತ್ಯವಿದೆ. ಸಂಘರ್ಷ ದಲ್ಲಿ ಸಿಲುಕದಿರಿ.
ವೃಷಭ
ಬೇರೆಯವರು ಏನು ಹೇಳುತ್ತಾರೆ, ಏನು ತಿಳಕೊಳ್ಳುತ್ತಾರೆ ಎಂದು ಚಿಂತಿಸದಿರಿ. ನಿಮ್ಮ ಕೆಲಸ ಮಾಡಿ. ಆರ್ಥಿಕ ವ್ಯವಹಾರವೊಂದು ಕುದುರಲಿದೆ.
ಮಿಥುನ
ಮಹತ್ವದ ಕೆಲಸಗಳನ್ನು ಮುಂಜಾನೆಯ ಅವಧಿಯಲ್ಲೆ ಪೂರೈಸಲು ಯತ್ನಿಸಿ. ಕಾಲ ಪೂರಕವಾಗಿದೆ. ಅಪರಾಹ್ನ ಅಡ್ಡಿಗಳು ಬರಬಹುದು.
ಕಟಕ
ನಿಮ್ಮ ಕಷ್ಟಕ್ಕೆ ನೆರ ವಾಗಲು ಸಾಕಷ್ಟು ಮಂದಿ ಮುಂದೆ ಬರುತ್ತಾರೆ. ಈ ವಿಷಯದಲ್ಲಿ ನೀವು ಅದೃಷ್ಟ ಶಾಲಿಗಳು. ಹಾಗಾಗಿ ಧೃತಿಗೆಡಬೇಡಿ.
ಸಿಂಹ
ಸಂಬಂಧಿಗಳೊಂದಿಗೆ ಪ್ರಮುಖ ವಿಚಾರ ವಿನಿಮಯ ನಡೆಯಬಹುದು. ವ್ಯಾಜ್ಯಗಳ ಪರಿಹಾರ. ನಿಮ್ಮ ನಿಲುವಿನಲ್ಲೂ ಹೊಂದಾಣಿಕೆ ಅವಶ್ಯ.
ಕನ್ಯಾ
ಇಂದು ದೊಡ್ಡ ಮಟ್ಟದ ಖರ್ಚುವೆಚ್ಚಗಳು ಬರಬಹುದು. ಅದಕ್ಕೆ ಸಿದ್ಧರಾಗಿ. ಸಂಘರ್ಷ, ವಿವಾದ ತಪ್ಪಿಸಿ. ಏಕೆಂದರೆ ಇಂದು ನೀವು ಗೆಲ್ಲಲಾರಿರಿ.
ತುಲಾ
ಸಂತೋಷದ ಮನಸ್ಥಿತಿ. ಕ್ಷುಲ್ಲಕ ಕಾರಣಕ್ಕೆ ಕಳಕೊಳ್ಳಬೇಡಿ. ಇತರರ ಕೆಟ್ಟ ವರ್ತನೆಯನ್ನು ಕಡೆಗಣಿಸುವುದು ಉತ್ತಮ. ಪ್ರತ್ಯುತ್ತರ ನೀಡದಿರಿ.
ವೃಶ್ಚಿಕ
ನಿಮ್ಮ ಖಾಸಗಿ ಬದುಕು ಮತ್ತು ಆರೋಗ್ಯದಲ್ಲಿ ಸಮತೋಲನ ಕಾಪಾಡಲು ಯತ್ನಿಸಿ. ಮನಸ್ಸು ಕೆಡಿಸುವ ಚಿಂತನೆಗಳನ್ನು ದೂರ ಸರಿಸಿರಿ.
ಧನು
ಹಣಕಾಸು ಸ್ಥಿತಿ ಉತ್ತಮಗೊಳ್ಳುವ ಹಾದಿಯಲ್ಲಿದ್ದೀರಿ. ಎಲ್ಲವನ್ನೂ ಜಾಣತನದಿಂದ ನಿಭಾಯಿಸಿ. ದುಡುಕಿನ ನಿರ್ಧಾರ ಬೇಡ.
ಮಕರ
ಇಂದು ವೃತ್ತಿಯಲ್ಲಿ ಅಥವಾ ಮನೆಯಲ್ಲಿ ಎದುರಾಗುವ ಸಮಸ್ಯೆಯನ್ನು ಸುಲಭದಲ್ಲಿ ಪರಿಹರಿಸು ವಿರಿ. ಆಹಾರ ಸೇವನೆ ಹಿತಮಿತವಾಗಿರಲಿ.
ಕುಂಭ
ನಿರ್ಧಾರ ತೆಗೆದುಕೊಂಡುದನ್ನು ಕಾರ್ಯಗತ ಗೊಳಿಸಲು ಸಕಾಲ. ಇನ್ನಷ್ಟು ಕಾಲ ಕಾಯುವುದು ಬೇಡ. ಕುಟುಂಬಸ್ಥರ ಸಹಕಾರ ಪಡೆಯಿರಿ.
ಮೀನ
ಗೊಂದಲದ ಮನಸ್ಥಿತಿ. ಪ್ರಮುಖ ನಿರ್ಧಾರ ತಾಳದಿರಿ. ಕಾದು ನೋಡುವುದು ಒಳಿತು. ವೃತ್ತಿ ವ್ಯವಹಾರದಲ್ಲಿ ಪೂರಕ ಬೆಳವಣಿಗೆ ಸಂಭವಿಸುವುದು.