ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಜೀವನದಲ್ಲಿ ಹೊಸತನ, ಹುರುಪು ತುಂಬಲಿದೆ. ಬಯಸಿದ ಕಾರ್ಯ ಈಡೇರುವುದು. ದೀರ್ಘಕಾಲೀನ ಸಂಬಂಧವು ಗಟ್ಟಿಯಾಗಲಿದೆ.
ವೃಷಭ
ನಿಮ್ಮ ಕಾರ್ಯದಲ್ಲಿ ಉತ್ತಮ ಸಾಧನೆ ಮಾಡುವಿರಿ. ಎಲ್ಲರ ಗಮನ ಸೆಳೆಯುವಿರಿ. ಆದರೂ ಮನದಲ್ಲಿ ಏನೋ ಕೊರತೆ. ಯಾವುದೋ ಬೇಸರ.
ಮಿಥುನ
ವೃತ್ತಿಯಲ್ಲಿ ನಿಮಗೆ ಅನುಕೂಲಕರ ಪರಿಸ್ಥಿತಿ. ಎಲ್ಲವೂ ಸುಗಮವಾಗಿ ಸಾಗುವುದು. ಕೌಟುಂಬಿಕ ವ್ಯವಹಾರಗಳು ಸುಲಲಿತ. ಬಂಧುಗಳಿಂದ ಸೂಕ್ತ ನೆರವು, ಸಹಕಾರ.
ಕಟಕ
ನಿಮ್ಮ ವೃತ್ತಿ ಅಥವಾ ಖಾಸಗಿ ವಿಷಯಕ್ಕೆ ಸಂಬಂಧಿಸಿದ ಮಾತುಕತೆ ಫಲಪ್ರದವಾಗಲಿದೆ. ಭಿನ್ನಮತ, ಸಮಸ್ಯೆ ನಿವಾರಣೆ ಕಾಣುವುದು. ಆರ್ಥಿಕ ಸುಧಾರಣೆ.
ಸಿಂಹ
ನಿಮ್ಮ ಕೆಲಸ ಸುಗಮ ವಾಗಿ ಸಾಗಬೇಕೆ, ಹಾಗಿದ್ದರೆ ಇತರರ ಜತೆ ನಿಮ್ಮ ಸ್ಪಂದನೆಯೂ ಸೂಕ್ತವಾಗಿರಲಿ. ನಯವಿನಯ ನಿಮ್ಮಲ್ಲಿದ್ದರೆ ಒಳಿತು.
ಕನ್ಯಾ
ಇತರರ ಮನಸ್ಥಿತಿ ಅರ್ಥ ಮಾಡಿಕೊಳ್ಳುವಲ್ಲಿ ನೀವು ಸಫಲರಾಗುವಿರಿ. ಇದರಿಂದ ಎಲ್ಲರ ಜತೆ ಸೌಹಾರ್ದ ಸಂಬಂಧ. ಇತರರ ಸಮಸ್ಯೆ ಪರಿಹರಿಸುವಿರಿ.
ತುಲಾ
ಖಾಸಗಿ ಒತ್ತಡವು ನಿಮ್ಮ ವೃತ್ತಿಯ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ಆಪ್ತರ ಜತೆಗಿನ ಸಂಬಂಧದಲ್ಲಿ ಏರುಪೇರು ಕಂಡುಬರಬಹುದು.
ವೃಶ್ಚಿಕ
ನೆಗೆಟಿವ್ ಚಿಂತನೆ ಮನಸ್ಸನ್ನು ತುಂಬುತ್ತದೆ. ಮೊದಲು ಆ ಚಿಂತನೆ ದೂರಗೊಳಿಸಿ. ಆತ್ಮೀಯರ ಜತೆ ಮಾತಿನ ಚಕಮಕಿ ನಡೆದೀತು. ಸಂಯಮವಿರಲಿ.
ಧನು
ಕೌಟುಂಬಿಕ ಸಮಸ್ಯೆಯು ನಿಮ್ಮ ಮನಸ್ಸಿನ ಮೇಲೆ ಒತ್ತಡ ಹೇರಬಹುದು. ಇದರಿಂದ ನೀವು ಮಾಡುವ ಕೆಲಸವು ಹಾಳಾದೀತು. ಎಚ್ಚರ ವಹಿಸಿರಿ.
ಮಕರ
ಸಂಗಾತಿ ಜತೆಗೆ ಭಾವನಾತ್ಮಕ ಸಂಘರ್ಷ. ಅತಿರೇಕದ ಪ್ರತಿಕ್ರಿಯೆ ತೋರಬೇಡಿ. ಹಣದ ವಿಚಾರದಲ್ಲಿ ವಿವೇಚನೆಯಿಂದ ವರ್ತಿಸಿರಿ.
ಕುಂಭ
ಇತರರ ಜತೆಗಿನ ಪೈಪೋಟಿಯಲ್ಲಿ ನೀವೇ ಮೇಲುಗೈ ಸಾಧಿಸುವಿರಿ. ನಿಮ್ಮ ಸಾಧನೆ ಎಲ್ಲರ ಗಮನ ಸೆಳೆಯುವುದು. ಕೌಟುಂಬಿಕ ಒತ್ತಡಗಳು ನಿವಾರಣೆ.
ಮೀನ
ಇಂದು ಹಲವು ಅಡ್ಡಿ ಎದುರಿಸುವಿರಿ. ಪ್ರಮುಖ ಕಾರ್ಯ ಮುಂದೂಡಿರಿ. ಆಪ್ತರ ಸಂಗದಲ್ಲಿ ನೋವು ಮರೆಯುವಿರಿ. ಧ್ಯಾನ ಸಹಕಾರಿ.