ಸೆರ್ಬಿಯಾದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ಮಾಡಿದ ಸಮಂತಾ, ವರುಣ್​ ಧವನ್​!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೆರ್ಬಿಯಾದಲ್ಲಿ ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಮತ್ತು ನಟ ವರುಣ್​ ಧವನ್​ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿದ್ದಾರೆ.

ವಿವಿಧ ದೇಶಗಳಲ್ಲಿ ‘ಸಿಟಾಡೆಲ್​’ ವೆಬ್​ ಸರಣಿಯ ಇಂಡಿಯನ್ ವರ್ಷನ್​ನ ಚಿತ್ರೀಕರಣ ನಡೆಯುತ್ತಿದ್ದು, ಹೀಗಾಗಿ ಸಮಂತಾ ಹಾಗು ವರುಣ್​ ಧವನ್ ಅಲ್ಲಿದ್ದು, ಈ ವೇಳೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಸೆರ್ಬಿಯಾಗೆ ಭೇಟಿ ನೀಡಿದ್ದಾರೆ. ಹಾಗಾಗಿ ಅಲ್ಲಿ ಅವರನ್ನು ಭೇಟಿಯಾಗಿ ಮಾತನಾಡುವ ಅವಕಾಶ ‘ಸಿಟಾಡೆಲ್​’ ತಂಡಕ್ಕೆ ಸಿಕ್ಕಿದೆ.

ಎಲ್ಲರೂ ಖುಷಿಯಿಂದ ದ್ರೌಪದಿ ಮುರ್ಮು ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ವರುಣ್​ ಧವನ್ (Varun Dhawan) ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವರುಣ್​ ಧವನ್​ ಅಪ್​ಲೋಡ್​ ಮಾಡಿರುವ ಫೋಟೋವನ್ನು ಸಮಂತಾ ರುತ್​ ಪ್ರಭು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ‘ಮೇಡಂ ಪ್ರೆಸಿಡೆಂಟ್​’ ಎಂಬ ಕ್ಯಾಪ್ಷನ್​ ಜೊತೆಗೆ ಕೈ ಮುಗಿಯುತ್ತಿರುವ ಎಮೋಜಿಯನ್ನು ಅವರು ಪೋಸ್ಟ್​ ಮಾಡಿದ್ದಾರೆ. ‘ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರನ್ನು ಸೆರ್ಬಿಯಾದಲ್ಲಿ ಭೇಟಿಯಾಗುವ ಅವಕಾಶ ನಮ್ಮ ಸಿಟಾಡೆಲ್​ ತಂಡಕ್ಕೆ ಸಿಕ್ಕಿತು. ಅವರನ್ನು ಭೇಟಿಯಾಗಿದ್ದಕ್ಕೆ ಹೆಮ್ಮೆ ಮತ್ತು ಖುಷಿ ಆಗಿದೆ’ ಎಂದು ವರುಣ್​ ಧವನ್​ ಅವರು ಬರೆದುಕೊಂಡಿದ್ದಾರೆ.

ಅಮೇಜಾನ್​ ಪ್ರೈಂ ವಿಡಿಯೋದಲ್ಲಿ ಬಿಡುಗಡೆ ಆಗಿರುವ ‘ಸಿಟಾಡೆಲ್​’ ವೆಬ್ ಸರಣಿಯಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್​ ಮ್ಯಾಡನ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಅದರ ಇಂಡಿಯನ್​ ವರ್ಷನ್​ನಲ್ಲಿ ಸಮಂತಾ ರುತ್​ ಪ್ರಭು ಮತ್ತು ವರುಣ್​ ಧವನ್​ ಅವರು ತೆರೆ ಹಂಚಿಕೊಂಡಿದ್ದಾರೆ. ಇಂಡಿಯನ್​ ವರ್ಷನ್​ ಇನ್ನಷ್ಟೇ ಬಿಡುಗಡೆ ಆಗಬೇಕಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!