ದಿನಭವಿಷ್ಯ| ಆಸ್ತಿ ಖರೀದಿಸುವವರಿಗೆ ಅನುಕೂಲಕರ ವಾತಾರವಣ

ಮೇಷ
ನಿಮ್ಮ ಕಾರ್ಯಗಳ ಪರಾಮರ್ಶೆಯಲ್ಲಿಯೇ ದಿನ ಕಳೆಯುವುದು. ಎಲ್ಲಿ ತಪ್ಪಾಯಿತು ಎಂಬ ಗೊಂದಲ ಕಾಡಲಿದೆ. ನಿಮ್ಮ ಮಾತು ಆಪ್ತರ ಮನ ನೋಯಿಸೀತು.

ವೃಷಭ
ಹಣ ಗಳಿಕೆಗಾಗಿ ಹಪಾಹಪಿ, ಅಡ್ಡಿಮಾರ್ಗ ಬೇಡ. ಪ್ರಾಮಾಣಿಕ ಹಾದಿಯೇ ನಿಮಗೆ ಒಳಿತು ತರುವುದು. ಆಹಾರ ಶೈಲಿ ಆರೋಗ್ಯಕರವಾಗಿರಲಿ.

ಮಿಥುನ
ಉದ್ಯೋಗಾಕಾಂಕ್ಷಿಗಳಿಗೆ ಶುಭ ಬೆಳವಣಿಗೆ ಉಂಟಾದೀತು. ಪ್ರಾಮಾಣಿಕ ಪ್ರಯತ್ನ ಮಾಡಿ. ಎಲ್ಲವೂ ನಿಮಗೆ ಅನುಕೂಲಕರ ಆಗುವುದು.

ಕಟಕ
ನಿಮ್ಮ ಕಾರ್ಯದಲ್ಲಿ, ನಡೆನುಡಿಯಲ್ಲಿ ಸಹನೆ ಕಾಯ್ದುಕೊಳ್ಳಿ. ಇಲ್ಲವಾದರೆ ಅನಪೇಕ್ಷಿತ ಪರಿಸ್ಥಿತಿ ಎದುರಿಸುವಿರಿ. ಬಂಧುಗಳಿಂದ ಕಿರಿಕಿರಿ ಅನುಭವಿಸುವಿರಿ.

ಸಿಂಹ
ನಿಮ್ಮ ಪ್ರೀತಿಪಾತ್ರರಿಗಾಗಿ ತ್ಯಾಗ ಮಾಡುವ ಮನೋಭಾವ ತೋರುವಿರಿ. ಭಾವನಾತ್ಮಕ ಒತ್ತಡವನ್ನು ತಾಳಿಕೊಳ್ಳಿ. ವಿವೇಕದಿಂದ ನಿರ್ಧರಿಸಿ.

ಕನ್ಯಾ
ವೃತ್ತಿಯಲ್ಲಿ ಹೊಸ ಹೊಣೆಗಾರಿಕೆ. ಕೆಲವರ ಅಸಹಕಾರದಿಂದ ಅದು ನಿಮಗೆ ಕಷ್ಟವಾದೀತು. ಅಂಜದಿರಿ, ಮುಂದಕ್ಕೆ ಎಲ್ಲವೂ ನಿಮಗೆ ಪೂರಕವಾಗುವುದು.

ತುಲಾ
ನಿಮ್ಮ ಪ್ರೀತಿಪಾತ್ರರ ಜತೆ ಕಳೆಯುವ ಅವಕಾಶ. ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿ ಯಾಗುವಿರಿ. ದುಬಾರಿ ವಸ್ತು ಖರೀದಿಯ ಸಾಧ್ಯತೆ.

ವೃಶ್ಚಿಕ
ಆಸ್ತಿಪಾಸ್ತಿ ಖರೀದಿಸಲು ಯೋಜಿಸಿದ್ದರೆ ನಿಮಗೆ ಅನುಕೂಲಕರ ವಾತಾವರಣ ಸೃಷ್ಟಿ. ಹಣದ ಮುಗ್ಗಟ್ಟು ಕಾಡದು. ಕೌಟುಂಬಿಕ ಸಹಕಾರ.

ಧನು
ಕೆಲಸದ ಒತ್ತಡದಲ್ಲಿ ಇತರರ ಮನಸ್ಸಿಗೆ ನೋವಾಗುವಂತೆ ನಡಕೊಳ್ಳದಿರಿ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ವಸ್ತು ಖರೀದಿ ಸಂಭವ.

ಮಕರ
ನಿಮ್ಮ ಸುತ್ತಲಿನ ಪರಿಸ್ಥಿತಿ ನಿಮಗೆ ಪ್ರತಿಕೂಲವಾಗಿ ಕಂಡುಬಂದರೂ ಹಾಗೇನಿಲ್ಲ. ದಿನದಂತ್ಯಕ್ಕೆ ನಿಮಗೇನೂ ಹಾನಿ ತಟ್ಟದು. ಮನಸ್ಸಿಗೆ ನಿರಾಳತೆ ಒದಗಲಿದೆ.

ಕುಂಭ
ವೃತ್ತಿಯ ಜಾಗದಲ್ಲಿ ಸ್ವಲ್ಪ ಮಟ್ಟಿನ ಕೋಲಾಹಲ ಉಂಟಾದೀತು. ಅದರಲ್ಲಿ ನೀವು ಸಿಲುಕಿಕೊಳ್ಳದಂತೆ ನೋಡಿಕೊಳ್ಳಿ. ಇತರರ ವಿಷಯದಲ್ಲಿ ತಲೆ ಹಾಕದಿರಿ.

ಮೀನ
ಮಾಡಬೇಕಾದ ಕಾರ್ಯ ಬೇಗನೆ ಮಾಡಿಮುಗಿಸಿ. ಮುಂದೂಡದಿರಿ. ಹೊಸ ವ್ಯವಹಾರಕ್ಕೆ ಹಾದಿ ತೆರೆಯುವುದು. ಮುಂದುವರಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!