Sunday, October 1, 2023

Latest Posts

ದಿನಭವಿಷ್ಯ| ಕೆಲಸದ ಒತ್ತಡ ಹೆಚ್ಚಿದರೂ ಸಕಾಲದಲ್ಲಿ ಅದನ್ನು ಮುಗಿಸುವಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಇಂದು ಕೆಲಸಗಳೆಲ್ಲ  ನಿಧಾನ ಗತಿಯಲ್ಲಿ ಸಾಗುವವು. ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಇದೆ. ಅದನ್ನು ನೀಗಿಸಿಕೊಳ್ಳಿ.  ಕೌಟುಂಬಿಕ ಸಮಸ್ಯೆ.

ವೃಷಭ
ಉದ್ಯೋಗದಲ್ಲಿ ನಿಮಗೆ ಅನುಕೂಲಕರ ಪರಿಸ್ಥಿತಿ. ಹಣಕಾಸು ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸುವಿರಿ. ಕೌಟುಂಬಿಕ ಸಹಕಾರ. ಮಿತ್ರರ ನೆರವು.

ಮಿಥುನ
ಉದಾಸೀನತೆ ಬಿಟ್ಟು ಕೆಲಸ ನಿರ್ವಹಿಸಬೇಕು. ಇಲ್ಲವಾದರೆ ಎಲ್ಲರಿಂದ ಟೀಕೆ ಕೇಳುವಿರಿ. ಪ್ರೀತಿಯ ವಿಷಯದಲ್ಲಿ ನಿಮ್ಮ ಭಾವನೆಗೆ ಸೂಕ್ತ ಪ್ರತಿಸ್ಪಂದನೆ.

ಕಟಕ
ನಿಮ್ಮ ಪಾಲಿಗೆ  ಪೂರಕ ದಿನ. ಉದ್ಯೋಗದಲ್ಲಿ  ನಿಮ್ಮ ನಿರೀಕ್ಷೆ ಈಡೇರಿಕೆ.  ಆಪ್ತರ ಜತೆಗಿನ ಸಂಬಂಧ  ಇನ್ನಷ್ಟು ದೃಢ. ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಸ್ಥಿರ.

ಸಿಂಹ
ನೀವು ಮಾಡುವ ಯಾವುದೇ ಕಾರ್ಯವು ಇತರರಿಂದ ಮೆಚ್ಚುಗೆ ಪಡೆಯುತ್ತದೆ. ಕುಟುಂಬ ಸದಸ್ಯರ ಜತೆ ಅನವಶ್ಯ ಜಗಳ ಕಾಯಬೇಡಿ.

ಕನ್ಯಾ
ಹೆಚ್ಚು ಕೆಲಸ, ಅಧಿಕ ಒತ್ತಡ. ದಿನದಂತ್ಯಕ್ಕೆ ದೈಹಿಕವಾಗಿ ಬಸವಳಿ ಯುವಿರಿ. ಹಣಕ್ಕೆ ಸಂಬಂಧಿಸಿ ಕಷ್ಟಕ್ಕೆ ಸಿಲುಕುವಿರಿ. ಹಿತಮಿತ ಆಹಾರ ಸೇವಿಸಿ.

ತುಲಾ
ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಒತ್ತಡದಿಂದಾಗಿ ತಪ್ಪುಗಳಾಗಬಹುದು. ಅದರಿಂದ ಚಿಂತೆ ಹೆಚ್ಚಬಹುದು.

ವೃಶ್ಚಿಕ
ಎಂದಿಗಿಂತ ಹೆಚ್ಚು ಕೆಲಸ ಮಾಡಬೇಕಾಗಬಹುದು. ಸಕಾಲದಲ್ಲಿ ಕಾರ್‍ಯ ಪೂರೈಸಲು ಅಡ್ಡಿಗಳು. ಖರ್ಚೂ ಅಧಿಕ. ನಿಮ್ಮ ಆರೋಗ್ಯಕ್ಕೂ ಹೆಚ್ಚು ಗಮನ ಕೊಡಿ.

ಧನು
ವೃತ್ತಿಯಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ.  ಎಲ್ಲರ ಗಮನ ಸೆಳೆಯುವ ಕಾರ್ಯ ಎಸಗುತ್ತೀರಿ. ಆರೋಗ್ಯದ ಚಿಂತೆ ನಿವಾರಣೆ.

ಮಕರ
ಕೆಲಸದ ಒತ್ತಡ ಹೆಚ್ಚಿದರೂ ಸಕಾಲದಲ್ಲಿ ಅದನ್ನು ಮುಗಿಸುವಿರಿ. ಕೌಟುಂಬಿಕ ವೈಮನಸ್ಸು ನಿವಾರಣೆ. ಇದರಿಂದ ಮಾನಸಿಕ ನಿರಾಳತೆ. ಆರ್ಥಿಕ ಸುಸ್ಥಿತಿ.

ಕುಂಭ
ನಿಮ್ಮ ನಿಲುವಿನಲ್ಲಿ ಬದಲಾವಣೆ ತರುವ ಪ್ರಸಂಗ ಸಂಭವ. ವೃತ್ತಿಯಲ್ಲಿ ಏರು ಕಾಣುವಿರಿ. ಆರ್ಥಿಕ ಪ್ರಗತಿ. ಕೌಟುಂಬಿಕ ಸಹಕಾರ.

ಮೀನ
ಕೆಲಸದಲ್ಲಿ ನಿಮ್ಮಿಂದ ತಪ್ಪು ಘಟಿಸಬಹುದು. ಎಚ್ಚರಿಕೆಯಿಂದ ಕಾರ್‍ಯ ನಿರ್ವಹಿಸಿ. ಆಹಾರ ಸೇವನೆ ಸೂಕ್ತ ಕಾಲದಲ್ಲಿರಲಿ. ಆರೋಗ್ಯ ಕಾಯ್ದುಕೊಳ್ಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!