Monday, October 2, 2023

Latest Posts

ಆರೆಸ್ಸೆಸ್ ಕಾರ್ಯಕರ್ತ, ಅಂಕೋಲಾದ ಹಿರಿಯ ಉದ್ಯಮಿ ಪುಂಡಲೀಕ ಪ್ರಭು ವಿಧಿವಶ

ಹೊಸ ದಿಗಂತ ವರದಿ , ಅಂಕೋಲಾ :

ಅಂಕೋಲಾದ ಹಿರಿಯ ಉದ್ಯಮಿ , ಆರೆಸ್ಸೆಸ್ ಕಾರ್ಯಕರ್ತ , ಸಮಾಜ ಸೇವಕ ಪುಂಡಲೀಕ ಪಿ. ಪ್ರಭು(72) ಅವರು ಬುಧವಾರ ರಾತ್ರಿ 9 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪ್ರಭು ಸಮೂಹ ಸಂಸ್ಥೆಗಳ ಮುಖ್ಯಸ್ಥರಲ್ಲೋರ್ವರಾಗಿದ್ದ ಇವರು ಪ್ರಭು ಪೆಟ್ರೊಲ್ ಬಂಕ್ ಮಾಲಕರು. ಕಿರಾಣಿ ವರ್ತಕರೂ ಆಗಿದ್ದರು. ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾಗಿ, ಅಂಕೋಲಾ ಓರಿಯಂಟಲ್ ಸೊಸೈಟಿ ಅಧ್ಯಕ್ಷರಾಗಿ, ಶ್ರೀ ವೀರವಿಠ್ಠಲ ಮಠ ಕಮಿಟಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಪತ್ನಿ, ಇಬ್ಬರು ಪುತ್ರರು, ಸಹೋದರರು , ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಗುರುವಾರ ಬೆಳಿಗ್ಗೆ 11.30 ಗಂಟೆಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ. ಮೃತರಿಗೆ ಶ್ರೀ ವೀರವಿಠ್ಠಲ ಮಠ ಕಮಿಟಿ ಪರವಾಗಿ ಕಾರ್ಯದರ್ಶಿ ಮಾರುತಿ ಕೆ. ನಾಯಕ ಮತ್ತು ಸರ್ವ ಸದಸ್ಯರು, ವ್ಯಾಪಾರಸ್ಥರ ಸಂಘ ಸಂತಾಪ ಸೂಚಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!