ದಿನಭವಿಷ್ಯ| ವೃತ್ತಿಗೆ ಪ್ರಾಧಾನ್ಯತೆ ಕೊಟ್ಟು ಕುಟುಂಬ ನಿರ್ಲಕ್ಷಿಸದಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ವೃತ್ತಿಕ್ಷೇತ್ರದಲ್ಲಿ ಎಲ್ಲವೂ ಸುಗಮ. ಯಾವುದೇ ಪ್ರತಿಕೂಲ ಬೆಳವಣಿಗೆ ಇಲ್ಲ. ಖಾಸಗಿ ಬದುಕಿನಲ್ಲಿ ಮಾತ್ರ ನಿಮ್ಮ ಲೆಕ್ಕಾಚಾರ ತಪ್ಪಾಗಬಹುದು.

ವೃಷಭ
ವೃತ್ತಿಗೆ ಪ್ರಾಧಾನ್ಯತೆ ಕೊಟ್ಟು ಕುಟುಂಬ ನಿರ್ಲಕ್ಷಿಸಬೇಡಿ. ಪ್ರೀತಿಪಾತ್ರರಿಗೆ ನೋವು ನೀಡಬೇಡಿ. ಅವರ ಬೇಕುಬೇಡಗಳಿಗೆ ಸ್ಪಂದಿಸಿ.

ಮಿಥುನ
ಕೌಟುಂಬಿಕ ಚಿಂತೆ. ಭಾವುಕತೆಯು ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸದಿರಲಿ. ಕೆಲವು ವಿಷಯದಲ್ಲಿ ಸತ್ಯ ಅರಿಯಲು ಯತ್ನಿಸಿರಿ.

ಕಟಕ
ಅತಿಯಾದ ಭಾವುಕತೆ ನಿಮ್ಮ ವಿವೇಕ ಮರೆಸಬಹುದು, ಇದರಿಂದ ತೊಂದರೆಗೆ ಸಿಲುಕಿಕೊಳ್ಳುವಿರಿ. ಸಮಸ್ಯೆಗೆ ಪ್ರಾಕ್ಟಿಕಲ್ ಪರಿಹಾರ ಹುಡುಕಿರಿ.

ಸಿಂಹ
ಆತ್ಮೀಯ ಸಂಬಂಧ ನಿಮ್ಮನ್ನು ಕೋಟಲೆಗೆ ಸಿಲುಕಿಸುವುದು. ಪ್ರೀತಿಯ ವಿಷಯದಲ್ಲಿ ಅಂಧರಂತೆ ವರ್ತಿಸದಿರಿ. ಎಲ್ಲವನ್ನೂ ಕಣ್ಣು ಬಿಟ್ಟು ಅವಲೋಕಿಸಿ.

ಕನ್ಯಾ
ನಿಮ್ಮ ಉದ್ದೇಶ ಸಾಧಿಸಲು ಅಡ್ಡ ದಾರಿ ಹಿಡಿಯುವ ಮನಸ್ಸು ಮೂಡಬಹುದು. ಅದಕ್ಕೆ ನಿಯಂತ್ರಣ ಹಾಕಿ. ಪ್ರಬುದ್ಧತೆಯಿಂದ ವರ್ತಿಸಿ.

ತುಲಾ
ಕೌಟುಂಬಿಕ ಕಟ್ಟುಪಾಡು ಮೀರಲಾಗದೆ ಕಷ್ಟ ಅನುಭವಿಸುವಿರಿ, ಎಚ್ಚರದಿಂದ ಹೆಜ್ಜೆಯಿಡಿ. ನಿಮ್ಮ ಕಾರ್ಯಶೈಲಿ ಬದಲಿಸಿಕೊಳ್ಳಲು ಗಮನ ಕೊಡಿ.

ವೃಶ್ಚಿಕ
ಇಂದು ಕೆಲ ವಿಷಯಗಳಲ್ಲಿ ಏರುಪೇರು ಸಂಭವ. ಭಾವನಾತ್ಮಕ ತಾಕಲಾಟ. ಆಪ್ತೇಷ್ಟರಿಂದ ಭಾವನಾತ್ಮಕ ಬೆಂಬಲ ಪಡೆಯುವಿರಿ. ಆರ್ಥಿಕ ಅಡಚಣೆ ಕಾಡಬಹುದು.

ಧನು
ನಿಮ್ಮ ಭಾವುಕ ನಿರ್ಧಾರ ನಿಮಗೆ ಪ್ರತಿಕೂಲ ಪರಿಣಾಮ ತಂದೀತು. ಕೌಟುಂಬಿಕ ಭಿನ್ನಮತ ಇತ್ಯರ್ಥದ ವಿಷಯದಲ್ಲಿ ಯಾರೆಡೆಗೂ ತಾರತಮ್ಯ ತೋರದಿರಿ.

ಮಕರ
ನಿಮ್ಮ ಮನದಲ್ಲಿ ಕಾಡುವ ಸಮಸ್ಯೆಗೆ ಇಂದು ಪರಿಹಾರ ದೊರಕಬಹುದು. ಅನುಭವಿಗಳ ಹಿತವಚನಕ್ಕೆ ಕಿವಿಗೊಡಿ. ಆರ್ಥಿಕ ಸ್ಥಿತಿ ಸುಧಾರಣೆ.

ಕುಂಭ
ಹೆಚ್ಚು ಉತ್ಸಾಹದ ದಿನ. ಕೌಟುಂಬಿಕ ಪರಿಸರದಲ್ಲಿ ಸಂತೋಷ ಕಾಣುವಿರಿ. ಬಂಧುಗಳಿಂದ ನಿಮಗೆ ಪೂರಕ ಸುದ್ದಿ ಕೇಳುವಿರಿ. ಅನಿರೀಕ್ಷಿತ ಖರ್ಚು ಹೆಚ್ಚಬಹುದು.

ಮೀನ
ಸಂಬಂಧಗಳನ್ನು ನಿಭಾಯಿಸುವಲ್ಲಿ ಎಚ್ಚರ ವಹಿಸಿ. ತಮ್ಮನ್ನು ಕಡೆಗಣಿಸಿದ ಭಾವನೆ ಆಪ್ತರಿಗೆ ತಟ್ಟದಂತೆ ನೋಡಿಕೊಳ್ಳಿ. ಎಲ್ಲರ ಸಹಕಾರ ಪಡೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!