Sunday, October 1, 2023

Latest Posts

ದಿನಭವಿಷ್ಯ| ಕೆಲವು ವಿಷಯಗಳಲ್ಲಿ ಅತಿಯಾದ ಉದ್ವಿಗ್ನತೆ ಪ್ರದರ್ಶಿಸುವಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನೀವಿಂದು ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ. ವೃತ್ತಿಯಲ್ಲಿ ಈಗಿರುವ ಪರಿಸ್ಥಿತಿಗೆ ಹೊಂದಿಕೊಳ್ಳಲು ಪ್ರಯತ್ನಿಸಬೇಕು.

ವೃಷಭ
ಒತ್ತಡದ ದಿನ. ದಿನದಂತ್ಯದೊಳಗೆ ಕೆಲಸ ಮುಗಿಸಬೇಕಾದ ಅನಿವಾರ್ಯತೆ. ಆತ್ಮವಿಶ್ವಾಸವಿರಲಿ. ಕೌಟುಂಬಿಕ ಅಸಮಾಧಾನ.

ಮಿಥುನ
ಸಂತೋಷದ ದಿನ. ಸವಾಲಿನ ಕೆಲಸವನ್ನು ಸಫಲವಾಗಿ ಮುಗಿಸುವಿರಿ. ವ್ಯವಹಾರದಲ್ಲಿ ಲಾಭ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು.

ಕಟಕ
ನಿಮ್ಮ ಬದುಕಿನಲ್ಲಿ ಹೊಸತನ ಬರಲಿದೆ. ಹಳೆಯ ಚಿಂತೆಗಳು ಮಾಯವಾಗಲಿವೆ. ಆತ್ಮೀಯ ಸಂಬಂಧ ವೊಂದು ಹೆಚ್ಚು ಗಾಢವಾಗಲಿದೆ.

ಸಿಂಹ
ಕೆಲವು ವಿಷಯಗಳಲ್ಲಿ ಅತಿಯಾದ ಉದ್ವಿಗ್ನತೆ ಪ್ರದರ್ಶಿಸುವಿರಿ. ಮನಸ್ಸನ್ನು ತಹಬಂದಿಗೆ ತನ್ನಿರಿ. ವೃತ್ತಿಯಲ್ಲಿ ಸಮಸ್ಯೆ ಉಂಟಾದರೂ ಪರಿಹಾರ ಕಾಣುವುದು.

ಕನ್ಯಾ
ಅತಿಯಾದ ಹೊಣೆಗಾರಿಕೆ. ಹಾಗಾಗಿ ದಿನದಂತ್ಯಕ್ಕೆ ಬಸವಳಿಯುವಿರಿ. ನಿಮ್ಮ ಸಂಗಾತಿಯ ಇಚ್ಛೆಯಂತೆ  ನಡಕೊಳ್ಳಿ. ಅವರನ್ನು ವಿರೋಧಿಸಬೇಡಿ.

ತುಲಾ
ಎಲ್ಲದಕ್ಕೂ ಅತಿ ಭಾವುಕವಾಗಿ ಪ್ರತಿಕ್ರಿಯಿಸದಿರಿ. ಪ್ರಾಕ್ಟಿಕಲ್ ಆಗಿಯೂ ಯೋಚಿಸಿರಿ. ವಿದ್ಯಾರ್ಥಿಗಳು ಗಂಭೀರ ಅಧ್ಯಯನ ನಡೆಸಬೇಕು.

ವೃಶ್ಚಿಕ
ವೃತ್ತಿಯಲ್ಲೂ, ಖಾಸಗಿ ಬದುಕಲ್ಲೂ ಒತ್ತಡದ ಬೆಳವಣಿಗೆ. ತಪ್ಪು ಭಾವನೆಯಿಂದ ವಾಗ್ವಾದ ನಡೆದೀತು. ಒತ್ತಡದಿಂದ ತಲೆನೋವು ಅನುಭವಿಸಬೇಕಾದೀತು.

ಧನು
ಇಂದು ಒತ್ತಡದ ದಿನ. ಕೆಲವರು ನಿಮ್ಮನ್ನು ಕೆಳಗೆ ತಳ್ಳಲು ಯತ್ನಿಸುವರು. ಆತ್ಮೀಯರ ಜತೆ ಸಂವಹನ ಸಮಸ್ಯೆ. ಮುನಿಸು, ಅಸಮಾಧಾನ ಸಂಭವ.

ಮಕರ
ಕೆಲಸದಲ್ಲಿ ಏಕಾಗ್ರತೆ ಮೂಡದು. ಹಾಗಾಗಿ ಕಾರ್ಯ ಅಪೂರ್ಣ. ಮನಸ್ಸನ್ನು ಉಲ್ಲಸಿತಗೊಳಿಸುವ ವ್ಯಕ್ತಿಗಳ ಸಂಗದಲ್ಲಿ ಕಾಲ ಕಳೆಯಿರಿ.

ಕುಂಭ
ಸಣ್ಣ ಕಾರಣಕ್ಕೂ ಅತಿಯಾಗಿ ಪ್ರತಿಕ್ರಿಯೆ ತೋರಬೇಡಿ. ಇಲ್ಲವಾದರೆ ಮಾನಸಿಕ ಶಾಂತಿ ಕಳಕೊಳ್ಳುವಿರಿ. ಇತರರನ್ನು ಅರ್ಥೈಸಿ ಹೊಂದಿಕೊಳ್ಳಿ.

ಮೀನ
ಮನೆಯಲ್ಲಿ ಎಲ್ಲರ ಜತೆ ಹೊಂದಿಕೊಂಡು ಹೋಗಿ. ಕೆಲವರ ವರ್ತನೆ ಕಿರಿಕಿರಿ ಎನಿಸಿದರೂ ಸಹಿಸಿಕೊಳ್ಳಬೇಕು. ಆರ್ಥಿಕ ಒತ್ತಡ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!