Friday, September 29, 2023

Latest Posts

ಹವಾಯಿ ದ್ವೀಪದಲ್ಲಿ ಕಾಳ್ಗಿಚ್ಚು: ಸಾವಿನ ಸಂಖ್ಯೆ 53ಕ್ಕೆ ಏರಿಕೆ, ಕಟ್ಟಡಗಳು ಸುಟ್ಟು ಭಸ್ಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕದ ಹವಾಯಿ ದ್ವೀಪದ ಅರಣ್ಯದಲ್ಲಿ ಭೀಕರ ಕಾಳ್ಗಿಚಿಗೆ ಬಲಿಯಾದವರ ಸಂಖ್ಯೆ 53ಕ್ಕೆ ತಲುಪಿದೆ. ಹಲವು ಪ್ರದೇಶಗಳನ್ನು ಸುಟ್ಟು ಬೂದಿಯಾಗಿದ್ದು, ಹವಾಯಿ ದ್ವೀಪದಲ್ಲಿ ಪ್ರವಾಸಿಗರು ಭೇಟಿ ನೀಡುವ ಎಲ್ಲಾ ಸ್ಥಳಗಳು ಕಪ್ಪು ಅವಶೇಷಗಳಾಗಿ ಮಾರ್ಪಟ್ಟಿವೆ. ಈ ಬೆಂಕಿಯ ಪರಿಣಾಮದಿಂದಾಗಿ ಬಂದರಿನಲ್ಲಿದ್ದ ದೋಣಿಗಳು ಸುಟ್ಟು ಕರಕಲಾಗಿವೆ.

ಹವಾಯಿಯ ಕಿಹೆಯಲ್ಲಿ ಬುಧವಾರ ತಡರಾತ್ರಿ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಕಳೆದ ಮೂರು ದಿನಗಳಿಂದ ಕಾಳ್ಗಿಚ್ಚು ಯಮಸ್ವರೂಪಿಯಾಗುತ್ತಿದ್ದು, ಜೀವಗಳ ಜೊತೆಗೆ ಕಟ್ಟಡಗಳನ್ನೂ ಸುಟ್ಟು ಬೂದಿ ಮಾಡಿದೆ. ಇದುವರೆಗೂ 1,000 ಕ್ಕೂ ಹೆಚ್ಚು ಕಟ್ಟಡಗಳು ಸುಟ್ಟು ಬೂದಿಯಾಗಿವೆ ಎಂದು ಹವಾಯಿ ಗವರ್ನರ್ ಜೋಶ್ ಗ್ರೀನ್ ಖಚಿತಪಡಿಸಿದರು.

Maui fire deaths surge to 53, likely to go higher, governor says. Over  1,000 structures burned

ಚಂಡಮಾರುತದ ಬಲವಾದ ಗಾಳಿಯಿಂದಾಗಿ ಬೆಂಕಿ ವೇಗವಾಗಿ ಹರಡಿತು. ಕಾಳ್ಗಿಚ್ಚಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಕೆಲವರು ಸಮುದ್ರಕ್ಕೆ ಹಾರಿದರು. ಕಟ್ಟಡಗಳಿಗೆ ಬೆಂಕಿ ವ್ಯಾಪಿಸುತ್ತಿದ್ದಂತೆ ಜೀವ ಭಯದಿಂದ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಬೆಂಕಿಯ ವಿಷಕಾರಿ ಹೊಗೆಯಿಂದಾಗಿ ವಾಂತಿ ಮಾಡಿಕೊಂಡು ಹಲವರು ಸಾವನ್ನಪ್ಪಿದ್ದಾರೆ.

Maui fire: 53 dead and more than 1,000 structures burned | CTV News

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!