ದಿನಭವಿಷ್ಯ| ಕೆಲಸ ಮತ್ತು ಕುಟುಂಬದ ಮಧ್ಯೆ ಸಮನ್ವಯ ಸಾಧಿಸಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಕೆಲವರ ನಡೆನುಡಿ ನಿಮ್ಮ ಮನಸ್ಸು ಕದಡಬಹುದು. ಅವರೊಡನೆ ಸಂಘರ್ಷಕ್ಕೆ ಇಳಿಯ ಬೇಡಿ, ಹೊಂದಾಣಿಕೆ ಮುಖ್ಯ. ವೃತ್ತಿಯಲ್ಲಿ ಪ್ರಮುಖ ಯಶಸ್ಸು.

ವೃಷಭ
ಕುಟುಂಬ ಸದಸ್ಯರು ನಿಮ್ಮಿಂದ ಬಹಳಷ್ಟನ್ನು ನಿರೀಕ್ಷಿಸುತ್ತಾರೆ. ಅವರ ಭಾವನೆಗೆ ಸ್ಪಂದಿಸಿರಿ.ಆದರೆ ಖರೀದಿ ಉತ್ಸಾಹದಲ್ಲಿ ಖರ್ಚು ಹೆಚ್ಚುವ ಸಾಧ್ಯತೆಯಿದೆ.

ಮಿಥುನ
ಬಂಧುಗಳಿಂದ ಶುಭಸುದ್ದಿ. ಆತ್ಮೀಯ ಬಾಂಧವ್ಯ ವೃದ್ಧಿ. ಕಾನೂನು ಖಟ್ಲೆ ಇದ್ದರೆ ನಿಮ್ಮ ಪರವಾಗಿ ಇತ್ಯರ್ಥ ಗೊಳ್ಳುವುದು. ಸ್ನೇಹಿತರ ನೆರವು ಲಭ್ಯ.

ಕಟಕ
ವೃತ್ತಿಯಲ್ಲಿ ಅವಕಾಶವೂ ಹೆಚ್ಚು, ಅಡ್ಡಿಗಳೂ ಹೆಚ್ಚು. ಹೊಂದಾಣಿಕೆ ಮಾಡಿಕೊಂಡು ನಡೆದರೆ ಯಶಸ್ಸು ಗಳಿಸುವಿರಿ. ವಾಗ್ವಾದಕ್ಕೆ ಇಳಿಯಬೇಡಿ.

ಸಿಂಹ
ವ್ಯವಹಾರವನ್ನು ವಿಸ್ತರಿಸಲು ಬಯಸುವವರಿಗೆ ಪೂರಕ ಬೆಳವಣಿಗೆ.  ಆರ್ಥಿಕ ಅಡಚಣೆ ಉಂಟಾದರೂ ಸೂಕ್ತ ನೆರವು ಒದಗುವುದು.

ಕನ್ಯಾ
ಭಾವನಾತ್ಮಕ ಏರು ಪೇರು. ಆಪ್ತರೊಂದಿಗೆ ಮುನಿಸು. ಸಾಂತ್ವನದ ಮಾತುಗಳು ಸಮಾ ಧಾನ ತರಬಹುದು. ಆರ್ಥಿಕವಾಗಿಯೂ ಒತ್ತಡ.

ತುಲಾ
ಸಂಗಾತಿ ಜತೆಗಿನ ವಿವಾದದಲ್ಲಿ ಶಾಂತ ಮನಸ್ಸಿನಿಂದ ವರ್ತಿಸಿ. ಅದರಿಂದ ಬಿಕ್ಕಟ್ಟು ಶಮನ. ವೃತ್ತಿಯಲ್ಲಿ ಒತ್ತಡ ಅಧಿಕ. ಹೊಣೆಗಾರಿಕೆ ಹೆಚ್ಚು.

ವೃಶ್ಚಿಕ
ಕೌಟುಂಬಿಕ ಸೌಹಾರ್ದ. ಆರ್ಥಿಕವಾಗಿ ಉತ್ತಮ ಸ್ಥಿತಿ. ವೃತ್ತಿಯಲ್ಲಿ ಮನ್ನಣೆ ಪಡೆಯುವ ಸಾಧನೆ ತೋರುವಿರಿ. ಸಮೀಪ ಬಂಧುಗಳಿಂದ ಶುಭ ಸುದ್ದಿ.

ಧನು
ಕೌಟುಂಬಿಕ ಪರಿಸರ ಸೌಹಾರ್ದಯುತ. ಉತ್ತಮ ಸಹಕಾರ. ಉದ್ದೇಶಿಸಿದ ಕಾರ್ಯ ಸಫಲ. ಕುಟುಂಬದ ಹಿರಿಯರ ಆರೋಗ್ಯಕ್ಕೆ ಗಮನ ಕೊಡಿ.

ಮಕರ
ಇಂದು ಅದೃಷ್ಟವು ನಿಮಗೆ ಪೂರಕವಾಗಿದೆ. ಧನಲಾಭ. ಪ್ರೀತಿಯಲ್ಲಿ ಯಶಸ್ಸು. ನಿಮ್ಮ ಕಾರ್ಯಕ್ಷೇತ್ರದಲ್ಲಿ ಎಲ್ಲವೂ ಸುಗಮವಾಗಿ ಸಾಗುವುದು.

ಕುಂಭ
ಆರ್ಥಿಕವಾಗಿ ಪೂರಕ ದಿನ. ಧನ ಲಾಭ.  ಹಣ ಗಳಿಕೆಯ ಹೊಸ ಹಾದಿ ತೋರಿಬರುವುದು. ಉದ್ಯೋಗಿಗಳಿಗೆ ವರಮಾನ ಹೆಚ್ಚಳದ  ಸಂಕೇತ ದೊರಕುವುದು.

ಮೀನ
ಕೆಲಸ ಮತ್ತು ಕುಟುಂಬದ ಮಧ್ಯೆ ಸಮನ್ವಯ ಸಾಧಿಸಿ. ಯಾವುದನ್ನೂ ಕಡೆಗಣಿಸಬೇಡಿ. ಇತರರ ಜತೆ ಕಠಿಣವಾಗಿ ವ್ಯವಹರಿಸಬೇಡಿ. ಮಾತು ಮೃದುವಾಗಿರಲಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!