Friday, September 29, 2023

Latest Posts

ದಿನಭವಿಷ್ಯ| ಅರೆಕಾಲಿಕ ಉದ್ಯೋಗ ಮಾಡುವವರು ಖಾಯಂ ಉದ್ಯೋಗ ಪಡೆಯುವ ಸಾಧ್ಯತೆಯಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಫಲಪ್ರದ ದಿನ. ಕಾರ್ಯಗಳೆಲ್ಲ ಸಫಲ. ಖಾಸಗಿ ಬದುಕಲ್ಲಿ ಪ್ರಮುಖ ನಿರ್ಧಾರ ತಾಳಬೇಕಾದ ಪ್ರಸಂಗ ಒದಗಲಿದೆ. ಕೌಟುಂಬಿಕ ಸಂತೋಷ, ಸಮಾಧಾನ.

ವೃಷಭ
ವೃತ್ತಿಯಲ್ಲಿ ಪ್ರಮುಖ ನಿರ್ಧಾರ ತಾಳಬೇಡಿ. ಅದು ನಿಮಗೆ ಪೂರಕ ಫಲಿತಾಂಶ ತರಲಾರದು. ಕಾರ್ಯದಲ್ಲಿ ತಪ್ಪಾದೀತು, ಎಚ್ಚರ ವಹಿಸಿರಿ.

ಮಿಥುನ
ಅರೆಕಾಲಿಕ ಉದ್ಯೋಗ ಮಾಡುವವರು ಖಾಯಂ ಉದ್ಯೋಗ ಪಡೆಯುವ ಸಾಧ್ಯತೆಯಿದೆ. ಆರೋಗ್ಯಕ್ಕೆ ಸಂಬಂಧಿಸಿ ಮುಂಜಾಗ್ರತೆ ವಹಿಸಿ.

ಕಟಕ
ಕ್ಲಿಷ್ಟಕರ ಪರಿಸ್ಥಿತಿ ಎದುರಿಸುವಿರಿ. ತಾಳ್ಮೆಯಿಂದ ಅದನ್ನು ನಿಭಾಯಿಸಬೇಕು. ದೇವರ ಕೃಪೆಯಿದೆ, ಪ್ರಯತ್ನವು ಫಲ ನೀಡುವುದು.

ಸಿಂಹ
ನಿಮ್ಮ ಉದ್ದೇಶ ಈಡೇರುವುದು. ಹೆಚ್ಚು ಶ್ರಮ ಪಡದೆ ಕಾರ್ಯ ಸಿದ್ಧಿಯಾಗುವುದು. ಹಣದ ವಿಚಾರದಲ್ಲಿ ಅವಸರದ ನಿರ್ಧಾರ ತಾಳಬೇಡಿ.

ಕನ್ಯಾ
ಕಾರ್ಯ ಸಾಧಿಸಲು ಸ್ವಲ್ಪ ಹೆಚ್ಚೇ ಶ್ರಮ ಪಡಬೇಕಾಗುವುದು. ಹಾಗೆಂದು ತಾಳ್ಮೆ ಕಳಕೊಳ್ಳದಿರಿ. ಕುಟುಂಬದವರ ಜತೆ ಕಾಲ ಕಳೆಯಿರಿ.

ತುಲಾ
ಕಾರ್ಯದಲ್ಲಿ ವಿಳಂಬ. ಇದರಿಂದ ಅಸಹನೆ. ಮನೆಯ ಹೊರಗಿನ ಕಾರ್ಯದಲ್ಲಿ ಸಮಸ್ಯೆ ಎದುರಿಸುವಿರಿ. ಕಣ್ಣು, ಗಂಟಲು ಸಮಸ್ಯೆ ಉಂಟಾದೀತು.

ವೃಶ್ಚಿಕ
ನಿಮ್ಮ ಕಾರ್ಯಕ್ಕೆ ಮನ್ನಣೆ ದೊರಕುವುದು. ಏಕಾಂಗಿಗಳಿಗೆ ವಿವಾಹ ಸಂಬಂಧ ಕೂಡಿಬಂದೀತು. ಬಹುಕಾಲದ ಗುರಿಯೊಂದು ಇಂದು ಈಡೇರುವುದು.

ಧನು
ನಿಮ್ಮ ವ್ಯವಹಾರ ತಾಳ್ಮೆಯಿಂದ ನೆರವೇರಿಸಿ. ಮನೆಯಲ್ಲಿ ವಾದ ನಡೆದೀತು. ಆದರೆ ಅದು ಅಲ್ಪಕಾಲೀನ. ಬಳಿಕ ಸಮರಸ ಮೂಡುವುದು.

ಮಕರ
ಮನೆ ನವೀಕರಣ, ಜಾಗ ಖರೀದಿಗೆ ಪೂರಕ ಬೆಳವಣಿಗೆ. ಸವಾಲು ಸಮರ್ಥವಾಗಿ ಎದುರಿಸುವಿರಿ. ಕೌಟುಂಬಿಕ ಭಿನ್ನಮತ ನೆಮ್ಮದಿ ಕೆಡಿಸೀತು.

ಕುಂಭ
ನಿಮಗಿಂದು ಪೂರಕ ದಿನವಲ್ಲ. ನಿಮ್ಮ ಉದ್ದೇಶ ಸಾಧಿಸಲು ಹೆಚ್ಚು ಶ್ರಮ ಅಗತ್ಯ. ಕೌಟುಂಬಿಕ ಶಾಂತಿ ಕೆಡುವ ಪ್ರಸಂಗ ಉಂಟಾದೀತು.

ಮೀನ
ಎಲ್ಲದಕ್ಕೂ ಭಾವುಕವಾಗಿ ವರ್ತಿಸದಿರಿ. ಪ್ರಾಕ್ಟಿಕಲ್ ಆಗಿ ಚಿಂತಿಸಿರಿ. ತಪ್ಪುಗಳನ್ನು ಕಡಿಮೆ ಮಾಡಲು ಗಮನ ಕೊಡಿ. ಕಲಾವಿದರಿಗೆ ಮನ್ನಣೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!