ದಿನಭವಿಷ್ಯ| ಅದೃಷ್ಟ ನಂಬಿ ಕೂರಬೇಡಿ, ಕಠಿಣ ಶ್ರಮ ಹಾಕಿದರೆ ಮಾತ್ರ ಫಲ ಪ್ರಾಪ್ತಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಕೆಲಸದ ಒತ್ತಡದಿಂದಾಗಿ ನಿಮ್ಮಿಂದ ತಪ್ಪುಗಳೂ ಘಟಿಸಬಹುದು. ಕೌಟುಂಬಿಕ ವಿಷಯದಲ್ಲಿ ಹೆಚ್ಚು ಸಂವೇದನೆಯಿಂದ ವರ್ತಿಸಿ. ಇತರರಿಗೆ ನೋವು ಕೊಡಬೇಡಿ.

ವೃಷಭ
ವೃತ್ತಿಕ್ಷೇತ್ರದಲ್ಲಿ ಹೆಚ್ಚು ಶ್ರಮ ಪಡಬೇಕು, ಸಹನೆ ಕಾಯ್ದುಕೊಳ್ಳಬೇಕು. ಮನೆಯಲ್ಲಿ  ಸಣ್ಣಪುಟ್ಟ ವಿರಸ ಉಂಟಾದೀತು. ಇತರರ ಮಾತನ್ನೂ ಕೇಳುವ ತಾಳ್ಮೆಯಿರಲಿ.

ಮಿಥುನ
ವೃತ್ತಿಯಲ್ಲಿ ನಿಮಗೆ ಪೂರಕ ದಿನವಲ್ಲ. ಅಡೆತಡೆ ಎದುರಿಸುವಿರಿ. ಕೆಲವರು ವಾಗ್ವಾದಕ್ಕೆ ಇಳಿದರೆ ನೀವು ಮೌನ ಸಾಧಿಸಿರಿ. ಎದುರುತ್ತರ ಕೊಡಬೇಡಿ.

ಕಟಕ
ವೃತ್ತಿಯಲ್ಲಿ ಉತ್ತಮ ಸಾಧನೆ ತೋರುವಿರಿ. ಕೌಟುಂಬಿಕ ವಿಷಯದಲ್ಲಿ ಹೆಚ್ಚು ಹೊಂದಾಣಿಕೆ, ಸೌಹಾರ್ದತೆ. ಆರ್ಥಿಕ ವಿಷಯದಲ್ಲಿ ತೃಪ್ತಿಕರ ಬೆಳವಣಿಗೆ.

ಸಿಂಹ
ಕೆಲವು ವಿಚಾರದಲ್ಲಿ ಗೊಂದಲದ ಮನಸ್ಥಿತಿ. ಯಾವುದೇ ಕಾರ್ಯ ಎಸಗುವ ಮುನ್ನ ಮನಸ್ಸು ಸ್ಪಷ್ಟವಾಗಿರಲಿ. ದೈಹಿಕ ನೋವು ಬಾಧಿಸಬಹುದು.

ಕನ್ಯಾ
ಮನೆಯ ಸದಸ್ಯರ ಕುರಿತಂತೆ ಮೆದುವಾದ ಧೋರಣೆಯಿರಲಿ. ಬಿರುಸು ಮಾತು ಒಳಿತು ತರದು. ಖರೀದಿಯ ಹುಮ್ಮಸ್ಸಿಗೆ ಹಣದ ಕೊರತೆಯ ನಿರಾಶೆ.

ತುಲಾ
ಅದೃಷ್ಟವನ್ನು ಮಾತ್ರ ನಂಬಿ ಕೂರಬೇಡಿ. ಕಠಿಣ ಶ್ರಮ ಹಾಕಿದರೆ ಮಾತ್ರ ಫಲ ಪ್ರಾಪ್ತಿ. ಚರ್ಮದ ಅಲರ್ಜಿಯಂತಹ ಕಿರಿಕಿರಿ ಬಾಧಿಸಬಹುದು. ಖರ್ಚು ಅಧಿಕ.

ವೃಶ್ಚಿಕ
ಮನೆಯಲ್ಲಿ ಹಿರಿಯರ ಜತೆ ಅಥವಾ ಕಚೇರಿಯಲ್ಲಿ ಸಹೋದ್ಯೋಗಿ ಜತೆ  ತಿಕ್ಕಾಟ ಉಂಟಾದೀತು. ನೆಮ್ಮದಿ ಹಾಳು. ಸಂಯಮ ಅಗತ್ಯ.

ಧನು
ವ್ಯವಹಾರದಲ್ಲಿ ಇತರರ ಜತೆ ಪಾಲುದಾರಿಕೆ ಒಳಿತು ತರದು. ಸ್ವಂತ ಪರಿಶ್ರಮವೇ ಉತ್ತಮ. ಕೌಟುಂಬಿಕ ಸಮಸ್ಯೆ ಪರಿಹಾರಕ್ಕೆ ಇನ್ನಷ್ಟು ಶ್ರಮ ಹಾಕಬೇಕು.

ಮಕರ
ಗೊಂದಲದ ಮನಸ್ಥಿತಿ. ಹಾಗಾಗಿ ಕೌಟುಂಬಿಕ ವ್ಯವಹಾರದಲ್ಲಿ, ಕೆಲಸದಲ್ಲಿ ಏಕಾಗ್ರತೆ ಕಷ್ಟವಾಗುತ್ತದೆ. ಮೊದಲು ಮನಸ್ಸು ತಹಬಂದಿಗೆ ತನ್ನಿರಿ.

ಕುಂಭ
ನಿಮ್ಮ ಕಾರ್ಯವನ್ನು ಸಫಲವಾಗಿ ಮಾಡಿ ಮುಗಿಸುವಿರಿ. ಆದರೆ ನೀವು ಬಯಸಿದಂತಹ ಮೆಚ್ಚುಗೆ ದೊರೆಯದು. ಅದರಿಂದ ನಿಮಗೆ ನಿರಾಶೆ.

ಮೀನ
ಸಿಕ್ಕಿದ ಅವಕಾಶ ಸರಿಯಾಗಿ ಬಳಸಿಕೊಂಡು ಕಾರ್ಯವೆಸಗಿ.  ಸಣ್ಣ ವಿಷಯವೊಂದು ದೊಡ್ಡ ಸಮಸ್ಯೆಯಾಗಿ ಕಾಡಬಹುದು. ಎಚ್ಚರ ವಹಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!