ಹೊಸದಿಗಂತ ಡಿಜಿಟಲ್ ಡೆಸ್ಕ್:
50 ವರ್ಷದ ಯಾತ್ರಾರ್ಥಿಯೊಬ್ಬರು 300 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ಶುಕ್ರವಾರ ತಡರಾತ್ರಿ ಪವಿತ್ರ ಅಮರನಾಥ ಗುಹೆಯಿಂದ ಹಿಂದಿರುಗುತ್ತಿದ್ದ ವೇಳೆ ಕಾಳಿಮಾತಾ ಬಳಿ ಕಾಲು ಜಾರಿ ಬಿದ್ದು, ದುರಂತ ಸಂಭವಿಸಿದೆ. ಮೃತರನ್ನು ವಿಜಯ್ ಕುಮಾರ್ ಶಾ ಎಂದು ಗುರುತಿಸಲಾಗಿದ್ದು, ಬಿಹಾರದ ರೋಹ್ತಾಸ್ ಜಿಲ್ಲೆಯ ತುಂಬ ಗ್ರಾಮದ ನಿವಾಸಿ.
ಮತ್ತೊಬ್ಬ ಯಾತ್ರಿ ಮಮತಾ ಕುಮಾರಿ ಪ್ರಾಣಾಪಾಯದಿಂದ ಪಾರಾಗಿದ್ದು, ಕೆಳಗೆ ಬಿದ್ದ ಯಾತ್ರಿಯನ್ನು ಮೌಂಟೇನ್ ಪಾರುಗಾಣಿಕಾ ತಂಡ ಮತ್ತು ಭಾರತೀಯ ಸೇನೆ ಜಂಟಿಯಾಗಿ ರಕ್ಷಿಸಲಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ಅವರು ಸಾವನ್ನಪ್ಪಿರುವುದಾಗಿ ಜಮ್ಮು-ಕಾಶ್ಮೀರದ ಪೊಲೀಸರು ಖಚಿತಪಡಿಸಿದರು.
#WATCH | J&K: One pilgrim namely Vijay Kumar Shah (50), a resident of village Tumba, Rohtas District, Bihar while returning from the holy Amarnath Cave slipped near Kalimata and fell 300 feet down. The pilgrim was rescued jointly by Mountain Rescue Team and the army, but later… pic.twitter.com/QxW3W4TgZ0
— ANI (@ANI) August 19, 2023