ದಿನಭವಿಷ್ಯ| ವ್ಯವಹಾರದಲ್ಲಿ ತಾಳ್ಮೆಯಿಂದ ವರ್ತಿಸಿ, ಹೊಸ ವ್ಯವಹಾರಕ್ಕೆ ಹಣ ಹೂಡದಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೇಷ
ಕೆಲವಾರು ಬದ್ಧತೆಗಳನ್ನು ನೀವು ಇಂದು ಪೂರೈಸಬೇಕಾಗಿದೆ. ಅದರಿಂದ ಹೆಚ್ಚು ಒತ್ತಡಕ್ಕೆ ಸಿಲುಕುವಿರಿ. ಇತರರ ಸಹಕಾರ ಪಡೆಯಿರಿ.

ವೃಷಭ
ಮಾನಸಿಕ ಗೊಂದಲ. ಅದರಿಂದಾಗಿ ತಪ್ಪು ಉಂಟಾದೀತು. ಪ್ರತಿ ವ್ಯವಹಾರದಲ್ಲೂ ತಾಳ್ಮೆಯಿಂದ ವರ್ತಿಸಿ. ಹೊಸ ವ್ಯವಹಾರಕ್ಕೆ ಹಣ ಹಾಕದಿರಿ.

ಮಿಥುನ
ಈ ದಿನ ನಿಮಗೆ ಪೂರಕವಾಗುವಂತೆ ಮಾಡಲು ಹೆಚ್ಚಿನ ಶ್ರಮ ಹಾಕಬೇಕು. ಬೆನ್ನುನೋವು, ಅಜೀರ್ಣದಂತಹ ಸಮಸ್ಯೆ ಕಾಡಬಹುದು.

ಕಟಕ
ಮನಸ್ಸು ಕೆಡಿಸುವಂತಹ ಬೆಳವಣಿಗೆ ಸಂಭವಿಸಬಹುದು. ಅದನ್ನು ನಾಜೂಕಾಗಿ ನಿಭಾಯಿಸಿ. ಆತುರದ ಕ್ರಮ ಇನ್ನಷ್ಟು ಹಾನಿ ತರಬಹುದು.

ಸಿಂಹ
ಪ್ರೀತಿಪಾತ್ರರ ಜತೆ ಆತ್ಮೀಯ ಕಾಲಕ್ಷೇಪ. ಕೌಟುಂಬಿಕ ಸಾಮರಸ್ಯ. ಶಾಪಿಂಗ್‌ಗೆ ಸೂಕ್ತ ದಿನ. ಆರ್ಥಿಕ ಪರಿಸ್ಥಿತಿ ಉತ್ತಮ. ಆರೋಗ್ಯ ಪರಿಸ್ಥಿತಿ ಸುಸ್ಥಿರ.

ಕನ್ಯಾ
ಆತ್ಮವಿಶ್ವಾಸದ ಕೊರತೆ. ಇದರಿಂದ ನಿಮ್ಮ ಪ್ರಗತಿಗೆ ಅಡ್ಡಿಯಾದೀತು. ನಿಮ್ಮ ಸಾಮರ್ಥ್ಯವನ್ನು ಕೆಲವರು ಕೀಳಂದಾಜು ಮಾಡುವರು. ವಿವೇಕದಿಂದ ನಡಕೊಳ್ಳಿ.

ತುಲಾ
ನಿಮ್ಮ ಪ್ರಗತಿಗೆ ಅನುಕೂಲವಾಗಬಲ್ಲ ಕ್ರಿಯೆಗಳಲ್ಲಿ ತೊಡಗಿ. ಅನವಶ್ಯ ಕಾರ್ಯಕ್ಕೆ ಆಸಕ್ತಿ ವಹಿಸಿ ನಿಮ್ಮ ಸಾಮರ್ಥ್ಯ ವ್ಯರ್ಥ ಮಾಡಬೇಡಿ.

ವೃಶ್ಚಿಕ
ಖಾಸಗಿ ಬದುಕಿನಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದರೆ ನೋವಿಗೆ ಗುರಿಯಾಗುವಿರಿ. ಆಸ್ತಿ ಅಥವಾ ಗೃಹ ಖರೀದಿಗೆ ಸೂಕ್ತ ಕಾಲ.

ಧನು
ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಸಮಸ್ಯೆ. ಇದರಿಂದ ಒತ್ತಡಕ್ಕೆ ಸಿಲುಕುವಿರಿ. ಚರ್ಮದ ಅಲರ್ಜಿಯಂತಹ ಸಮಸ್ಯೆ. ಧನನಾಶ ಉಂಟಾದೀತು.

ಮಕರ
ಇತರರ ಜತೆ ಸೌಹಾರ್ದದಿಂದ ವರ್ತಿಸಿ. ಇಲ್ಲವಾದರೆ ಸಂಘರ್ಷ ಸಂಭವ. ಅಸಹನೆ ಪ್ರದರ್ಶಿಸದಿರಿ. ಆರೋಗ್ಯದ ಬಗ್ಗೆ ತುಸು ಗಮನ ಕೊಡಿ.

ಕುಂಭ
ಯಶಸ್ಸು ಸಾಧಿಸಬೇಕಾದರೆ ಸಹನೆಯೂ ಮುಖ್ಯ, ಇದನ್ನು ಅರಿಯಿರಿ. ಆರ್ಥಿಕವಾಗಿ ಬಿಕ್ಕಟ್ಟು ಉಂಟಾದೀತು. ಖರ್ಚು ಕಡಿಮೆ ಮಾಡುವುದೇ ದಾರಿ.

ಮೀನ
ನಿಮ್ಮ ಮಾತಿನ ಚಾತುರ್ಯದಿಂದ ಇತರರನ್ನು ಮೆಚ್ಚಿಸುವಿರಿ. ಖಾಸಗಿ ಬದುಕಿನಲ್ಲಿ ತೃಪ್ತಿಕರ ಬೆಳವಣಿಗೆ. ಆರ್ಥಿಕ ಪ್ರಗತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!