ದಿನಭವಿಷ್ಯ| ಆರ್ಥಿಕ ವಿಷಯಕ್ಕೆ ಸಂಬಂಧಿಸಿ ಇತರರ ಸಲಹೆ ಕೇಳಲು ಹೋಗದಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನೀವಿಂದು ಇತರರ ಬೇಡಿಕೆ ಈಡೇರಿಸಲೇ ಹೆಚ್ಚು ಗಮನ ಕೊಡಬೇಕಾಗುತ್ತದೆ. ಕೌಟುಂಬಿಕ ಭಿನ್ನಮತ, ವೃತ್ತಿಯಲ್ಲಿ ಅಸಹಕಾರ ಕಾಡಲಿದೆ.

ವೃಷಭ
ದೃಢ ನಿಶ್ಚಯದಿಂದ ಕಾರ್ಯ ಎಸಗಬೇಕು. ವೃತ್ತಿಯಲ್ಲಿ ಕಠಿಣ ಸವಾಲು ಎದುರಿಸುವಿರಿ. ನಿಮ್ಮ ನಿಲುವಿನಲ್ಲಿ ಸಡಿಲಿಕೆ ಮಾಡದೆ ಮುಂದುವರಿಯಿರಿ.

ಮಿಥುನ
ಖರ್ಚು ಕಡಿಮೆ ಮಾಡಿ ಉಳಿತಾಯಕ್ಕೆ ಆದ್ಯತೆ ಕೊಡಬೇಕಾದ ಕಾಲ. ಆರ್ಥಿಕ ವಿಷಯಕ್ಕೆ ಸಂಬಂಧಿಸಿ ಇತರರ ಸಲಹೆ ಕೇಳಲು ಹೋಗದಿರಿ.

ಕಟಕ
ಕೆಲಸದಲ್ಲಿ ಸವಾಲು. ಹಾಗೆಂದು ಎಂದಿನಂತೆ  ಕೆಲಸ ನಿರ್ವಹಿಸಲು ಯತ್ನಿಸಿ. ಹೊಸದಾರಿ ತುಳಿಯಬೇಡಿ. ನಿಮ್ಮ ವರ್ತನೆಯಲ್ಲಿ ಬದಲಾವಣೆ ಅವಶ್ಯ.

ಸಿಂಹ
ನಿಮ್ಮ ಕುಟುಂಬವೇ  ನಿಮ್ಮ ತಳಹದಿ. ಅದನ್ನು ಅರಿಯಿರಿ. ಕುಟುಂಬಸ್ಥರ ಹಿತಾಸಕ್ತಿ ಕಾಯಲು ಮರೆಯದಿರಿ. ಆರ್ಥಿಕ ಚೇತರಿಕೆ.

ಕನ್ಯಾ
ಅದುಮಿಟ್ಟ ಕೆಲವು ಭಾವನೆಗಳು ಇಂದು ಹೊರಬೀಳಬಹುದು. ಇದರಿಂದ ನೀವು ಮುಜುಗರಕ್ಕೆ ಸಿಲುಕುವಿರಿ. ಕೌಟುಂಬಿಕ ಸಾಂತ್ವನ.

ತುಲಾ
ಮನೆಯ ನವೀಕರಣ ಅಥವಾ ದುರಸ್ತಿಗೆ ಇದು ಸಕಾಲ. ಆರ್ಥಿಕ ನೆರವು ನಿಮಗೆ ಒದಗುವುದು. ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬೆಳವಣಿಗೆ.

ವೃಶ್ಚಿಕ
ಕೌಟುಂಬಿಕ ಬಿಕ್ಕಟ್ಟನ್ನು ದೀರ್ಘ ಕಾಲ ನಿರ್ಲಕ್ಷಿಸಬಾರದು. ಅದನ್ನು ಇಂದು ನೀವು ಅರಿಯುವಿರಿ. ಬಿಕ್ಕಟ್ಟು ಸ್ಫೋಟಗೊಳ್ಳುವ ಹಂತ ತಲುಪಬಹುದು.

ಧನು
ದುಡುಕಿನ ನಿರ್ಧಾರ ತಾಳದಿರಿ. ಕೆಲವು ಪ್ರಸಂಗಗಳು ಅವಸರದ ಪ್ರತಿಕ್ರಿಯೆಗೆ ಹೇತುವಾದೀತು. ಆದರೆ ನೀವು ತಾಳ್ಮೆ ವಹಿಸುವುದು ಮುಖ್ಯ.

ಮಕರ
ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಮನ್ನಣೆ ದೊರಕುವುದು. ಆತ್ಮೀಯರು ನಿಮ್ಮ ಕಷ್ಟಕ್ಕೆ ನೆರವಾಗುವರು. ಕೌಟುಂಬಿಕ ಭಿನ್ನಮತ ಪರಿಹಾರ ಕಾಣುವುದು.

ಕುಂಭ
ನಿಮ್ಮ ಕ್ರಿಯಾಶೀಲತೆಗೆ ಹೆಚ್ಚು ಮನ್ನಣೆ ದೊರಕುವುದು. ಕುಟುಂಬಸ್ಥರ ಜತೆ ಹೆಚ್ಚು ಸಮಯ ಕಳೆಯುವ ಅವಕಾಶ. ಖರ್ಚು ಹೆಚ್ಚಲಿದೆ.

ಮೀನ
ನಿಮ್ಮ ಯಶಸ್ಸಾಗಲಿ, ಸೋಲಾಗಲಿ ಕುಟುಂಬವು ನಿಮ್ಮ ಕೈಬಿಟ್ಟಿಲ್ಲ. ಅಂತಹುದೇ ಬೆಂಬಲ ಇಂದೂ ಪಡೆಯುವಿರಿ. ಮನಸ್ಸಿಗೆ ನೆಮ್ಮದಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!