Friday, September 29, 2023

Latest Posts

ಮಣಿಪುರದಲ್ಲಿ ಮತ್ತೆ ಐದು ಮನೆಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಮಣಿಪುರ ರಾಜಧಾನಿ ಇಂಫಾಲ್‌ನ ನ್ಯೂ ಚೆಕ್‌ಕಾನ್ ಪ್ರದೇಶದಲ್ಲಿ ಭಾನುವಾರ ದುಷ್ಕರ್ಮಿಗಳು ಐದು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ.

ಇದು ಇಂಫಾಲ್ ಪೂರ್ವ ಜಿಲ್ಲೆಯ ಕುಕಿ ಪ್ರದೇಶವಾಗಿದೆ. ಸುಟ್ಟು ಕರಕಲಾದ ಮನೆಗಳು ಕುಕಿ ಮತ್ತು ಮೈತಿ ಎರಡೂ ಸಮುದಾಯಗಳಿಗೆ ಸೇರಿದವುಗಳಾಗಿವೆ.

ಮನೆಗಳಿಗೆ ಬೆಂಕಿ ಹರಡುವ ಮುನ್ನ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಈ ಘಟನೆ ಸಂಭವಿಸಿದೆ.

ಸದ್ಯ ಅಹಿತಕರ ಘಟನೆಯನ್ನು ತಡೆಯಲು ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!