ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಸಂತೋಷದ ದಿನ. ಮನೆ ಮತ್ತು ವೃತ್ತಿ ಕ್ಷೇತ್ರದಲ್ಲಿ ಸಹಕಾರದ ವಾತಾವರಣ. ಕೌಟುಂಬಿಕ ಆವಶ್ಯಕತೆಗಳು ಈಡೇರುತ್ತವೆ.
ವೃಷಭ
ಉದ್ಯಮದಲ್ಲಿ, ವ್ಯಾಪಾರದಲ್ಲಿ ಪ್ರಗತಿ. ಆರ್ಥಿಕ ಕೊರತೆ ನೀಗಲಿದೆ. ಹೊಸ ಸಂಪನ್ಮೂಲ ಒದಗಿ ಬರಲಿದೆ. ಕೌಟುಂಬಿಕ ಸಹಕಾರ
ಮಿಥುನ
ಅನವಶ್ಯ ಖರ್ಚುವೆಚ್ಚ ಬರಬಹುದು. ಮಿತವ್ಯಯ ಸಾಧಿಸಿ. ನಿಮ್ಮ ಆರೋಗ್ಯದ ಕುರಿತಂತೆ ಎಚ್ಚರಿಕೆಯಿರಲಿ. ಸಂಬಂಧ ಸ್ಥಿರ..
ಕಟಕ
ಮನಸ್ಸಿಗೆ ತೋಚಿದ್ದೆಲ್ಲ ಹೊರಗೆ ಹಾಕಬೇಡಿ. ಅದು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ವದಂತಿಗಳಿಗೆ ಕಿವಿ ಕೊಡಬೇಡಿ. ಸಂಯಮವಿರಲಿ.
ಸಿಂಹ
ಬದಲಾಗುವ ಹವಾಮಾನವು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ತುಸು ಎಚ್ಚರಿಕೆ ವಹಿಸಿ. ಕೌಟುಂಬಿಕ ಒತ್ತಡ.
ಕನ್ಯಾ
ಇಂದು ಉದಾಸೀನತೆ ಕಾಡಬಹುದು. ಸಕ್ರಿಯರಾಗಿರಿ. ಆರ್ಥಿಕ ವಿಷಯಕ್ಕೆ ಸಂಬಂಧಿಸಿ ಜಾಗರೂಕತೆಯಿಂದ ವರ್ತಿಸಿ. ಇಲ್ಲವಾದರೆ ನಷ್ಟವಾದೀತು
ತುಲಾ
ಖಾಸಗಿ ವಿಚಾರದಲ್ಲಿ ಹೆಚ್ಚು ಒತ್ತಡ. ಕೌಟುಂಬಿಕ ಸಾಮರಸ್ಯ ಕಾಪಾಡಲು ಯತ್ನಿಸುತ್ತೀರಿ. ಅದಕ್ಕೆ ನಿಮ್ಮ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಬೇಕು.
ವೃಶ್ಚಿಕ
ವೃತ್ತಿ ಮತ್ತು ಖಾಸಗಿ ಬದುಕಿನ ಮಧ್ಯೆ ಸಮತೋಲನ ಸಾಧಿಸಿ. ಮಹತ್ವದ ನಿರ್ಧಾರ ತಾಳುವುದಕ್ಕೆ, ಹೂಡಿಕೆಗೆ ಇಂದು ಸೂಕ್ತ ದಿನವಲ್ಲ.
ಧನು
ನಿಮ್ಮ ಮನಸ್ಸನ್ನು ಮುಕ್ತವಾಗಿ ತೆರೆದಿಡಿ. ಭಾವನೆಗಳನ್ನು ಅದುಮಿಟ್ಟುಕೊಳ್ಳ ಬೇಡಿ. ಇತರರ ಸೂಕ್ತ ಸ್ಪಂದನೆ ದೊರಕುವುದು. ಆರ್ಥಿಕ ಸ್ಥಿತಿ ಸ್ಥಿರ.
ಮಕರ
ನಿಮ್ಮ ಕ್ರಿಯಾಶೀಲತೆ ಇತರರಿಗೂ ಪ್ರೇರಣೆ ನೀಡಲಿದೆ. ಅವರಿಂದ ಮೆಚ್ಚುಗೆ. ದೂರ ಪ್ರಯಾಣ ಸಾಧ್ಯತೆ. ಸೊತ್ತಿನ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿ.
ಕುಂಭ
ನಿಮ್ಮ ವಿರೋಧಿಗಳು ನಿಮ್ಮನ್ನು ಮಣಿಸಲು ಯತ್ನಿಸುತ್ತಾರೆ. ಆದರೆ ಅಂತಿಮವಾಗಿ ನಿಮ್ಮದೇ ಮೇಲುಗೈ. ಆರೋಗ್ಯದಲ್ಲಿ ಏರುಪೇರು ಸಂಭವ.
ಮೀನ
ನಿಮ್ಮ ಕೋಪವನ್ನು ನಿಯಂತ್ರಿಸಬೇಕು. ಇಲ್ಲದಿದ್ದರೆ ಕ್ಲಿಷ್ಟಕರ ಪರಿಸ್ಥಿತಿಗೆ ಸಿಲುಕುತ್ತೀರಿ. ಕುಟುಂಬಸ್ಥರ ಜತೆ ಸಣ್ಣಪುಟ್ಟ ವಾಗ್ವಾದ ಸಂಭವಿಸಬಹುದು.