ಆಟೋಗ್ರಾಫ್ ನೀಡುವೆ, ತ್ರಿವರ್ಣ ಧ್ವಜದ ಮೇಲೆ ಸಹಿ ಹಾಕಲ್ಲ: ವಿಶ್ವದ ಹೃದಯ ಗೆದ್ದ ನೀರಜ್ ಚೋಪ್ರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
 
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ ಚಿನ್ನದ ಕಿರೀಟಕ್ಕೆ ಮುತ್ತಿಟ್ಟಿದ್ದಾರೆ . ನೀರಜ್‌ ಈ ಸಾಧನೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ.

ಚಿನ್ನದ ಸಾಧನೆ ಬಳಿಕ ನೀರಜ್ ಚೋಪ್ರಾ ಜೊತೆ ಅನೇಕರು ಸೆಲ್ಫಿ ಕ್ಲಿಕ್ಲಿಸಿಕೊಳ್ಳಲು, ಆಟೋಗ್ರಾಫ್ ಪಡೆಯಲು ಮುಗಿಬಿದ್ದಿದ್ದಾರೆ. ಇದೇ ವೇಳೆ ಹಂಗೇರಿಯಾ ಅಭಿಮಾನಿ ನೀರಜ್ ಬಳಿ ಆಟೋಗ್ರಾಫ್ ಕೇಳಿದ್ದಾರೆ.

ಹಂಗೇರಿಯಾ ಅಭಿಮಾನಿ ಭಾರತದ ತ್ರಿವರ್ಣ ಧ್ವಜದ ಮೇಲೆ ಆಟೋಗ್ರಾಫ್ ನೀಡುವಂತೆ ಮನವಿ ಮಾಡಿದ್ದಾಳೆ. ಆದರೆ ತಕ್ಷಣವೇ ಉತ್ತರ ನೀಡಿದ ನೀರಜ್ ಚೋಪ್ರಾ, ತ್ರಿವರ್ಣ ಧ್ವಜದ ಮೇಲೆ ಸಹಿ ಹಾಕಲ್ಲ ಎಂದಿದ್ದಾರೆ.

ನಿಮಗೆ ಆಟೋಗ್ರಾಫ್ ನೀಡುತ್ತೇನೆ. ಆದರೆ ಧ್ವಜದ ಮೇಲೆ ಸಹಿ ಹಾಕಿ ಅಗೌರವ ತೋರಲ್ಲ ಎಂದು ನೀರಜ್ ಚೋಪ್ರಾ ಹೇಳಿದ್ದಾರೆ. ಬಳಿಕ ಹಂಗೇರಿಯಾ ಅಭಿಮಾನಿಯ ಟಿ ಶರ್ಟ್ ಮೇಲೆ ಸಹಿ ಹಾಕಿದ್ದಾರೆ.

ನೀರಜ್ ಚೋಪ್ರಾ ನಡೆಗೆ ವಿಶ್ವಲೇ ತಲೆ ಬಾಗಿದ್ದು,ಎಲ್ಲಡೆ ಪ್ರಶಂಶೆ ವ್ಯಕ್ತವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!