ದಿನಭವಿಷ್ಯ| ಖಾಸಗಿ ಬದುಕಲ್ಲಿ ಪ್ರಮುಖ ನಿರ್ಧಾರ ತಾಳಬೇಕಾದ ಸಮಯ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಆಪ್ತರೊಬ್ಬರು  ನಿಮಗೆ ಸಮಸ್ಯೆ ಒಡ್ಡುತ್ತಿದ್ದಾರೆ. ಈ ವಿಚಾರವನ್ನು ಬೇಗನೆ ಇತ್ಯರ್ಥ ಪಡಿಸಿ. ಕಠಿಣ ನಿಲುವು ನೋವು ತಂದರೂ, ಅದು ಅನಿವಾರ್ಯ.

ವೃಷಭ
ನಿಮ್ಮ ಆಪ್ತರ ಮನದಾಶಯ ತಿಳಿದುಕೊಳ್ಳಲು ಯತ್ನಿಸಿ. ಅರಿವಿನ ಕೊರತೆ ಆತ್ಮೀಯ  ಸಂಬಂಧವನ್ನು ಕೆಡಿಸಬಹುದು.

ಮಿಥುನ
ಆತ್ಮೀಯರ ಜತೆ ನಿಮ್ಮ ಬೇಡಿಕೆ ಮಂಡಿಸಲು ಹಿಂಜರಿಯಬೇಡಿ. ಏಕೆಂದರೆ ಇಂದು ನಿಮ್ಮ ಬೇಡಿಕೆ ಈಡೇರುವ ದಿನ. ಅದನ್ನು ಸದುಪಯೋಗ ಮಾಡಿ.

ಕಟಕ
ನೀವು ಎಲ್ಲರನ್ನೂ ಮೆಚ್ಚಿ ಸಲು ಸಾಧ್ಯವಿಲ್ಲ. ಕೆಲವು ಟೀಕಾಕಾರರು ಇದ್ದೇ ಇರುತ್ತಾರೆ. ಹಾಗಾಗಿ ಅಂತಹ ಟೀಕೆಗಳನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ.

ಸಿಂಹ
ಮನೆಯಲ್ಲೂ  ವೃತ್ತಿಯಲ್ಲೂ ಹೆಚ್ಚು ಹೊಣೆಗಾರಿಕೆ. ಪ್ರೀತಿಯ ವಿಷಯದಲ್ಲಿ ತೊಡಕು ಉಂಟಾದೀತು. ಭಿನ್ನಾಭಿಪ್ರಾಯ ತಲೆದೋರಬಹುದು.

ಕನ್ಯಾ
ನಿಮ್ಮ ಸುತ್ತಲಿನ ಸಣ್ಣ ವಿಷಯಕ್ಕೂ ನೀವಿಂದು ಗಮನ ಕೊಡಬೇಕು. ಅವುಗಳು ನಿಮ್ಮ ಮೇಲೆ ಪರಿಣಾಮ ಬೀರಬಹುದು. ಆರ್ಥಿಕ ಒತ್ತಡ ಹೆಚ್ಚು.

ತುಲಾ
ಖಾಸಗಿ ಬದುಕಲ್ಲಿ ಪ್ರಮುಖ ನಿರ್ಧಾರ ತಾಳಬೇಕಾದ ಸಮಯ. ಸಂಬಂಧ ಸುಧಾರಣೆಗೆ ಆದ್ಯತೆ ಕೊಡಿ. ಸಣ್ಣ ಮನಸ್ತಾಪ ಸಂಬಂಧ ಕೆಡಿಸದಿರಲಿ.

ವೃಶ್ಚಿಕ
ಬಾಹ್ಯಾಡಂಬರಕ್ಕೆಎಲ್ಲರೂ ಮಹತ್ವ ಕೊಡುತ್ತಾರೆ. ಇದು ನಿಮ್ಮಚುನಸ್ಸು ನೋಯಿಸಬಹುದು. ನಿಮ್ಮ  ಪ್ರಾಮಾಣಿಕತೆ ನೀವು ಬಿಡದಿರಿ.

ಧನು
ಬಾಕಿ ಇರುವ ಕಾರ್ಯ ಪೂರೈಸಲು ಆದ್ಯತೆ ಕೊಡಿ. ಅದನ್ನು ಮುಗಿಸಿದರೆ ಚಿಂತೆ ಯೊಂದು ಕಳೆದಂತೆ. ಕೌಟುಂಬಿಕ ಸಹಕಾರ ಲಭಿಸುವುದು.

ಮಕರ
ಹೆಚ್ಚು ವಿಶೇಷ ಘಟಿಸದ ದಿನ. ಕಾರ್ಯಗಳು ಸರಾಗವಾಗಿ ಸಾಗುತ್ತವೆ. ಮನೆಯಲ್ಲಿ, ಕಚೇರಿ ಯಲ್ಲಿ ಯಾವುದೇ ಗೊಂದಲವಿಲ್ಲ.  ದಿನದಂತ್ಯಕ್ಕೆ ತೃಪ್ತಿ.

ಕುಂಭ
ನಿಮ್ಮ ಮಾತು  ಕೆಲವರಿಗೆ  ತಪ್ಪು ಅಭಿಪ್ರಾಯ ಸೃಷ್ಟಿಸಬಹುದು. ಹಾಗಾಗಿ ಮನಸ್ಸಿಗೆ ತೋಚಿದ್ದನ್ನೆಲ್ಲ ಮಾತಾಡಿ ಬಿಡಬೇಡಿ. ಸರಿಯಾಗಿ ಅರ್ಥ ಮಾಡಿಸಿರಿ.

ಮೀನ
ಹಣದ ವಿಷಯದಲ್ಲಿ ಪ್ರಮುಖ ತೀರ್ಮಾನ ತಾಳಬೇಕಾದೀತು. ಸರಿಯಾಗಿ ಯೋಚಿಸಿ ಮುಂದುವರಿಯಿರಿ. ಆತುರದ ನಿರ್ಧಾರ ಪ್ರತಿಕೂಲವಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!