ದಿನಭವಿಷ್ಯ| ಸಣ್ಣ ವಿಷಯಗಳೂ ಭಾವೋದ್ವೇಗಕ್ಕೆ ಕಾರಣವಾಗುತ್ತದೆ, ಸಮಾಧಾನದಿಂದಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಕುಟುಂಬ ಸದಸ್ಯರು  ಉತ್ತಮ ಸಾಧನೆ ತೋರುವರು. ಇದು ನಿಮ್ಮಲ್ಲಿ ಹೆಮ್ಮೆ ತುಂಬುವುದು. ಉದ್ಯೋಗದಲ್ಲಿ ಉನ್ನತಿ. ಆರ್ಥಿಕ ಲಾಭ.

ವೃಷಭ
ನಿಮಗೆ ಪ್ರತಿಕೂಲ ಬೆಳವಣಿಗೆ ಉಂಟಾದೀತು.  ಇದರಿಂದ ಮುಖ್ಯ  ಪಾಠಕಲಿಯುವಿರಿ. ಕೌಟುಂಬಿಕ ಅಸಹಕಾರ. ಅಸಹನೆ ಹೆಚ್ಚು.

ಮಿಥುನ
ಕ್ಲಿಷ್ಟಕರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಿರಿ. ಇತರರ ತಪ್ಪು ತಿದ್ದುವ ಕಾರ್ಯ ಮಾಡುವಿರಿ. ಬಂಧುಗಳ ಜತೆ ಕಾಲಕ್ಷೇಪ.

ಕಟಕ
ದೂರ ಪ್ರಯಾಣ ಸಂಭವ. ಸಮಾರಂಭ ದಲ್ಲಿ ಪಾಲ್ಗೊಳ್ಳುವ ಅವಕಾಶ. ಧಾರ್ಮಿಕ ವಿಚಾರಗಳು ಹೆಚ್ಚು ಆಸಕ್ತಿ ಕೆರಳಿಸಬಹುದು. ಮಾನಸಿಕ ನಿಶ್ಚಿಂತೆ.

ಸಿಂಹ
ಇಂದು ಕೆಲಸದ ಒತ್ತಡ ಹೆಚ್ಚು. ಹಾಗಾಗಿ ಉಳಿದ ಮೋಜಿನ ವಿಚಾರಗಳಿಗೆ ಗಮನ ಹರಿಸಲಾಗುವುದಿಲ್ಲ. ಕೌಟುಂಬಿಕ ಹೊಣೆಗಾರಿಕೆ ಹೆಚ್ಚಳ.

ಕನ್ಯಾ
ಆರ್ಥಿಕವಾಗಿ ಹಿನ್ನಡೆ. ಅನಿರೀಕ್ಷಿತ ಖರ್ಚು ಒದಗುವುದು. ಹೊಸ ಆರ್ಥಿಕ ವ್ಯವಹಾರ ಗಳಿಗೆ ಕೈ ಹಾಕಬೇಡಿ. ಕೌಟುಂಬಿಕ ಶಾಂತಿ, ಸಮಾಧಾನ.

ತುಲಾ
ಕೆಲವು ಹಿನ್ನಡೆ, ನಿರಾಶೆ ಎದುರಿಸಲು ಸಜ್ಜಾಗಿ. ನಿಮ್ಮ ಪ್ರಯತ್ನಗಳು  ಫಲ ನೀಡುವುದಿಲ್ಲ. ಹತಾಶೆ, ಅಸಹನೆ ನಿಮ್ಮನ್ನು ಆವರಿಸಬಹುದು. ನಿರಾಶರಾಗದಿರಿ.

ವೃಶ್ಚಿಕ
ಆಪ್ತ ನೆನಪು ಕಲಕುವ ವ್ಯಕ್ತಿಗಳ ಭೇಟಿ. ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದ ವರ್ತಿಸಿ. ಕೌಟುಂಬಿಕ ಪರಿಸ್ಥಿತಿ ಸಮಾಧಾನಕರ.

ಧನು
ಭಾವುಕರಾಗಿ ದುಡುಕಿನ ನಿರ್ಧಾರ ತೆಗೆದುಕೊಳ್ಳದಿರಿ.ಕೌಟುಂಬಿಕ ವಿಚಾರಕ್ಕೆ ಮಹತ್ವ ಕೊಡಿ. ಎಲ್ಲರೊಡನೆ ಕೂಡಿ ಕಳೆಯುವ ಅವಕಾಶ.

ಮಕರ
ಸೂಕ್ಷ್ಮ ಸಂವೇದಿಯಾಗಿ ಇಂದು ವರ್ತಿಸುತ್ತೀರಿ. ಸಣ್ಣ  ವಿಷಯಗಳೂ ಭಾವೋದ್ವೇಗಕ್ಕೆ  ಕಾರಣವಾಗುತ್ತದೆ. ಕೆಲವರು ನಿಮಗೆ ನೋವು ತರುತ್ತಾರೆ.

ಕುಂಭ
ಹೆಚ್ಚು ಭಾವನಾತ್ಮಕವಾಗಿ ವರ್ತಿಸುವಿರಿ. ಆಪ್ತ ರೊಂದಿಗೆ ಭಾವನೆ  ಹಂಚಿಕೊಳ್ಳಿ. ಅದರಿಂದ ಸಮಾಧಾನ. ಜೀವನ ಸಂಗಾತಿಯ ಹುಡುಕಾಟ ಸಫಲವಾಗಲಿದೆ.

ಮೀನ
ಯಾವುದೋ ವಿಷಯ ಮನದಲ್ಲಿ ಭಯಾತಂಕ ಸೃಷ್ಟಿಸುತ್ತದೆ. ಜೀವನದ ಬಗ್ಗೆ ಅನಿಶ್ಚಿತತೆ. ಕೆಲವು ವ್ಯಕ್ತಿಗಳು ಮನಸ್ಸಿನ ಸ್ವಾಸ್ಥ್ಯ ಕದಡುತ್ತಾರೆ. ಎಚ್ಚರದಿಂದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!