ಇಂಡೋನೇಷ್ಯಾದಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಸಿಕ್ಕಿತು ಅದ್ದೂರಿ ಸ್ವಾಗತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುರುವಾರ ಮುಂಜಾನೆ ಇಂಡೋನೇಷ್ಯಾದ ಜಕಾರ್ತಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಗೆ ಭಾರತೀಯ ಸಮುದಾಯದಿಂದ ಭವ್ಯ ಸ್ವಾಗತ ದೊರೆಯಿತು. ಮೋದಿ ಜಕಾರ್ತಾದ ರಿಟ್ಜ್ ಕಾರ್ಲ್ಟನ್ ಹೋಟೆಲ್‌ಗೆ ತಲುಪಿದ ತಕ್ಷಣ ‘ವಂದೇ ಮಾತರಂ’, ‘ಮೋದಿ ಮೋದಿ’ ಘೋಷಣೆಗಳು ಕೇಳತೊಡಗಿದವು.

ಭಾರತೀಯ ವಲಸಿಗರು ತ್ರಿವರ್ಣ ಧ್ವಜವನ್ನು ಬೀಸುತ್ತಾ “ಮೋದಿ ಮೋದಿ” ಮತ್ತು “ವಂದೇ ಮಾತರಂ”, “ಹುಮಾರಾ ನೇತಾ ಕೈಸಾ ಹೋ, ನರೇಂದ್ರ ಮೋದಿಜಿ ಜೈಸಾ ಹೋ…ಎಂಬ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಉತ್ಸಾಹವನ್ನು ಪ್ರದರ್ಶಿಸಿದರು. ಅಲ್ಲಿ ಕೆಲ ಸಮಯದ ಕಾಲ ಮಕ್ಕಳು ಸೇರಿದಂತೆ ಭಾರತೀಯ ಸಮುದಾಯದ ಸದಸ್ಯರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿ, ಸೆಲ್ಫಿಗೂ ಪೋಸ್ ಕೊಟ್ಟರು.

ಅಲ್ಲಿದ್ದವರೆಲ್ಲಾ ಭಾರತಕ್ಕೆ ಇಂದು ಈ ಮಟ್ಟದ ಮನ್ನಣೆ ಸಿಗುತ್ತಿದೆ ಎಂದರೆ ಅದಕ್ಕೆ ಪ್ರಧಾನಿ ಕಾರಣ ಎಂದರು.

ಇಂದು ನಡೆಯಲಿರುವ 18ನೇ ಪೂರ್ವ ಏಷ್ಯಾ ಶೃಂಗಸಭೆ ಮತ್ತು 20 ನೇ ಆಸಿಯಾನ್-ಭಾರತೀಯ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಇಂಡೋನೇಷ್ಯಾಕ್ಕೆ ಬಂದಿಳಿದಿದ್ದಾರೆ. ಜಕಾರ್ತಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಯವರಿಗೆ ವಿದ್ಯುಕ್ತ ಸ್ವಾಗತ ನೀಡಲಾಯಿತು. ಅಲ್ಲಿ ಇಂಡೋನೇಷಿಯಾದ ಸಾಂಸ್ಕೃತಿಕ ನೃತ್ಯವನ್ನೂ ಪ್ರದರ್ಶಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!