Wednesday, September 27, 2023

Latest Posts

ದಿನಭವಿಷ್ಯ| ಹೆಚ್ಚು ಪ್ರಾಕ್ಟಿಕಲ್ ಆಗಿ  ಚಿಂತಿಸಿ..ಕಾರ್‍ಯಪ್ರವೃತ್ತರಾಗಿ!

ಮೇಷ
ಉತ್ತಮ ಸಂಧಾನ ಕಾರರಾಗಿ ವರ್ತಿಸುವ ಪ್ರಸಂಗ ಬರಬಹುದು. ಟೀಕೆಗಳಿಗೆ ಅಂಜಬೇಡಿ. ನಿಮ್ಮ ಕಾರ್‍ಯ ಪ್ರಾಮಾಣಿಕವಾಗಿ ಮಾಡಿ.

ವೃಷಭ
ನಿಮ್ಮ ಮತ್ತು ಆಪ್ತರ ಹಿತಾಸಕ್ತಿಗೆ ಆದ್ಯತೆ ಕೊಡಿ. ಯಾರಿಗೋ ಉಪಕಾರ ಮಾಡಲು ಹೋಗಿ ನಿಮ್ಮವರನ್ನು ಕಡೆಗಣಿಸಬೇಡಿ. ಆರ್ಥಿಕ ಒತ್ತಡ.

ಮಿಥುನ
ನಿಮ್ಮ ಸುತ್ತಲಿನ ವ್ಯಕ್ತಿಗಳಲ್ಲಿ ನಿಮ್ಮ ಭಾವನೆಯನ್ನು ಮುಕ್ತವಾಗಿ ವ್ಯಕ್ತಪಡಿಸಿ. ಕೆಲ ವಿಷಯಗಳನ್ನು ಮುಚ್ಚಿಡುವುದು ಒಳ್ಳೆಯದಲ್ಲ.

ಕಟಕ
ಭಾವನಾತ್ಮಕವಾಗಿ ನಿಮ್ಮನ್ನು ಘಾಸಿ ಗೊಳಿಸುವ ಬೆಳವಣಿಗೆ ಉಂಟಾದೀತು. ನೀವಂತೂ ಮನಸ್ಸು ಗಟ್ಟಿಯಾಗಿ ಇಟ್ಟುಕೊಳ್ಳಿ. ಕೌಟುಂಬಿಕ ಉದ್ವಿಗ್ನತೆ.

ಸಿಂಹ
ಇತರರಲ್ಲಿ ವಿಶ್ವಾಸ ತುಂಬಿಸುವ ಕೆಲಸ ಮಾಡಿ. ಎದೆಗುಂದಿಸುವ ಮಾತು ಆಡಬೇಡಿ. ಕೌಟುಂಬಿಕ ಮನಸ್ತಾಪ ಬಗೆಹರಿಸಿ.
ಶುಭ ದಿನ.

ಕನ್ಯಾ
ಧಾರ್ಮಿಕ ಕಾರ್‍ಯಗಳಲ್ಲಿ ತೊಡಗಿಕೊಳ್ಳುವ ಇಚ್ಛೆ ಉಂಟಾದೀತು. ಸಾಮಾಜಿಕ ಕಾರ್‍ಯಗಳಲ್ಲಿ ಆಸಕ್ತಿ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.

ತುಲಾ
ಭಾವನೆಗಳನ್ನು ಬದಿಗಿಟ್ಟು ತಾರ್ಕಿಕ ವಿಷಯಗಳಿಗೆ ಆದ್ಯತೆ ಕೊಡುವ ಸನ್ನಿವೇಶ ಒದಗುತ್ತದೆ. ಹೆಚ್ಚು ಪ್ರಾಕ್ಟಿಕಲ್ ಆಗಿ  ಚಿಂತಿಸಿ ಕಾರ್‍ಯಪ್ರವೃತ್ತರಾಗಿ.

ವೃಶ್ಚಿಕ
ನಿಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿ. ಅದರಿಂದಲೇ ಒಳ್ಳೆಯದಾಗುವುದು. ಒಳಗೊಳಗೇ ಕೊರಗುವುದರಿಂದ
ಏನೂ ಲಾಭವಿಲ್ಲ.

ಧನು
ಕೆಲವು ಸನ್ನಿವೇಶಗಳಿಂದ ನಿಮ್ಮ ಆತ್ಮವಿಶ್ವಾಸಕ್ಕೆ ಕುಂದು. ನಿರ್ಭೀತಿ ಯಿಂದ ಪರಿಸ್ಥಿತಿ ಎದುರಿಸಲು ಕಲಿಯಿರಿ. ಇತರರೊಂದಿಗೆ ಕಠಿಣವಾಗಿ ವರ್ತಿಸಿ.

ಮಕರ
ನಿಮ್ಮ ನಿಲುವಿಗೆ ಅಂಟಿಕೊಳ್ಳುವುದು ಒಳ್ಳೆಯದೆ. ಆದರೆ ಅದು ಕೌಟುಂಬಿಕ ಸಾಮರಸ್ಯ ಹಾಳು ಮಾಡದಂತೆ ನೋಡಿ ಕೊಳ್ಳುವುದು ಮುಖ್ಯ.

ಕುಂಭ
ಮನಸ್ಸಿನ ಶಾಂತಿ ಉಳಿಯಬೇಕಾದರೆ ಸಣ್ಣಪುಟ್ಟ ಸಂಘರ್ಷ ಗಳಿಂದ ದೂರವಿರಿ. ಕೆಲವರ ವರ್ತನೆ ಅನಿವಾರ್ಯವಾಗಿ ಸಹಿಸಿಕೊಳ್ಳಬೇಕು.

ಮೀನ
ಆರ್ಥಿಕ ವಿಷಯಕ್ಕೆ ಸಂಬಂಧಿಸಿ ಪರಿಣತರ ಸಲಹೆ ಪಡೆಯಿರಿ. ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ. ಸೂಕ್ತ ನೆರವು ಒದಗುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!