ದಿನಭವಿಷ್ಯ| ಆತ್ಮೀಯ ಸಂಬಂಧವೊಂದು ನಿರ್ಣಾಯಕ ಹಂತ ತಲುಪುವುದು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಪ್ರಮುಖ ಕಾರ್ಯಗಳನ್ನು ಸಕಾಲದಲ್ಲಿ ಮುಗಿಸಿ. ಕೆಲವು ವಿಘ್ನಗಳು ಒದಗಬಹುದು. ಆದರೆ ದೇವತಾನುಗ್ರಹವೂ ನಿಮಗಿದೆ.

ವೃಷಭ
ನಿಮ್ಮ ಪ್ರಮುಖ ಗುರಿಯೊಂದು ಈಡೇರುವ ಸಂಕೇತ ತೋರುತ್ತಿದೆ. ಕುಟುಂಬದಲ್ಲಿ ಭಿನ್ನಮತ ನಿವಾರಣೆ. ಉದ್ಯೋಗ ಅವಕಾಶ ಲಭ್ಯ.

ಮಿಥುನ
ನಿಮ್ಮ  ಗುರಿ ಈಡೇರಿಸಲು ಕಟಿಬದ್ಧರಾಗಿ. ಅದರಲ್ಲಿ ಹಿಂಜರಿಕೆ ಬೇಕಿಲ್ಲ. ನಿಮ್ಮ ಅವಕಾಶ ಕಿತ್ತುಕೊಳ್ಳಲು ಇತರರಿಗೆ ಅವಕಾಶ ಕೊಡಬೇಡಿ.

ಕಟಕ
ವೃತ್ತಿಯಲ್ಲಿ ನಿಮಗೆ ಪೂರಕವಾದ ವಾತಾವರಣ. ಪ್ರತಿಕೂಲ ಸನ್ನಿವೇಶವೂ ನಿಮಗೆ ಅನುಕೂಲವಾಗಿ ಬದಲಾಗುವುದು. ಕೌಟುಂಬಿಕ ಸಹಕಾರ.

ಸಿಂಹ
ವೃತ್ತಿಯಲ್ಲಿ  ನಿಮ್ಮ ಅಭಿಪ್ರಾಯಗಳಿಗೆ ಇತರರಿಂದ ಮಾನ್ಯತೆ ದೊರಕುವುದು. ಬಂಧುಗಳೊಡನೆ ಕಲಹ ಸಂಭವ. ಸಹನೆ ಕಾಯ್ದುಕೊಳ್ಳಿರಿ.

ಕನ್ಯಾ
ನಿಮಗೆ ಅಚ್ಚರಿ ತರುವ ಬೆಳವಣಿಗೆ ಸಂಭವಿಸಬಹುದು. ಇದು ನಿಮಗೆ ಪೂರಕವೇ ಆಗಿರುವುದು. ಹಾಗಾಗಿ ಆತಂಕ ಬೇಡ. ಆರ್ಥಿಕ ಉನ್ನತಿ.

ತುಲಾ
ವೃತ್ತಿಯಲ್ಲಿ ಎಚ್ಚರದಿಂದಿರಿ. ನಿಮ್ಮ ಪ್ರಯತ್ನ ವಿಫಲಗೊಳಿಸಲು ಕೆಲವರು ಯತ್ನಿಸುವರು. ನಿಮ್ಮ ಕೆಲಸದ ಶ್ರೇಯಸ್ಸು ಕಸಿದುಕೊಳ್ಳಲು ಪ್ರಯತ್ನಿಸುವರು.

ವೃಶ್ಚಿಕ
ಜನರ ಮಧ್ಯೆ ಹೆಚ್ಚು ಪ್ರಬುದ್ಧತೆಯಿಂದ ವರ್ತಿಸಿರಿ. ಇಲ್ಲವಾದರೆ ಅಪಖ್ಯಾತಿ ಉಂಟಾದೀತು. ನಿಮ್ಮ ಹೆಸರು ಕೆಡಿಸಲು ಕೆಲವರ ಯತ್ನ ಸಾಗುವುದು.

ಧನು
ನಿಮ್ಮ ಬದುಕಿನಲ್ಲಿ ಮಹತ್ವದ ಬದಲಾವಣೆ ಆದೀತು. ಆತ್ಮೀಯ ಸಂಬಂಧವೊಂದು ನಿರ್ಣಾಯಕ ಹಂತ ತಲುಪುವುದು. ಎಲ್ಲರ ಸಹಕಾರ ಲಭ್ಯ.

ಮಕರ
ಉದ್ಯಮದಲ್ಲಿ , ವ್ಯವಹಾರದಲ್ಲಿ ಮೇಲುಗೈ ಸಾಧಿಸುವಿರಿ. ನಿಮ್ಮ ವಿರೋಧಿಗಳು ಸೋಲು ಕಾಣುವರು. ಆರ್ಥಿಕ ಬಿಕ್ಕಟ್ಟು ನಿವಾರಣೆ.

ಕುಂಭ
ಕೌಟುಂಬಿಕ ಬೇಡಿಕೆ ಈಡೇರಿಸಲು ಆದ್ಯತೆ ಕೊಡಿ. ಇನ್ನಷ್ಟು ಕಾಲ ಅದನ್ನು ಮುಂದೂಡುತ್ತಾ ಬರಬೇಡಿ. ಆಪ್ತರ ನೆರವು ಲಭ್ಯ.

ಮೀನ
ಬಹುಕಾಲದಿಂದ ಬಾಕಿ ಉಳಿದಿದ್ದ ಕಾರ್ಯವು ಇಂದು ಮುಗಿಯುವುದು. ಆರ್ಥಿಕ ಲಾಭ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!