ಮತ್ತೆ ಆಕ್ರಮಣಕಾರಿ ಕೃತ್ಯ ಎಸಗಿದ ಉತ್ತರ ಕೊರಿಯಾ: ಅಣ್ವಸ್ತ್ರ ಪ್ರಯೋಗದ ವಿರುದ್ಧ ಅಮೆರಿಕ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಉತ್ತರ ಕೊರಿಯಾ ಮತ್ತೆ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿದೆ. ಎರಡು ವಾರಗಳ ಬಳಿಕ ಮತ್ತೊಂದು ಆಕ್ರಮಣಕಾರಿ ಕೃತ್ಯಕ್ಕೆ ಕೈ ಹಾಕಿದೆ. ಉತ್ತರ ಕೊರಿಯಾದ ನಡೆಗೆ ಅಮೆರಿಕ ಆಕ್ರೋಶ ವ್ಯಕ್ತಪಡಿಸಿದ್ದು, ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿದರೆ, ಆ ದೇಶದಲ್ಲಿ ಕಿಮ್ ಆಡಳಿತ ಕೊನೆಗೊಳ್ಳಲಿದೆ ಎಂದು ಎಚ್ಚರಿಸಿದೆ. ಉತ್ತರ ಕೊರಿಯಾ ಪೂರ್ವ ಕರಾವಳಿ ಪ್ರದೇಶದ ಟಾಂಗ್‌ಚಾನ್ ಮೇಲೆ ಕ್ಷಿಪಣಿ ಪರೀಕ್ಷೆ ನಡೆಸಿದೆ ಎಂದು ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಎರಡು ಕ್ಷಿಪಣಿಗಳು ಸಮುದ್ರ ಮಟ್ಟದ 24 ಕಿ.ಮೀ ಎತ್ತರದಿಂದ ಸುಮಾರು 230 ಮೀಟರ್ ದೂರದವರೆಗೆ ಹಾರಿದೆ ಎಂದು ವಿವರಿಸಲಾಗಿದೆ. ಉತ್ತರ ಕೊರಿಯಾದ ಕ್ರಮವನ್ನು ಖಂಡಿಸುತ್ತಾ ಕ್ಷಿಪಣಿ ಪರೀಕ್ಷೆ ನಡೆಸಿ ಪ್ರಚೋದನಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಯುಎನ್ ಸೆಕ್ಯುರಿಟಿ ಕೌನ್ಸಿಲ್ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಗಳ ನಿಷೇಧವನ್ನು ಉತ್ತರ ಕೊರಿಯಾ ಉಲ್ಲಂಘಿಸಿದೆ ಎಂದರು.

ಉತ್ತರ ಕೊರಿಯಾದ ಇತ್ತೀಚಿನ ಪರೀಕ್ಷೆಗಳ ಬಗ್ಗೆ ದಕ್ಷಿಣ ಕೊರಿಯಾದ ಅಧಿಕಾರಿಗಳು ಯುಎಸ್ ಮತ್ತು ಜಪಾನ್‌ನೊಂದಿಗೆ ಮಾತುಕತೆ ನಡೆಸಿದ್ದಾರೆ. ಉತ್ತರ ಕೊರಿಯಾದಿಂದ ಎದುರಾಗಿರುವ ‘ಪರಮಾಣು’ ಬೆದರಿಕೆಯನ್ನು ಎದುರಿಸಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ಮೂರು ದೇಶಗಳ ನಾಯಕರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!