ದಿನಭವಿಷ್ಯ| ಇತರರ ಜತೆ ವ್ಯವಹರಿಸುವಾಗ ಮಾನವೀಯ ಸ್ಪರ್ಶ ಇರಲಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಒತ್ತಡಗಳು ನಿವಾರಣೆ. ಎಲ್ಲ ಕ್ಷೇತ್ರಗಳಲ್ಲಿ ಇಂದು ನಿಮಗೆ ಒಳಿತಾಗಲಿದೆ. ಕುಟುಂಬ ಸದಸ್ಯರ ಬೆಂಬಲ ನಿಮ್ಮೊಂದಿಗಿದೆ. ಆರ್ಥಿಕ ಅಡಚಣೆ ನಿವಾರಣೆ.

ವೃಷಭ
ಚಿಂತೆಗಳನ್ನು ಬದಿಗಿಟ್ಟು ಆಪ್ತರೊಂದಿಗೆ ಸಮಯ ಕಳೆಯಿರಿ. ಇತರರ ಜತೆ ವ್ಯವಹರಿಸುವಾಗ ಮಾನವೀಯ ಸ್ಪರ್ಶ ಇರಲಿ. ಯಾಂತ್ರಿಕವಾಗಿ ಪರಿಗಣಿಸಬೇಡಿ.

ಮಿಥುನ
ಹಳೆ ನೆನಪುಗಳನ್ನು ಕೆದಕುವ ಪ್ರಸಂಗ ಒದಗಬಹುದು. ಕೆಲಸದ ಮೇಲೆ ಇದು ಪರಿಣಾಮ ಬೀರಬಹುದು. ಕೌಟುಂಬಿಕ ಸಹಕಾರ.

ಕಟಕ
ಕ್ಲಿಷ್ಟಕರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಿರಿ. ಅಪರಾಹ್ನದ ನಂತರ ಒತ್ತಡದಿಂದ ನಿರಾಳತೆ ಒದಗಲಿದೆ. ಕೌಟುಂಬಿಕ ನೆಮ್ಮದಿ.

ಸಿಂಹ
ವೈಯಕ್ತಿಕ ಭಿನ್ನಮತವನ್ನು ಸೌಹಾರ್ದದಿಂದ ಪರಿಹರಿಸಲು ಗಮನ ಕೊಡಿ. ಸಂಘರ್ಷವನ್ನು ಆದಷ್ಟೂ  ತಪ್ಪಿಸಿರಿ. ಮನಸ್ಸು ಕೆಡಿಸಿಕೊಳ್ಳದಿರಿ.

ಕನ್ಯಾ
ಪ್ರೀತಿಯ ಅಥವಾ ಸಂಬಂಧದ ವಿಷಯದಲ್ಲಿ ನಿರಾಶೆ ಉಂಟಾದೀತು. ಆದರೆ ಇದು ನಿಮ್ಮ  ವ್ಯಕ್ತಿತ್ವ ಕ್ಕೆ ಕುಂದು ತಾರದಿರಲಿ. ತಲೆ ಎತ್ತಿ ನಡೆಯಿರಿ.

ತುಲಾ
ಕತೆಯಲ್ಲಿ ತಿರುವನ್ನು ಎಲ್ಲರೂ ಬಯಸುತ್ತಾರೆ. ನಿಮ್ಮದೂ ಇಂದು ಇದೇ ಸ್ಥಿತಿ. ದಿನದ ಅಂತ್ಯದಲ್ಲಿ ದೊಡ್ಡ ತಿರುವು ಎದುರಿಸುವಿರಿ. ಅದು ನಿಮ್ಮ ಒಳಿತಿಗೇ.

ವೃಶ್ಚಿಕ
ಭಾವನಾತ್ಮಕ ಸಂಘರ್ಷ. ಕೆಲವು ವಿಷಯಗಳು ಮನಸ್ಸು ಹಾಳು ಮಾಡುತ್ತವೆ. ಆದರೆ ದಿನದಂತ್ಯಕ್ಕೆ ಮನಸ್ಸಿಗೆ ನಿರಾಳವಾಗುವ ಬೆಳವಣಿಗೆ.

ಧನು
ಉಲ್ಲಸಿತ ಮನೋಭಾವ. ವೈಯಕ್ತಿಕ ಬದುಕು ಸಂತೋಷಕರ. ಆದರೆ ಉದ್ಯೋಗದ ಕ್ಷೇತ್ರದಲ್ಲಿ ಸಣ್ಣಪುಟ್ಟ ಕಿರಿಕಿರಿ ಬಾಧಿಸಬಹುದು. ಅವನ್ನು ಕಡೆಗಣಿಸಿ.

ಮಕರ
ಇತರರು ನಿಮ್ಮ ಒಳ್ಳೆತನವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ. ಕೆಲ ವಿಷಯಗಳಲ್ಲಿ ನೇರವಾಗಿ ವ್ಯವಹರಿಸಿ. ಮುಚ್ಚುಮರೆ ಬೇಡ.

ಕುಂಭ
ಇತರರ ಮೇಲೆ ನಿಮ್ಮ ಅಭಿಪ್ರಾಯ ಹೇರಬೇಡಿ. ಅವರಿಂದ ಒತ್ತಾಯದಿಂದ ಕೆಲಸ ತೆಗೆಯಬೇಡಿ. ಅದು ಸಂಬಂಧ ಹಾಳು ಮಾಡಬಹುದು.

ಮೀನ
ಪ್ರತಿ ಹೆಜ್ಜೆಯನ್ನೂ ಯೋಚಿಸಿ ಇಡಿ. ಕೆಲವು ಕ್ರಮಗಳು ಪ್ರತಿಕೂಲ ಪರಿಣಾಮ ಬೀರಬಹುದು. ಸಂಬಂಧ ಕೆಡದಂತೆ ನೋಡಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!