ದೇಶಾದ್ಯಂತ ವಿನಾಯಕ ಚತುರ್ಥಿ ಸಂಭ್ರಮ: ಶ್ರದ್ಧೆ, ಭಕ್ತಿಯಿಂದ ವಿಘ್ನ ನಿವಾರಕನನ್ನು ಪೂಜಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ ಕಳೆಕಟ್ಟಿದೆ. ಪ್ರತಿ ಬೀದಿಯಲ್ಲೂ ಇಂದು ಗಣೇಶನದ್ದೇ ಕಾರುಬಾರು. ಮನೆಗಳ ಮುಂದೆ  ಬಣ್ಣಬಣ್ಣದ ರಂಗೋಲಿ ಡೊಳ್ಳು ಹೊಟ್ಟೆ ಗಣಪನನ್ನು ಸ್ವಾಗತಿಸುತ್ತವೆ. ನೂರೆಂಟು ವಿಘ್ನ ನಿವಾರಕನ ದಿನವನ್ನು ಇಂದು ಎಲ್ಲೆಡೆ ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಗಣಪತಿಯ ಆಶೀರ್ವಾದವೊಂದಿದ್ದರೆ ಎಲ್ಲಾ ಕೆಲಸ ಕಾರ್ಯಗಳು ನಿರ್ವಿಘನ್ವಾಗಿ ನೆರವೇರುತ್ತವೆ. ಇಂತಹ ದಿನ ಮತ್ತಷ್ಟು ಶ್ರದ್ದೆ ಭಕ್ತಯಿಂದ ಗಣಪನನ್ನು ಪೂಜಿಸಿದರೆ, ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ.

ಸೆಪ್ಟೆಂಬರ್‌ನಿಂದ ಭಾದ್ರಪದ ಮಾಸ ಆರಂಭವಾಗಿದೆ. ಭಾದ್ರಪದ ಮಾಸದ ಶುಕ್ಲಪಕ್ಷದ ನಾಲ್ಕನೇ ದಿನದಂದು ವಿನಾಯಕ ಚತುರ್ದಶಿ ಹಬ್ಬವನ್ನು ಆಚರಿಸಲಾಗುತ್ತದೆ. ಹಣೇಶನ ಆಶೀರ್ವಾದ ಪಡೆಯಲು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ವಿನಾಯಕನ ಹಬ್ಬ ಆಚರಿಸಬೇಕು. ನಂತರ ಬೆಲ್ಲಕ್ಕೆ ತುಪ್ಪ ಸೇರಿಸಿ ಗಣೇಶನಿಗೆ ಅರ್ಪಿಸಿ. ನಂತರ ಇದನ್ನು ಹಸುವಿಗೆ ತಿನ್ನಿಸಿ.

ವಿನಾಯಕ ಚತುರ್ಥಿಯಂದು ಗರಿಕೆ ಹುಲ್ಲಿನಿಂದ ಪೂಜೆ ಮಾಡಿದರೆ.. ತುಂಬಾ ಒಳ್ಳೆಯದು. ಗರಿಕೆ ಗಣೇಶನಿಗೆ ತುಂಬಾ ಪ್ರಿಯ. ಹಾಗಾಗಿಯೇ ಪೂಜೆಯಲ್ಲಿ ಇದನ್ನು ವಿಶೇಷವಾಗಿ ಬಳಸುತ್ತಾರೆ. ಆದ್ದರಿಂದ 11 ಕಟ್ಟುಗಳ ಗರಿಕೆ ಹುಲ್ಲನ್ನು ಒಂದು ಹಾರದ ರೂಪದಲ್ಲಿ ತಯಾರಿಸಿ ಗಣೇಶನಿಗೆ ಮಾಲೆ ಹಾಕಿ. ಹೂವು ಫಲ-ಪುಷ್ಪ ಗಂಧಗಳಿಂದ ಪೂಜಿಸಿ, ನೈವೇದ್ಯ ಮಾಡಿ ಇಷ್ಟಾರ್ಥ ಪ್ರಾಪ್ತಿಯಾಗುತ್ತದೆ.

ನಿತ್ಯವೂ ಗಣಪತಿಗೆ ಅಭಿಷೇಕವನ್ನು ಮಾಡುವುದರಿಂದ ವಿಶೇಷ ಫಲಗಳು ಸಿಗುತ್ತವೆ ಎಂಬ ನಂಬಿಕೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!