Saturday, December 9, 2023

Latest Posts

ದಿನಭವಿಷ್ಯ| ಕೆಲದಿನಗಳ ಒತ್ತಡ ನಿವಾರಣೆ, ಆರ್ಥಿಕ ಲಾಭದ ಸೂಚನೆಗಳಿವೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ವೃತ್ತಿಯಲ್ಲಿನ ಒತ್ತಡ ಇಂದು ಕಡಿಮೆ ಆಗುವುದು. ಹಾಗಾಗಿ ನೀವಿಂದು ನಿರಾಳತೆ ಅನುಭವಿಸುವಿರಿ. ದೈಹಿಕ ಕ್ಷಮತೆ ಉಳಿಸಿಕೊಳ್ಳಲು ಗಮನ ಕೊಡಿ.

ವೃಷಭ
ಕ್ಲಿಷ್ಟಕರ ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಿ. ದೈನಂದಿನ ಜಂಜಡಗಳಿಂದ ರೋಸುವಿರಿ. ಧ್ಯಾನ, ಪ್ರಾರ್ಥನೆ ನಿಮಗೆ ನೆರವಾಗಬಹುದು.

ಮಿಥುನ
ಕೆಲದಿನಗಳ ಒತ್ತಡ ನಿವಾರಣೆ. ಆರ್ಥಿಕ ಲಾಭದ ಸೂಚನೆಗಳಿವೆ. ಬಂಧುಗಳಿಂದ ಕಿರಿಕಿರಿ. ಅವರನ್ನು ಸರಿಯಾಗಿ ನಿಭಾಯಿಸಿ. ಸಂಘರ್ಷ ತಪ್ಪಿಸಿರಿ.

ಕಟಕ
ನಿಮ್ಮ ಪಾಲಿಗೆ ಇಂದು ಸಾಧಾರಣ ದಿನ. ದೊಡ್ಡ ಯಶಸ್ಸು ಕಾಣಲಾರಿರಿ. ಹಾಗೆಂದು ಸೋಲೂ ಇಲ್ಲ. ಸಂತೋಷ ಮತ್ತು ಬೇಸರ ಎರಡೂ ನಿಮ್ಮ ಪಾಲಿಗಿದೆ.

ಸಿಂಹ
ಖರ್ಚು ಕಡಿಮೆ ಮಾಡಿ ಉಳಿತಾಯಕ್ಕೆ ಹೆಚ್ಚು ಗಮನ ಕೊಡಲು ಸಕಾಲ. ಅನವಶ್ಯ ವಸ್ತು ಖರೀದಿಯ ಹುಮ್ಮಸ್ಸು ನಿಯಂತ್ರಿಸಿ. ಕೌಟುಂಬಿಕ ಸಮಾಧಾನ.

ಕನ್ಯಾ
ನಿಮಗೆ ಪೂರಕವಾದ ಮಹತ್ವದ ಮಾಹಿತಿ ನಿಮಗಿಂದು ಸಿಗಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಸಹೋದ್ಯೋಗಿ ಜತೆ ಸಂಘರ್ಷ ಸಂಭವ.

ತುಲಾ
ಈ ದಿನ ನೆಮ್ಮದಿಯಿಂದ ಕಳೆಯಬೇಕಾದರೆ ನೀವು ಖಾಸಗಿ ಮತ್ತು ವೃತ್ತಿ ಬದುಕಲ್ಲಿ ಕೆಲವು ಹೊಂದಾಣಿಕೆ ಮಾಡಿಕೊಳ್ಳಬೇಕು. ಜಗಳದಿಂದ ದೂರವಿರಿ.

ವೃಶ್ಚಿಕ
ಇಂದು ಗೊಂದಲದ ಮನಸ್ಥಿತಿ. ಹಲವು ವಿಷಯಗಳ ಬಗ್ಗೆ ಚಿಂತೆ. ಇತರರ ಜತೆ ಸಮಾಧಾನದಿಂದ  ವರ್ತಿಸಿ. ನಿಮ್ಮೊಳಗೂ ಶಾಂತ ಮನಸ್ಥಿತಿ ಅವಶ್ಯ.

ಧನು
ಒತ್ತಡದ ದಿನ. ಸಹನೆ, ಧೈರ್ಯದಿಂದ ಅದನ್ನು ನಿಭಾಯಿಸಬೇಕು. ಇತರರ ಮಾತು ಕೇಳಿ ತಪ್ಪು ನಿರ್ಧಾರ ತಾಳಬೇಡಿ. ಕೌಟುಂಬಿಕ ಅಸಮಾಧಾನ.

ಮಕರ
ದಿನವಿಡೀ ಒತ್ತಡ. ಬಿಡುವಿಲ್ಲದ ಕಾರ್ಯ. ನೆರವಿನ ಹಸ್ತ ಸಿಗದು. ಎಲ್ಲವನ್ನೂ ನೀವೇ ನಿಭಾಯಿಸಬೇಕು. ಬಂಧುಗಳಿಂದ ಶುಭ ಸುದ್ದಿ ಸಿಕ್ಕೀತು.

ಕುಂಭ
ನಿಮ್ಮ ಪ್ರಗತಿಗೆ ಅಡ್ಡಿಗಳು.ಹಿತಶ್ರುಗಳಿಂದ ಮೋಸ. ಅಧಿಕ ಹೊಣೆಗಾರಿಕೆ. ಸಂಜೆ ವೇಳೆಗೆ ತಲೆನೋವು ಬಾಧಿಸಬಹುದು. ಹೂಡಿಕೆಯಿಂದ ಲಾಭ.

ಮೀನ
ಮನೆಯಲ್ಲಿನ ಕೆಲವು ಬೆಳವಣಿಗೆ ಚಿಂತೆಗೆ ಕಾರಣವಾಗುವುದು. ಹಿರಿಯರಿಗೆ ಅನಾರೋಗ್ಯ. ಸಂಗಾತಿ ಜತೆಗೆ ಭಿನ್ನಮತ. ಸಹನೆ ಕಾಯ್ದುಕೊಳ್ಳಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!