ಟೀಮ್ ಇಂಡಿಯಾದ ಕ್ಲೀನ್ ಸ್ವೀಪ್ ಕನಸಿಗೆ ಆಸ್ಟ್ರೇಲಿಯಾ ಬ್ರೇಕ್: ಕಾಂಗರೂ ಪಡೆಗೆ 66 ರನ್ ಗಳ ಗೆಲುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೀಮ್ ಇಂಡಿಯಾ ವಿರುದ್ಧ 3ನೇ ಹಾಗೂ ಅಂತಿಮ ಪಂದ್ಯವನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಸರಣಿ ಕ್ಲೀನ್ ಸ್ವೀಪ್ ನಿಂದ ತಪ್ಪಿಸಿಕೊಂಡಿದೆ.

353 ರನ್ ಟಾರ್ಗೆಟ್ ನೀಡಿ ಟೀಂ ಇಂಡಿಯಾವನ್ನು 286 ರನ್‌ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. 3ನೇ ಏಕದಿನದಲ್ಲಿ ಆಸ್ಟ್ರೇಲಿಯಾ ರನ್ 66 ಗೆಲುವು ಕಂಡಿದೆ. ಆದರೆ ಸರಣಿ 2-1 ಅಂತರದಲ್ಲಿ ಭಾರತದ ಕೈವಶವಾಗಿದೆ.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಜೊತೆಯಾಟದ ಮೂಲಕ ಟೀಂ ಇಂಡಿಯಾ ರನ್ ಚೇಸ್ ಆತಂಕ ದೂರ ಮಾಡಿತು. ಆದರೆ ರೋಹಿತ್ ಶರ್ಮಾ 57 ಎಸೆತದಲ್ಲಿ 81 ರನ್ ಸಿಡಿಸಿ ಔಟಾದರು.

ವಿರಾಟ್ ಕೊಹ್ಲಿ ದಿಟ್ಟ ಹೋರಾಟ ನೀಡಿ ಹಾಫ್ ಸೆಂಚುರಿ ಪೂರೈಸಿದರು. ಆದರೆ ಕೊಹ್ಲಿ ಆಟ 56 ರನ್‌ಗೆ ಅಂತ್ಯವಾಯಿತು. ಇತ್ತ ಕೆಎಲ್ ರಾಹುಲ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. 26 ರನ್ ಸಿಡಿಸಿ ನಿರ್ಗಮಿಸಿದರು. ಶ್ರೇಯಸ್ ಅಯ್ಯರ್ ಅಬ್ಬರ ಆರಂಭಗೊಳ್ಳುತ್ತಿದ್ದಂತೆ ವಿಕೆಟ್ ಪತನಗೊಂಡಿತು. ಅಯ್ಯರ್ 43 ಎಸೆತದಲ್ಲಿ 48 ರನ್ ಸಿಡಿಸಿ ಔಟಾದರು.

ಸೂರ್ಯಕುಮಾರ್ ಕೇವಲ 8ರನ್ ಸಿಡಿಸಿ ಔಟಾದರು. ರವೀಂದ್ರ ಜಡೇಜಾ ನಡೆಸಿದ ಪ್ರಯತ್ನ ಕೈಗೂಡಲಿಲ್ಲ. ಇತ್ತ ಕುಲ್ದೀಪ್ ಯಾದವ್ 2 ರನ್ ಸಿಡಿಸಿ ನಿರ್ಗಮಿಸಿದರು. ರವೀಂದ್ರ ಜಡೇಜಾ ದಿಟ್ಟ ಹೋರಾಟ ನೀಡಿದರೂ ಗೆಲುವಿನ ದಡ ಸೇರಲಿಲ್ಲ. ರವೀಂದ್ರ ಜಡೇಜಾ 35 ರನ್ ಸಿಡಿಸಿ ಔಟಾದರು. ಈ ಮೂಲಕ ಟೀಂ ಇಂಡಿಯಾ 49.4 ಓವರ್‌ಗಳಲ್ಲಿ 286 ರನ್‌ಗೆ ಆಲೌಟ್ ಆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!