Monday, December 11, 2023

Latest Posts

ದಿನಭವಿಷ್ಯ| ನಿಮ್ಮ ಮೆದು ಧೋರಣೆಯ ಲಾಭ ಪಡೆದು ಕೆಲವರು ಅವರ ಕೆಲಸಕ್ಕೆ ಬಳಸಿಕೊಳ್ಳುವರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮ ಏಕಾಗ್ರಚಿತ್ತತೆ ಕೆಡಿಸುವ ವಿದ್ಯಮಾನ ಉಂಟಾದೀತು. ಅತ್ತ ಗಮನ ಹರಿಸದಿರಿ. ಆತ್ಮೀಯರ ಜತೆಗಿನ ಮನಸ್ತಾಪವನ್ನು ಸರಿಪಡಿಸಿರಿ.

ವೃಷಭ
ಆರ್ಥಿಕವಾಗಿ ನಿಮ್ಮ ನಿರ್ಧಾರ ಫಲ ನೀಡಲಿದೆ. ಇದರಿಂದ ಹಣಕಾಸು ಪರಿಸ್ಥಿತಿ ದೃಢಗೊಳ್ಳಲಿದೆ. ಸಹೋದ್ಯೋಗಿಗಳ ಸಹಕಾರ.

ಮಿಥುನ
ಇತರರು ತಮ್ಮ ಸಮಸ್ಯೆ ಪರಿಹರಿಸಲು ನಿಮ್ಮನ್ನು  ಕೋರಬಹುದು. ಆದರೆ  ನೀವೇ ಅವರ ಸಮಸ್ಯೆಯಲ್ಲಿ ಸಿಲುಕಿಕೊಳ್ಳದಂತೆ ನೋಡಿಕೊಳ್ಳಿ.

ಕಟಕ
ವಹಿವಾಟಿನಲ್ಲಿ ಉತ್ತಮ ದಿನ.  ಧನಲಾಭ. ಸಮಸ್ಯೆ ನಿವಾರಣೆ. ಕೌಟುಂಬಿಕ ವಿಷಯದಲ್ಲಿ ಭಾವನಾತ್ಮಕ ಸ್ಥಿರತೆ ಸಾಧಿಸುವಿರಿ.

ಸಿಂಹ
ನಿಮ್ಮ ಕಾರ್ಯದಿಂದ ಎಲ್ಲರ ಮೆಚ್ಚುಗೆ ಗಳಿಸುತ್ತೀರಿ. ಹೊಸ ವ್ಯಕ್ತಿ ನಿಮ್ಮ ಜೀವನ ಪ್ರವೇಶಿಸುವರು. ಅವರೊಂದಿಗೆ ಸಂಬಂಧ ಗಾಢಗೊಳ್ಳಬಹುದು.

ಕನ್ಯಾ
ನಿಮ್ಮ ಮೆದು ಧೋರಣೆಯ ಲಾಭ ಪಡೆದು ಕೆಲವರು ಅವರ ಕೆಲಸಕ್ಕೆ  ಬಳಸಿಕೊಳ್ಳುವರು.  ಕೆಲವೊಮ್ಮೆ ಕಠಿಣ ನಿಲುವು ಮುಖ್ಯ.

ತುಲಾ
ಮನೆ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಹೊಣೆಗಾರಿಕೆ. ಸೂಕ್ತ ಸಹಕಾರವೂ ದೊರಕುವುದಿಲ್ಲ. ನೀವೊಬ್ಬರೇ ಕಷ್ಟ ಪಡಬೇಕಾಗುವುದು.

ವೃಶ್ಚಿಕ
ಕೆಲಸದ ಒತ್ತಡ ಹೆಚ್ಚು. ಕೌಟುಂಬಿಕವಾಗಿ ಪ್ರೀತಿಪಾತ್ರರನ್ನು ಕಾಳಜಿಯಿಂದ ನೋಡಿಕೊಳ್ಳಿ. ಕಡೆಗಣಿಸಿದ ಭಾವ ಅವರಿಗೆ ಬಾರದಿರಲಿ.

ಧನು
ಆತ್ಮೀಯರ ಹೃದಯದ ಭಾವನೆಗೆ ಸೂಕ್ತವಾಗಿ ಸ್ಪಂದಿಸಿ.  ಇಲ್ಲದಿದ್ದರೆ ನೋವುಣ್ಣುತ್ತೀರಿ. ಆಹಾರ ಸೇವನೆಯಲ್ಲಿ ಇತಿಮಿತಿಯಿರಲಿ. ಹೊಟ್ಟೆ ಕೆಡಬಹುದು.

ಮಕರ
ಕೆಲಸದ ಹೊಣೆ ಹೆಚ್ಚು. ಆದರೆ ನಿರೀಕ್ಷಿತ ಫಲ ಸಿಗುವುದಿಲ್ಲ. ಆರೋಗ್ಯ ಸಮಸ್ಯೆಯೂ ಕಾಡಬಹುದು. ವಿವಾಹಾಕಾಂಕ್ಷಿಗಳಿಗೆ ಶುಭ ಬೆಳವಣಿಗೆ.

ಕುಂಭ
ಏರುಪೇರುಗಳಿಲ್ಲದ ಸಹಜ ದಿನ. ಮನೆ ಮತ್ತು ವೃತ್ತಿಯಲ್ಲಿ ಕೆಲಸದ ಹೊರೆ ಕಡಿಮೆ. ಆತ್ಮೀಯ ಸಂಬಂಧವೊಂದು ಗಟ್ಟಿಗೊಳ್ಳುವುದು.

ಮೀನ
ಕೆಲಸದ ಒತ್ತಡ ಹೆಚ್ಚು. ಆದರೂ ಸಂಜೆ ವೇಳೆಗೆ ಎಲ್ಲವನ್ನು ಪೂರೈಸುವಿರಿ.  ಆರೋಗ್ಯ  ಸಮಸ್ಯೆ ಹೊಂದಿರುವವರು ಅದರಿಂದ ನಿರಾಳತೆ ಪಡೆಯುವಿರಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!