ದಿನಭವಿಷ್ಯ| ವಿವೇಕದಿಂದ ಯೋಚಿಸಿದರೆ ಆಪ್ತರು ಮಾಡುವ ವಂಚನೆ ಅರಿವಿಗೆ ಬಂದೀತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಕೆಲಸದಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಒತ್ತಡ ಅಧಿಕ. ಖಾಸಗಿ ಅಥವಾ ವೃತ್ತಿಪರಿಸ್ಥಿತಿಯ ಕುರಿತು ಅತಿಯಾಗಿ ಚಿಂತಿಸಲು ಹೋಗದಿರಿ. ಸಮಾಧಾನಚಿತ್ತವಿರಲಿ.

ವೃಷಭ
ಕೌಟುಂಬಿಕ ಪರಿಸರ ಸೌಹಾರ್ದಪೂರ್ಣ. ವೈಮನಸ್ಸು ನಿವಾರಣೆ. ಸಾಂಸಾರಿಕ ಸಮಸ್ಯೆ ಪರಿಹಾರ. ಆದರೆ ಹಣಕಾಸು ಒತ್ತಡ ಕಾಡಬಹುದು.

ಮಿಥುನ
ಯೋಜಿಸಿ ಕಾರ್ಯ ಎಸಗಿ. ಇಲ್ಲವಾದರೆ ಕೆಲವು ಗೊಂದಲಗಳು ಕಾಡಬಹುದು. ಸಂಬಂಧದಲ್ಲಿ ಬಿರುಕು ಮೂಡದಂತೆ ಎಚ್ಚರ ವಹಿಸಿ, ವಾಗ್ವಾದ ತಪ್ಪಿಸಿ.

ಕಟಕ
ಉದ್ಯೋಗದಲ್ಲಿ ಹೊಸ ಅವಕಾಶ ತೆರೆಯಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಿ. ಇತರರ ಮೇಲಿನ ಅಸಮಾಧಾನ ತ್ಯಜಿಸಿ. ಅದರಿಂದ ನಿಮ್ಮ ಮನಸ್ಸಿಗೇ ಹಾನಿ.

ಸಿಂಹ
ನಿಮ್ಮ ಭಾವನೆಗಳನ್ನು ಅದುಮಿಟ್ಟುಕೊಂಡು ನೋವು ಅನುಭವಿಸು ವಿರಿ. ಕೆಲವು ಅಭಿಪ್ರಾಯ ಮುಕ್ತವಾಗಿ ವ್ಯಕ್ತಪಡಿಸುವುದು ನಿಮಗೆ ನೆಮ್ಮದಿ.

ಕನ್ಯಾ
ಮೇಲಧಿಕಾರಿಗಳ ವಿರುದ್ಧವಾಗಿ ನಡಕೊಳ್ಳದಿರಿ. ಅದು ನಿಮಗೆ ಪ್ರತಿಕೂಲ ಆದೀತು. ಕೌಟುಂಬಿಕ ಸಾಮರಸ್ಯ ಕಾಯ್ದುಕೊಳ್ಳಿ.

ತುಲಾ
ಮನೆಯ ಸದಸ್ಯರ ಜತೆ ತಪ್ಪಭಿಪ್ರಾಯ ಉಂಟಾದೀತು. ಅದರಿಂದ ವೈಮನಸ್ಸು. ಮುಕ್ತ ಮಾತುಕತೆಯಿಂದ ಪರಿಸ್ಥಿತಿ ತಿಳಿಗೊಂಡೀತು.

ವೃಶ್ಚಿಕ
ಭಾವನೆಯಿಂದ ಕುರುಡಾಗಿ ವರ್ತಿಸದಿರಿ. ಎಲ್ಲವನ್ನೂ ವಿವೇಕದಿಂದ ವಿವೇಚಿಸಿ. ಆಪ್ತರು ಮಾಡುವ ವಂಚನೆ ಅರಿವಿಗೆ ಬಂದೀತು. ಸೂಕ್ತ ಕ್ರಮ ಕೈಗೊಳ್ಳಿ.

ಧನು
ನಿಮಗೆ ಸಮಸ್ಯೆಯ ಅರಿವಿದೆ. ಆದರೆ ಆ ಕುರಿತು ಏನೂ ಮಾಡದೆ ಕೂತಿದ್ದೀರಿ. ಇನ್ನಾದರೂ ಸಮಸ್ಯೆ ಪರಿಹಾರಕ್ಕೆ ಮುಂದಾಗಿ. ದೃಢ ನಿಲುವು ತಳೆಯಿರಿ.

ಮಕರ
ಸಂಬಂಧದಲ್ಲಿ ಮೂಡಿರುವ ಸಮಸ್ಯೆ ಮುಚ್ಚಿಡಬೇಡಿ. ಅದರ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿ. ತುಸು ಬಗ್ಗಲು ಹಿಂಜರಿಕೆ ತೋರದಿರಿ.

ಕುಂಭ
ಮನೆಯ ಸದಸ್ಯರ ಸಮಸ್ಯೆಗೆ ಸ್ಪಂದಿಸಿರಿ. ಅವರನ್ನು ಕಡೆಗಣಿಸಿದ ಭಾವ ಮೂಡದಂತೆ ನೋಡಿಕೊಳ್ಳಿ. ಇಂದು ಅನವಶ್ಯ ಖರ್ಚು ಹೆಚ್ಚಬಹುದು.

ಮೀನ
ಖಾಸಗಿ ಮತ್ತು ವೃತ್ತಿ ಬದುಕಿನಲ್ಲಿ ಸಮನ್ವಯ ಸಾಧಿಸಿ. ಯಾವುದನ್ನೂ ಕಡೆಗಣಿಸುವುದು ಬೇಡ. ನಿಮ್ಮ ಅಭಿಪ್ರಾಯ ಇತರರ ಮೇಲೆ ಹೇರದಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!