ದಿನಭವಿಷ್ಯ| ಕೆಲ ವಿಚಾರಗಳಲ್ಲಿ ಅಹಂ, ಬಿಗುಮಾನ ತೊರೆದು ವರ್ತಿಸುವುದು ಒಳಿತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಅಂಕಿಅಂಶಗಳ ವಿಷಯದಲ್ಲಿ ಎಚ್ಚರವಿರಿ. ತಪ್ಪು ಘಟಿಸಬಹುದು. ಕೌಟುಂಬಿಕ ವಿಷಯದಲ್ಲಿ ಹರ್ಷದ  ಬೆಳವಣಿಗೆ. ಹಿರಿಯರ ಸಹಕಾರ.

ವೃಷಭ
ಕೌಟುಂಬಿಕ ವಿಷಯ ದಲ್ಲಿ ಏರುಪೇರು ಸಂಭವಿಸಬಹುದು. ಕೆಲ ಬೆಳವಣಿಗೆ ಚಿಂತೆಗೆ ಕಾರಣವಾದೀತು. ಸಮಾಧಾನದಿಂದ ವ್ಯವಹರಿಸಿರಿ.

ಮಿಥುನ
ವೃತ್ತಿಯಲ್ಲಿ ಉನ್ನತಿಯ ಸಂಕೇತ ತೋರುತ್ತಿದೆ. ನಿಮ್ಮ ಯೋಜನೆ ಸರಿಯಾಗಿ ಜಾರಿ ಮಾಡುವುದು ಅಗತ್ಯ. ಮೀನಮೇಷ ಎಣಿಸುತ್ತಾ ಕೂರದಿರಿ.

ಕಟಕ
ಹಣಕಾಸು ಸಮಸ್ಯೆ. ನಯವಂಚಕರ ಕುರಿತು ಎಚ್ಚರಿಕೆಯಿರಲಿ. ಅವರು ಹೇಳಿದ್ದೆಲ್ಲ ನಂಬಬೇಡಿ. ಸರಿಯಾದ ಸಮಯ ನೋಡಿಕೊಂಡು ವ್ಯವಹಾರ ನಡೆಸಿ.

ಸಿಂಹ
ಕೆಲ ವಿಚಾರಗಳಲ್ಲಿ ಅಹಂ, ಬಿಗುಮಾನ ತೊರೆದು ವರ್ತಿಸುವುದು ಒಳಿತು. ಇಲ್ಲವಾದರೆ ವೃಥಾ ಮಾನಸಿಕ ಕ್ಷೆಭೆ ಅನುಭವಿಸುವಿರಿ. ಆರ್ಥಿಕ ಒತ್ತಡ ಹೆಚ್ಚು.

ಕನ್ಯಾ
ಆಪ್ತೇಷ್ಟರ ಕುರಿತು ಅತಿಯಾಗಿ ಚಿಂತಿಸುವಿರಿ. ಕೆಲವು ವಿಷಯ ನಿಮ್ಮ ಮನಸ್ಸು ಕದಡುವುದು. ಅವರ ಹಿತಚಿಂತನೆ ನಿಮ್ಮ ಕಾಳಜಿಯ ವಿಷಯವಾಗಿದೆ.

ತುಲಾ
ಯಾವುದಾದರೂ ಸಮಸ್ಯೆ ಕಾಡುತ್ತಿದ್ದರೆ ಅದು ಇಂದು ಇತ್ಯರ್ಥ ಕಾಣಲಿದೆ. ಆದರೆ ನಿಮ್ಮಿಂದ ಬದ್ಧತೆಯ ಪ್ರಯತ್ನ ಅಗತ್ಯ. ಲಘು ಧೋರಣೆ ತರವಲ್ಲ.

ವೃಶ್ಚಿಕ
ಸವಾಲಿನ ದಿನ. ಯಾವುದೂ ನೀವೂ ಬಯಸಿದಂತೆ ಸಾಗುವುದಿಲ್ಲ. ಆಹಾರದ ವಿಷಯದಲ್ಲಿ ಎಚ್ಚರದಿಂದಿರಿ. ಹೊಟ್ಟೆ ಕೆಡುವ ಸಂಭವ.

ಧನು
ಇಂದೇಕೋ ಉದಾಸೀನತೆ ನಿಮ್ಮನ್ನು ಬಾಧಿಸಲಿದೆ. ಹಾಗಾಗಿ ಮುಖ್ಯ ಕಾರ್ಯವೂ ಬಾಕಿ ಉಳಿಯಲಿದೆ. ಇತರರ ಸಹಕಾರ ಪಡೆದುಕೊಳ್ಳಿ.

ಮಕರ
ಅದೃಷ್ಟ ಇಂದು ನಿಮ್ಮ ಜತೆಗಿಲ್ಲ. ಕಾರ್ಯ ಫಲಿಸದು. ಯಾವುದಾದರೂ ಮುಖ್ಯ ಕಾರ್ಯವಿದ್ದರೆ ಅದನ್ನು ಮುಂದಕ್ಕೆ ಹಾಕುವುದು ಒಳಿತು.

ಕುಂಭ
ಹೆಚ್ಚು ಸೂಕ್ಷ್ಮವಾಗಿ ಇಂದು ವರ್ತಿಸುವಿರಿ. ಸಣ್ಣ ಘಟನೆಗೂ ಅತಿಯಾಗಿ ಪ್ರತಿಕ್ರಿಯೆ ತೋರುವಿರಿ. ತಾಳ್ಮೆ  ಅತ್ಯವಶ್ಯ. ಕೋಪತಾಪ ನಿಯಂತ್ರಿಸಿ.

ಮೀನ
ಮಾನಸಿಕ ಬಳಲಿಕೆ. ಇದು ನಿಮ್ಮ ದೇಹದ ಮೇಲೂ ಪರಿಣಾಮ ಬೀರುವುದು. ನಿಮ್ಮ ಸುತ್ತ ವಂಚಕರಿದ್ದಾರೆ. ಅವರ ಕುರಿತಂತೆ ತುಸು ಎಚ್ಚರ ವಹಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!