ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಹಿಮಪಾತದಿಂದ ಓರ್ವ ಯೋಧ ಹುತಾತ್ಮರಾಗಿರುವ ಘಟನೆ ಲಡಾಖ್‌ನಲ್ಲಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಲಡಾಖ್‌ನ ಕುನ್ ಪರ್ವತದಲ್ಲಿ ಹಿಮದಡಿ ಸಿಲುಕಿ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದು, ಇನ್ನೂ ಮೂವರು ಯೋಧರು ನಾಪತ್ತೆಯಾಗಿದ್ದಾರೆ. ಇದೀಗ ಕಾಣೆಯಾಗಿರುವವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಭಾನುವಾರ ಭಾರತೀಯ ಸೈನಿಕರ ದಿನನಿತ್ಯದ ತರಬೇತಿ ಚಟುವಟಿಕೆಯ ವೇಳೆ ಈ ದುರಂತ ಸಂಭವಿಸಿದೆ. ಭಾರತೀಯ ಸೇನೆಯ ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಸ್ಕೂಲ್( HAWS ),ರಕ್ಷಣಾ ವಿಭಾಗದ 40 ಸಿಬ್ಬಂದಿ ಮೌಂಟ್ ಕುನ್ ಬಳಿ ತರಬೇತಿಯಲ್ಲಿ ತೊಡಗಿದ್ದರು ಎಂದು ಸೇನೆ ತಿಳಿಸಿದೆ.
ಸೋಮವಾರ ಓರ್ವ ಯೋಧನ ಮೃತದೇಹ ಪತ್ತೆಯಾಗಿದ್ದು, ಭಾರೀ ಹಿಮದಡಿ ಸಿಲುಕಿರುವ ಸೈನಿಕರನ್ನು ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸೇನೆ ತಿಳಿಸಿದೆ.