ದಿನಭವಿಷ್ಯ| ಇಂದು ಕೆಲವರ ವರ್ತನೆಯಿಂದ ನಿಮ್ಮ ಮನಶಾಂತಿ ಹಾಳಾದೀತು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಅಗತ್ಯವಿಲ್ಲದಿದ್ದರೂ ಅತಿಯಾದ ಖರ್ಚು ಒದಗಲಿದೆ. ಮಿತವ್ಯಯ ಸಾಧಿಸಲು ಪ್ರಯತ್ನಿಸಿ. ಆಪ್ತ ಬಂಧುಗಳ ಜತೆ ಮನಸ್ತಾಪ ಸಂಭವ. ಸಹನೆ ಕಳಕೊಳ್ಳದಿರಿ.

ವೃಷಭ
ಮನೆಯಲ್ಲಿನ ಕೆಲವು ವಿಷಯಗಳು ನೆಮ್ಮದಿ ಕದಡುತ್ತವೆ. ಆಪ್ತರ ಕಾಳಜಿಯು ಮನಶ್ಯಾಂತಿ ನೆಲೆಸಲು ಕಾರಣವಾಗುವುದು. ಆರ್ಥಿಕ ಉನ್ನತಿ.

ಮಿಥುನ
ಇಂದು  ಕೆಲವರ ವರ್ತನೆಯಿಂದ  ನಿಮ್ಮ ಮನಶ್ಯಾಂತಿ ಹಾಳಾದೀತು. ಅವರ ನಡೆನುಡಿ ಅಸಹನೀಯ ಎನಿಸಬಹುದು. ಸಹನೆ ಕಾಯ್ದುಕೊಳ್ಳಿ.

ಕಟಕ
ಮನೆಯಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಅದರಿಂದ ನೆಮ್ಮದಿ ಹಾಳು. ಕೆಲವರು ನಿಮಗೆ ಅಡ್ಡಗಾಲು ಹಾಕಲು ಯತ್ನಿಸುವರು. ಮಾನಸಿಕ ಉದ್ವಿಗ್ನತೆ.

ಸಿಂಹ
ಹಣದ ವಿಷಯದಲ್ಲಿ ನಿಮಗೆ ಪೂರಕ ಬೆಳವಣಿಗೆ. ಕುಟುಂಬದಲ್ಲಿ ಉಂಟಾಗಿದ್ದ ಭಾವನಾತ್ಮಕ ಸಮಸ್ಯೆ ನಿವಾರಣೆಯಾಗುವುದು.  ಎಲ್ಲರ ಸಹಕಾರ.

ಕನ್ಯಾ
ಇಂದು ಎಲ್ಲಾ ಕಾರ್ಯ ಸುಗಮವಾಗಿ ಸಾಗುವುದು. ಅಡ್ಡಿಗಳು ತಾವಾಗಿ ನಿವಾರಣೆ ಆಗುವವು. ಬಂಧುಗಳಿಂದ ಉತ್ತಮ ಸಹಕಾರ ಲಭ್ಯ.

ತುಲಾ
ಪ್ರೀತಿಪಾತ್ರರಿಗೆ  ತಪ್ಪರ್ಥ ಬರದಂತೆ ನಿಮ್ಮ ನಡೆನುಡಿಯಿರಲಿ.  ಅನವಶ್ಯ ವಿವಾದಕ್ಕೆ ಸಿಲುಕದಿರಿ. ಕೌಟುಂಬಿಕ ಸಮಸ್ಯೆಯೊಂದು ಪರಿಹಾರ ಕಾಣುವುದು.

ವೃಶ್ಚಿಕ
ನಿಮ್ಮ ಕಾರ್ಯವನ್ನು ಸಮರ್ಥವಾಗಿ ಪೂರೈಸುವಿರಿ. ಆದರೂ ನಿಮ್ಮಲ್ಲಿ ಯಾವುದೋ ಅತೃಪ್ತಿ ಉಳಿದುಕೊಳ್ಳುವುದು. ಬಂಧುಗಳ ವಿರಸ.

ಧನು
ನಿಮ್ಮ ಸಮಸ್ಯೆಗಳಿಗೆ ಇತರರನ್ನು ದೂರುತ್ತಾ ಕೂರದಿರಿ. ನಿಮ್ಮಲ್ಲಿರುವ ಲೋಪವನ್ನು ಸರಿಪಡಿಸಿಕೊಳ್ಳಿ. ಅದುವೇ  ಪರಿಹಾರಕ್ಕೆ ಮೂಲ.

ಮಕರ
ಅಸುರಕ್ಷತೆಯ ಭಾವನೆ ಕಾಡುವುದು. ಸ್ಪಷ್ಟ ನಿರ್ಧಾರ ತಾಳಲು ವಿಫಲರಾಗುವಿರಿ. ಇದೆಲ್ಲ ತಾತ್ಕಾಲಿಕ ಸ್ಥಿತಿ. ಬೇಗನೆ ಎಲ್ಲವೂ ಸರಿಯಾಗಲಿದೆ.

ಕುಂಭ
ನಿಮ್ಮ ವ್ಯವಹಾರ ಜ್ಞಾನ ಎಲ್ಲರಿಂದ ಮೆಚ್ಚಲ್ಪಡುವುದು. ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ. ಇಂದು ನಿರಾಳ ಹಾಗೂ ಸಂತೃಪ್ತಿಯ ದಿನ.

ಮೀನ
ಹಿರಿಯರ ಜತೆಗೆ ವಾಗ್ವಾದ ಸಂಭವ. ಮನಸ್ಸಿಗೆ ಅಶಾಂತಿ. ಮಾತಿಗೆ ಮಾತು ಕೂಡಿಸಲು ಹೋಗಬೇಡಿ. ಮೌನ ಸಾಧಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!