ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ನಿಮ್ಮ ಪಾಲಿಗಿಂದು ನೀರಸ ದಿನ. ಆದರೆ ಸದ್ಯದಲ್ಲೆ ನಿಮಗೆ ಪೂರಕವಾದ ಬೆಳವಣಿಗೆಯೊಂದು ಸಂಭವಿಸುವುದು, ನಿರೀಕ್ಷಿಸುತ್ತಿರಿ.
ವೃಷಭ
ನಿಮಗೆ ಇಷ್ಟದ ವಿಷಯದಲ್ಲಿ ತೊಡಗಿಕೊಳ್ಳುವ ಅವಕಾಶ. ಇಂದು ಯಾವುದೇ ಕಾರ್ಯದಲ್ಲೂ ನಿಮಗೆ ಯಶಸ್ಸು ದೊರಕುವುದು.
ಮಿಥುನ
ಇತರರೊಂದಿಗೆ ನಿಮ್ಮ ಉತ್ತಮ ಸಂವಹನ ಕಲೆಯಿಂದಾಗಿ ಕಾರ್ಯದಲ್ಲಿ Zಯಶ ಸಾಧಿಸುವಿರಿ. ಅಡ್ಡಿಗಳು ಒದಗಿದರೂ ಅದನ್ನು ನಿಭಾಯಿಸುವಿರಿ.
ಕಟಕ
ಮಾನಸಿಕ ಒತ್ತಡ.ವೈಯಕ್ತಿಕ ಬದುಕಿನಲ್ಲಿ ಕೆಲವು ಅನಪೇಕ್ಷಿತ ಬೆಳವಣಿಗೆ. ಆಪ್ತರು ನಿಮ್ಮನ್ನು ಕಡೆಗಣಿಸುತ್ತಿದ್ದಾರೆಂಬ ನೋವು.
ಸಿಂಹ
ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಆದರೆ ನಿಮ್ಮ ಬದ್ಧತೆಯನ್ನು ಕದಲಿಸಲು ಸಾಧ್ಯವಾಗದು. ಹಿನ್ನಡೆಗೆ ಅಂಜದಿರಿ, ಮುಂದೆ ಒಳಿತು ಕಾದಿದೆ.
ಕನ್ಯಾ
ಉತ್ಸಾಹದ ದಿನ. ಎಲ್ಲವೂ ನೀವು ಅಂದುಕೊಂಡಂತೆ ನಡೆಯುವುದು. ನಿಮ್ಮ ವಿರೋಧಿಗಳು ಹಿನ್ನಡೆ ಸಾಧಿಸುವರು. ಆರ್ಥಿಕ ಪ್ರಗತಿ.
ತುಲಾ
ವೃತ್ತಿ ಕ್ಷೇತ್ರದಲ್ಲಿ ನಿಮಗೆ ಪೂರಕವಾದ ದಿನ. ಎಲ್ಲವೂ ಸಲೀಸು. ಸಂಜೆ ವೇಳೆಗೆ ನಿಮ್ಮ ಮನಸ್ಸು ಕೆಡಿಸುವ ಪ್ರಸಂಗ ಸಂಭವಿಸಬಹುದು. ಆರ್ಥಿಕ ಒತ್ತಡ.
ವೃಶ್ಚಿಕ
ಇದ್ದುದರಲ್ಲೆ ಸಂತೋಷ ಪಡುವ ದಿನವಿದು. ಇರುವುದರಲ್ಲೇ ತೃಪ್ತಿ. ಪ್ರೀತಿಯ ವಿಷಯವು ನಿಮ್ಮ ಮನಸ್ಸನ್ನು ಆವರಿಸುತ್ತದೆ. ಆಪ್ತರ ಜತೆಗೆ ಕಾಲಕ್ಷೇಪ.
ಧನು
ವೃತ್ತಿಯಲ್ಲಿ ಕೆಲವು ವಿಷಯಗಳು ನಿಮಗೆ ಪೂರಕವಾಗಿ ನಡೆಯುತ್ತವೆ. ಆದರೆ ಕೌಟುಂಬಿಕವಾಗಿ ನಿಮಗೆ ಅಸಮಾಧಾನ ಹೆಚ್ಚುವ ಬೆಳವಣಿಗೆ.
ಮಕರ
ಉತ್ಸಾಹದ ದಿನ. ನಿಮ್ಮ ಗುರಿಯ ಕುರಿತು ಸ್ಪಷ್ಟತೆಯಿರಲಿ. ಬೇರೆ ಕಡೆಗೆ ಮನಸ್ಸು ವಾಲದಂತೆ ನೋಡಿಕೊಳ್ಳಿ. ಕೌಟುಂಬಿಕ ಸಹಕಾರ.
ಕುಂಭ
ನಿಮ್ಮ ಹಣಕಾಸು ವ್ಯವಹಾರದ ಕುರಿತಂತೆ ಹೆಚ್ಚು ಗಮನ ಹರಿಸಬೇಕಾದ ಅಗತ್ಯ. ಪ್ರಮುಖ ಖರ್ಚುಗಳಿಗೆ ಹಣ ಹೊಂದಿಸಬೇಕಾಗಿದೆ.
ಮೀನ
ನಿಮ್ಮ ಕಾರ್ಯ ವ್ಯವಹಾರ ಕೆಲವರನ್ನು ಪ್ರೇರೇಪಿಸುವುದು. ನಿಮಗೆ ಪೂರಕವಾಗಿ ಸ್ಪಂದಿಸುವ ವ್ಯಕ್ತಿಗಳ ಜತೆ ಒಡನಾಟ. ಒಟ್ಟಿನಲ್ಲಿ ಕುಶಿಯ ದಿನ.