Saturday, April 1, 2023

Latest Posts

ದಿನಭವಿಷ್ಯ| ಒತ್ತಡ, ಬೇಡಿಕೆಗಳು, ಆರ್ಥಿಕ ಸಂಕಟ ಆಧ್ಯಾತ್ಮದತ್ತ ಒಲವು ಮೂಡಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
ಮೇಷ
ಅನಿರೀಕ್ಷಿತ ಬೆಳವಣಿಗೆಗೆ ಸಾಕ್ಷಿಯಾಗುವಿರಿ. ಅದು ನಿಮಗೆ ಪೂರಕವೇ ಆಗಿರುವುದು. ಮುನಿಸಿಕೊಂಡ ವ್ಯಕ್ತಿಗಳು ಮತ್ತೆ ನಿಮ್ಮ ಸ್ನೇಹ ಬಯಸುವರು.

ವೃಷಭ
ಇಂದು ನಿಮ್ಮ ದಿನ. ಎಲ್ಲವೂ ನೀವು ಬಯಸಿದಂತೆ ಸಾಗುವುದು. ಕಠಿಣ ಕಾರ್ಯವೂ ಸುಗಮ ವಾಗಿ ತೀರುವುದು. ಆರ್ಥಿಕ ಸುಧಾರಣೆ.

ಮಿಥುನ
ಮುಂಜಾನೆ ಅವಧಿ ನಿಮಗೆ ಪೂರಕವಾಗಿಲ್ಲ. ಕೆಲವು ಅನಪೇಕ್ಷಿತ ಬೆಳವಣಿಗೆ. ಅಪರಾಹ್ನ ಪರಿಸ್ಥಿತಿ ಸುಧಾರಿಸುವುದು. ನಿಮಗೆ ಅನುಕೂಲಕರ.

ಕಟಕ
ಅನಿರೀಕ್ಷಿತ ಖರ್ಚು ಒದಗಬಹುದು. ಕೌಟುಂಬಿಕ ಕಾರ್ಯದಲ್ಲಿ ಹೆಚ್ಚು ವ್ಯಸ್ತರಾಗುವಿರಿ. ಪಾರಮಾರ್ಥಿಕ ವಿಚಾರದಲ್ಲಿ ಆಸಕ್ತಿ.

ಸಿಂಹ
ದೊಡ್ಡ ವ್ಯವಹಾರ ಕುದುರಿಸುವ ಯೋಚನೆ ನಿಮ್ಮದು. ಆದರೆ ಎಚ್ಚರವಿಡಿ, ಕೆಲವರು ಮೋಸ ಮಾಡಲು ಕಾದಿರುತ್ತಾರೆ. ಅವರ ಬಗ್ಗೆ ಎಚ್ಚರವಿರಲಿ.

ಕನ್ಯಾ
ಸಕಾಲದಲ್ಲಿ  ಕಾರ್ಯ ಮುಗಿಸಲು ಯತ್ನಿಸಿ. ಇಲ್ಲವಾದರೆ ಒತ್ತಡಕ್ಕೆ ಸಿಲುಕುವಿರಿ. ನಿಮ್ಮ ಕಾರ್ಯದಲ್ಲಿನ ತೊಡಕು ಗಳು ಮನಶ್ಯಾಂತಿ ಕದಡುತ್ತವೆ.

ತುಲಾ
ವೃತ್ತಿಯಲ್ಲಿನ ಒತ್ತಡ, ಕುಟುಂಬ ಸದಸ್ಯರ ಬೇಡಿಕೆಗಳು, ಆರ್ಥಿಕ ಸಂಕಟ ನಿಮ್ಮನ್ನು ಹೈರಾಣ ಮಾಡುತ್ತದೆ. ಆಧ್ಯಾತ್ಮದತ್ತ ಒಲವು ಮೂಡಬಹುದು.

ವೃಶ್ಚಿಕ
ಯಾವುದೋ ವಿಷಯದಲ್ಲಿನ ಅನಿಶ್ಚಿತತೆ ಕೊನೆಗೊಳ್ಳುವುದು. ಸ್ಪಷ್ಟ ದಾರಿ ತೋರುವುದು. ಅನಿರೀಕ್ಷಿತ ವಲಯದಿಂದ ಸೂಕ್ತ ನೆರವು ಕೂಡ ಒದಗುವುದು.

ಧನು
ಅತ್ಯಂತ ಕ್ರಿಯಾಶೀಲ ದಿನ. ಕೆಲವಾರು ವಿಚಾರಗಳನ್ನು ಒಂದೇ ದಿನ ಇತ್ಯರ್ಥ ಮಾಡಬೇಕಾಗುವುದು. ಸಂಯಮದಿಂದ ವ್ಯವಹರಿಸಿರಿ.

ಮಕರ
ನಿಮಗಿಂದು ಪೂರಕ ದಿನ. ನಿಮ್ಮ ಕಾರ್ಯ ಸುಲಭದಲ್ಲಿ ಮುಗಿಯುವುದು. ಕೌಟುಂಬಿಕ ಸಮಸ್ಯೆ ಕೂಡ ಪರಿಹಾರ ಕಾಣುವುದು.

ಕುಂಭ
ಆಪ್ತರೊಂದಿಗೆ ಹೆಚ್ಚು ಕಾಲ ಕಳೆಯಲು ಪ್ರಯತ್ನಿಸಿ. ಅವರಿಗೆ ನಿರಾಶೆ ತರುವುದು ಸರಿಯಲ್ಲ. ವ್ಯವಹಾರ ವೊಂದು ನಿಮ್ಮ ಇಚ್ಛೆ ಯಂತೆ ಸಾಗುವುದು.

ಮೀನ
ವೃತ್ತಿ ಬದುಕು ಮತ್ತು ಖಾಸಗಿ ಬದುಕಿನ ಮಧ್ಯೆ ಸಮತೋಲನ ಸಾಧಿಸಿ. ಯಾವುದೇ ಒಂದನ್ನೂ ಕಡೆಗಣಿ ಸುವುದು ತರವಲ್ಲ. ಆರ್ಥಿಕ ಮುಗ್ಗಟ್ಟು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!