Sunday, December 3, 2023

Latest Posts

ದಿನಭವಿಷ್ಯ| ನಿಮ್ಮ ಹಿಂದಿನ ಪರಿಶ್ರಮಕ್ಕೆ, ಹೂಡಿಕೆಗೆ ಇಂದು ಫಲ ಸಿಗುವುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮ್ಮ ಸುತ್ತಲಿನವರ  ವರ್ತನೆ ನಿಮ್ಮ ಬದುಕಿನ ಮೇಲೂ ಪರಿಣಾಮ ಬೀರಬಹುದು. ಅದಕ್ಕೆ ಸೂಕ್ತವಾಗಿ ಸ್ಪಂದಿಸಿ. ಆತುರದಿಂದ ಪ್ರತಿಕ್ರಿಯಿಸಬೇಡಿ.

ವೃಷಭ
ನಿಮ್ಮ ಕಠಿಣ ಶ್ರಮಕ್ಕೆ ಉತ್ತಮ ಫಲ ದೊರಕುವುದು. ಕೌಟುಂಬಿಕ ಬಿಕ್ಕಟ್ಟು ಉಂಟಾದರೂ ಸಂಜೆ ವೇಳೆಗೆ ಅದು ಪರಿಹಾರ ಕಾಣುವುದು.

ಮಿಥುನ
ವೃತ್ತಿ ಮತ್ತು ಖಾಸಗಿ ಬದುಕು ಎರಡರಲ್ಲೂ ಯಶಸ್ಸು. ಆತ್ಮವಿಶ್ವಾಸ ವೃದ್ಧಿ. ದೂರ ಪ್ರಯಾಣವನ್ನು ತಪ್ಪಿಸಿ. ಆರೋಗ್ಯದ ಮೇಲೆ ಪರಿಣಾಮವಾದೀತು.

ಕಟಕ
ನಿಮ್ಮ ಹೊಂದಾಣಿಕೆ ಸ್ವಭಾವವು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ. ಕಠಿಣವೆಂದ ಕಾರ್ಯವು ಸುಲಭದಲ್ಲಿ ಈಡೇರುತ್ತದೆ.

ಸಿಂಹ
ಆತ್ಮೀಯರ ಜತೆ ಹೊಂದಾಣಿಕೆಯ  ಸಮಸ್ಯೆಉಂಟಾದೀತು. ಭಿನ್ನಾಭಿಪ್ರಾಯ. ಅದನ್ನು ಸಾವಧಾನದಿಂದ ಪರಿಹರಿಸಿಕೊಳ್ಳಿ. ಸಂಘರ್ಷ ಒಳಿತಲ್ಲ.

ಕನ್ಯಾ
ಉದ್ವಿಗ್ನತೆ, ಅಸಹನೆ, ಆತಂಕಗಳು ಕಾಡುತ್ತವೆ. ಸಂವಹನದ ಕೊರತೆ ಇದಕ್ಕೆ ಕಾರಣ. ನಿಮ್ಮ ಅಹಂ ಬಿಟ್ಟು ವರ್ತಿಸಿ. ಇತರರ ಭಾವನೆಗೆ ಸ್ಪಂದಿಸಿರಿ.

ತುಲಾ
ನಿಮ್ಮ ಹಿಂದಿನ ಪರಿಶ್ರಮಕ್ಕೆ, ಹೂಡಿಕೆಗೆ ಇಂದು ಫಲ ಸಿಗುವುದು. ಕುಟುಂಬದಲ್ಲಿ ಸಂಭ್ರಮದ ವಾತಾವರಣ. ಶುಭ ಸುದ್ದಿ ಕೇಳುವುದು.

ವೃಶ್ಚಿಕ
ವೃತ್ತಿಯಲ್ಲಿ ಅಥವಾ ಅಧ್ಯಯನದಲ್ಲಿ ಉತ್ತಮ ಫಲ ಪಡೆಯಬೇಕಾದರೆ ಕಠಿಣ ಪರಿಶ್ರಮ ಅವಶ್ಯ. ಕೆಲಸ ಮಾಡದೆ ಪ್ರತಿಫಲ ಸಿಗಬೇಕು ಎಂದು ಕಾಯದಿರಿ.

ಧನು
ಪ್ರತಿಯೊಂದು ಕಾರ್ಯ ಇಂದು ಸಫಲವಾಗುವುದು. ಕೌಟುಂಬಿಕ ವ್ಯವಹಾರದಲ್ಲಿ ಎಲ್ಲರ ಬೆಂಬಲ ಪಡೆಯುವಿರಿ. ಆರೋಗ್ಯ ಸುಧಾರಣೆ.

ಮಕರ
ಇಂದು ಪ್ರಮುಖ ನಿರ್ಧಾರ ತೆಗೆದು ಕೊಳ್ಳದಿರಿ. ಅದರಿಂದ ಒಳಿತಾಗದು. ವಿವಾಹದ ವಿಷಯದಲ್ಲಿ ತುಸು ಕಾದು ನೋಡುವುದು ವಿಹಿತ.

ಕುಂಭ
ವೃತ್ತಿಯಲ್ಲಿ ಯಶಸ್ಸು. ಸಂಗಾತಿಯ ಜತೆಗೆ ಅವಿಸ್ಮರಣೀಯ ಕ್ಷಣ ಕಳೆಯುವಿರಿ. ಹೊಸ ಉದ್ದಿಮೆಗೆ ಹಣ ಹೂಡಲು ಸಕಾಲವಲ್ಲ. ಆರ್ಥಿಕ ಬಿಕ್ಕಟ್ಟು.

ಮೀನ
ಹಳೆಯ ಹೂಡಿಕೆ ಯಿಂದ ಇಂದು ಧನಲಾಭ.  ಕುಟುಂಬಸ್ಥರೊಂದಿಗೆ ಸಂತಸದ ವೇಳೆ ಕಳೆಯುವಿರಿ. ಆರೋಗ್ಯ ವೃದ್ಧಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!