Wednesday, February 28, 2024

ದಿನಭವಿಷ್ಯ| ಸಂಗಾತಿ ಜತೆಗಿನ ದೀರ್ಘಕಾಲದ ಬಿಕ್ಕಟ್ಟು ಪರಿಹರಿಸಲು ಸಫಲರಾಗುವಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಸಹೋದ್ಯೋಗಿಗಳ ಜತೆ ಹೊಂದಾಣಿಕೆಯಿಂದ ಕೆಲಸ ಮಾಡಿ. ಇದು ನಿಮ್ಮ ವ್ಯಕ್ತಿತ್ವಕ್ಕೂ ಒಳಿತು ತರಲಿದೆ. ಏಕಾಂಗಿಗಳಿಗೆ ಸಂಬಂಧ ಕೂಡಿಕೊಳ್ಳುವ ಸಾಧ್ಯತೆ.

ವೃಷಭ
ಪ್ರೀತಿಪಾತ್ರರಿಗಾಗಿ ತ್ಯಾಗ ಮಾಡುವ ಮನಸ್ಥಿತಿ ನಿಮ್ಮದು. ಹೊಸ ಉದ್ಯೋಗವಕಾಶ ಸಿಗಲಿದೆ. ಭಾವನಾತ್ಮಕ ಮತ್ತು ದೈಹಿಕ ಒತ್ತಡ ಕಾಡುವುದು.

ಮಿಥುನ
ನಿಮ್ಮ ಪಾಲಿನ ವಿಶಿಷ್ಟ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶ. ಬಿಡುವಿಲ್ಲದ ದಿನ. ಸಂಜೆ ವೇಳೆಗೆ ವಿಶ್ರಾಂತಿಗೆ ಹಾತೊರೆಯುವಿರಿ.

ಕಟಕ
ನಿಮ್ಮ ಸಾಮರ್ಥ್ಯದ ಕುರಿತು ನಿಮಗೇ ಅಪನಂಬಿಕೆ. ನಿಜವಾಗಿ ಯಾವುದೇ ಕೆಲಸ ಮಾಡಲು ನೀವು ಸಮರ್ಥರು. ಧೈಯದಿಂದ ಹೆಜ್ಜೆಯಿಡಿ.

ಸಿಂಹ
ಅತೀವ ಒತ್ತಡದ ದಿನ. ಮನೆಯಲ್ಲಿಯೂ ವೃತ್ತಿಯಲ್ಲೂ ಹಲವು ಸವಾಲು. ಪ್ರಮುಖ ವ್ಯಕ್ತಿಗಳ ಜತೆ ವ್ಯವಹರಿಸಬೇಕಾದ ಅನಿವಾರ್ಯತೆ.

ಕನ್ಯಾ
ಆಹಾರ ಸೇವನೆಯಲ್ಲಿ ಎಚ್ಚರವಿರಲಿ. ಹೊಟ್ಟೆ ಕೆಡುವ ಪ್ರಸಂಗ ಒದಗೀತು. ಕೌಟುಂಬಿಕ ವ್ಯವಹಾರದಲ್ಲಿ ಒತ್ತಡ ಎದುರಿಸುವಿರಿ. ಸಹನೆ ಅತಿ ಮುಖ್ಯ.

ತುಲಾ
ಆತ್ಮೀಯ ಸಂಬಂಧದಲ್ಲಿ ಒಡಕು ಉಂಟಾದೀತು. ತಪ್ಪಭಿಪ್ರಾಯ ನಿವಾರಣೆಗೆ ಆದ್ಯತೆ ಕೊಡಬೇಕು. ಇತರರ ಚಿತಾವಣೆಗೆ ಅವಕಾಶ ಕೊಡದಿರಿ.

ವೃಶ್ಚಿಕ
ಹೆಚ್ಚು ಹೊಣೆಗಾರಿಕೆ. ಅದಕ್ಕೆ ಅಡ್ಡಿಗಳೂ ಹೆಚ್ಚು. ಕೆಲವರು ನಿಮ್ಮ ಸಾಧನೆಗೆ ಅಡ್ಡಗಾಲು ಹಾಕಲು ಯತ್ನಿಸುವರು. ಆರೋಗ್ಯದ ವಿಚಾರದಲ್ಲಿ ಹೆಚ್ಚು ಲಕ್ಷ್ಯ ಕೊಡಿ.

ಧನು
ನಿಮ್ಮ ಸಂಗಾತಿ ಜತೆಗಿನ ದೀರ್ಘಕಾಲದ ಬಿಕ್ಕಟ್ಟು ಪರಿಹರಿಸಲು ಸಫಲರಾಗುವಿರಿ. ಇತರರಿಂದ ಹೆಚ್ಚಿನದ್ದನ್ನು ನಿರೀಕ್ಷಿಸಲು ಹೋಗದಿರಿ. ನಿರಾಶೆಯಾದೀತು.

ಮಕರ
ಆರ್ಥಿಕ ಲಾಭದ ದಿನ. ಹಾಗೆಂದು ಜೂಜಾಟಗಳಿಂದ ದೂರವಿರಿ. ಕೌಟುಂಬಿಕ ಹಿತಾಸಕ್ಕಿ ಕಾಯಲು ಗಮನ ಕೊಡಿ. ಆರೋಗ್ಯ ಸುಧಾರಣೆ.

ಕುಂಭ
ಹೆಚ್ಚು ಖರ್ಚಿನ ದಿನ. ಎಲ್ಲವನ್ನೂ ಖರೀದಿಸಬೇಕೆಂಬ ಹುಮ್ಮಸ್ಸಿಗೆ ತಡೆ ಹಾಕುವುದು ಒಳಿತು. ಕೌಟುಂಬಿಕ ಬಿಕ್ಕಟ್ಟು ಪರಿಹಾರ.

ಮೀನ
ಸಂಬಂಧದಲ್ಲಿ ಪ್ರಾಮಾಣಿಕತೆ ಮುಖ್ಯ. ತೋರಿಕೆಯ ಆತ್ಮೀಯತೆ ಒಳಿತಲ್ಲ. ಅದರಿಂದ ಆಪ್ತರು ನಿಮ್ಮಿಂದ ದೂರ ಸರಿಯಬಹುದು. ಕೌಟುಂಬಿಕ ಅಶಾಂತಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!