ದಿನಭವಿಷ್ಯ| ಕೆಟ್ಟದನ್ನು ಮರೆಯಬೇಕು, ಭವಿಷ್ಯ ಬಗ್ಗೆ ಆಶಾವಾದ ಹೊಂದಿರಬೇಕು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಪ್ರೀತಿಯ, ಸಂಬಂಧದ ವಿಷಯದಲ್ಲಿ ಸಕಾರಾ ತ್ಮಕ ಬೆಳವಣಿಗೆ. ಇತರರ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತೀರಿ. ಆದರೆ ನಿಮ್ಮ ಸಮಸ್ಯೆ ಕಡೆಗಣಿಸಬೇಡಿ.

ವೃಷಭ
ಭೌತಿಕ ಮತ್ತು ಭಾವನಾತ್ಮಕ ಆವಶ್ಯಕತೆಗಳೆರಡೂ ಮುಖ್ಯ ಎಂಬುದನ್ನು ಅರಿಯಿರಿ. ಬರಿಯ ಭಾವನೆ ಹೊಟ್ಟೆ ತುಂಬಿಸಲಾರದು.

ಮಿಥುನ
ಸುಗಮ ದಿನ. ಹಣವನ್ನು ಖರ್ಚು ಮಾಡಲು ಯಾವುದೇ ಹಿಂಜರಿಕೆ ಇಲ್ಲ. ಕೆಲವು ಆಪ್ತ ವ್ಯಕ್ತಿಗಳು ಸಮೀಪದಲ್ಲಿ ಇರದ ಕೊರತೆ ಕಾಡುವುದು.

ಕಟಕ
ಹೊಸ ಗುರಿ ಹಾಕಿಕೊಳ್ಳು ವುದು ಸುಲಭ. ಆದರೆ ಅದನ್ನು ಸಾಧಿಸಲು ಕಷ್ಟ ಪಡಬೇಕು. ಇದನ್ನಿಂದು ನೀವು ಅರಿಯುವಿರಿ. ಹರ್ಷಾಚರಣೆಗೆ ಕೆಲವು ಅಡ್ಡಿಗಳು.

ಸಿಂಹ
ನಿಮ್ಮ ಇಷ್ಟದ ಹವ್ಯಾಸದ ಕುರಿತು ಆಸಕ್ತಿ. ನಿಮ್ಮ ದೈನಂದಿನ ಸಮಸ್ಯೆಗಳನ್ನು ಅದರಿಂದ ಮರೆಯು ವಿರಿ. ಕೌಟುಂಬಿಕ ಸಹಕಾರ.

ಕನ್ಯಾ
ಆಪ್ತ ಬಂಧುಗಳ ಜತೆ ಸಂತೋಷಾಚರಣೆ. ನಿಮ್ಮ ಇಷ್ಟದ ಆಹಾರ ಸೇವನೆ. ಈ ದಿನವನ್ನು ಸಮಸ್ಯೆ ಮರೆತು ಕಳೆಯುವ ಉದ್ದೇಶ ಈಡೇರುವುದು.

ತುಲಾ
ಕಳೆದ ದಿನಗಳ ಅಂತರ್ಮಥನಕ್ಕೆ ಈ ದಿನ ಮೀಸಲು. ಅದು ಒಳ್ಳೆಯದೆ. ಕೆಟ್ಟದನ್ನು ಮರೆಯಬೇಕು, ಭವಿಷ್ಯ ಬಗ್ಗೆ ಆಶಾವಾದ ಹೊಂದಿರಬೇಕು.

ವೃಶ್ಚಿಕ
ಕುಟುಂಬದ ಸಹಕಾರ ನಿಮಗಿಂದು ಅವಶ್ಯ. ಅದು ದೊರೆಯುವುದು. ಮನೆಯವರ ಸಂತೋಷ ನಿಮ್ಮ ದಿನವನ್ನು ಉಲ್ಲಸಿತಗೊಳಿಸುವುದು. ಈ ದಿನ ಆನಂದಿಸಿ.

ಧನು
ಆರಾಮವಾಗಿ ಕಳೆಯಬೇಕೆಂದು ಕೊಂಡರೂ ನಿಮಗೆ ಇಂದು ಸೂಕ್ತ ಸಮಯ ಸಿಗದು. ಕೆಲಸದ ಒತ್ತಡ ಎಂದಿಗಿಂತ ಹೆಚ್ಚೇ ಇರುವುದು.

ಮಕರ
ಕೆಲಸದಲ್ಲಿ ಪೂರ್ಣ ಮನಸ್ಸು ತೊಡಗಿಸಿ. ಅದರಿಂದ ಯಶಸ್ಸು. ದಿನದಂತ್ಯಕ್ಕೆ ತೃಪ್ತಿ ನಿಮ್ಮದಾಗಲಿದೆ. ಸಂಬಂಧವೊಂದು ದೃಢವಾಗಲಿದೆ.

ಕುಂಭ
ಹಣಕಾಸು ವಿಚಾರದಲ್ಲಿ ಉತ್ತಮ ಬೆಳವಣಿಗೆ. ಶೇರು ವ್ಯವಹಾರದಲ್ಲಿ ಲಾಭ. ಕೌಟುಂಬಿಕ ಪರಿಸರ ಹರ್ಷದಾಯಕ. ಆಪ್ತರೊಡನೆ ಆತ್ಮೀಯ ಕಾಲಕ್ಷೇಪ.

ಮೀನ
ಭವಿಷ್ಯಕ್ಕೆ ಉತ್ತಮ ಯೋಜನೆ ನಿಮ್ಮ ಗುರಿ. ಅದು ಒಳ್ಳೆಯದು. ಹಿಂದಿನ ತಪ್ಪುಗಳನ್ನು ಮತ್ತೆ ಮಾಡುವುದಿಲ್ಲ ಎಂಬ ನಿರ್ಧಾರ ತಳೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!