ದಿನಭವಿಷ್ಯ| ವ್ಯವಹಾರ ಜ್ಞಾನ ಕ್ಲಿಷ್ಟ ಪರಿಸ್ಥಿತಿಯಿಂದ ನಿಮ್ಮನ್ನು ಕಾಪಾಡುವುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಇಂದು ನಿಮ್ಮ  ಕಾರ್ಯ ಸುಗಮವಾಗಿ ಸಾಗುವುದು. ಅಡ್ಡಿಗಳು ತಾವಾಗಿ ನಿವಾರಣೆ. ಬಂಧುಗಳಿಂದ ಉತ್ತಮ ಸಹಕಾರ.  ಆರ್ಥಿಕ ಕೊರತೆ ಕಾಡದು.

ವೃಷಭ
ವೃತ್ತಿಯಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಅದರಿಂದ ನೆಮ್ಮದಿ ಹಾಳು. ಮನೆಯಲ್ಲಿ ಕೆಲವು ಅಹಿತಕರ ಬೆಳವಣಿಗೆ. ಮಾನಸಿಕ ಉದ್ವಿಗ್ನತೆ.

ಮಿಥುನ
ಅಗತ್ಯವಿಲ್ಲದಿದ್ದರೂ ಅತಿಯಾದ ಖರ್ಚು ಒದಗಲಿದೆ. ಮಿತವ್ಯಯ ಸಾಧಿಸಲು ಪ್ರಯತ್ನಿಸಿ. ಆಪ್ತ ಬಂಧುಗಳ ಜತೆ ಮನಸ್ತಾಪ ಸಂಭವ. ಸಹನೆ ಕಳಕೊಳ್ಳದಿರಿ.

ಕಟಕ
ಇಂದು ಕೆಲವರಿಂದ ನಿಮ್ಮ ಮನಶ್ಯಾಂತಿ ಹಾಳಾದೀತು. ಅವರ ವರ್ತನೆ ಅಸಹನೀಯ ಎನಿಸುವುದು. ಅವರನ್ನು ಕಡೆಗಣಿಸುವುದೇ ನಿಮಗೆ ಒಳ್ಳೆಯದು.

ಸಿಂಹ
ಮನೆಯಲ್ಲಿನ ಕೆಲವು ವಿಷಯಗಳು ನೆಮ್ಮದಿ ಕದಡುತ್ತವೆ. ಆಪ್ತರ ಕಾಳಜಿಯು ನಿಮ್ಮ ಮನಸ್ಸಿಗೆ ಸಾಂತ್ವನ ತರುವುದು. ವೃತ್ತಿಯಲ್ಲಿ ಅಧಿಕ ಒತ್ತಡ.

ಕನ್ಯಾ
ವೃತ್ತಿಯ ಕ್ಷೇತ್ರದಲ್ಲಿ ನಿಮಗೆ ಪೂರಕವಾದ ಬೆಳವಣಿಗೆ. ಕುಟುಂಬದಲ್ಲಿ ಉಂಟಾಗಿದ್ದ ಭಾವನಾತ್ಮಕ ಸಮಸ್ಯೆ ನಿವಾರಣೆಯಾಗುವುದು.

ತುಲಾ
ಪ್ರೀತಿಪಾತ್ರರ ಜತೆ ವರ್ತಿಸುವಾಗ ಎಚ್ಚರದಿಂದಿರಿ. ನಿಮ್ಮ ನಡೆನುಡಿ ತಪ್ಪರ್ಥ ಕಲ್ಪಿಸದಂತೆ ನೋಡಿಕೊಳ್ಳಿ. ಅನವಶ್ಯ ವಿವಾದ ತಪ್ಪಿಸಿಕೊಳ್ಳಿ.

ವೃಶ್ಚಿಕ
ಹಿರಿಯರು ಅಥವಾ ಸಹೋದ್ಯೋಗಿ ಜತೆಗೆ ವಾಗ್ವಾದ ಸಂಭವ. ಅದರಿಂದ ಮನಸ್ಸಿಗೆ ಅಶಾಂತಿ. ನಿಮ್ಮದೇ ವಾದ ಸರಿಯಿದ್ದರೂ ವಿವೇಕದಿಂದ ವರ್ತಿಸಿ.

ಧನು
ಸಮಸ್ಯೆಗಳು ಮತ್ತು ಅಸುರಕ್ಷತೆಯ ಭಾವನೆ. ಇದರಿಂದ ನಿಮ್ಮ ವಿವೇಕ ಮಸುಕಾಗುವುದು. ಸ್ಪಷ ನಿರ್ಧಾರ ತಾಳಲು ವಿಫಲರಾಗುವಿರಿ. ಇದೆಲ್ಲ ತಾತ್ಕಾಲಿಕ ಸ್ಥಿತಿ.

ಮಕರ
ಮನೆ ಮತ್ತು ಕಚೇರಿಯಲ್ಲಿ ನಿಮ್ಮ ಕಾರ್ಯವನ್ನು ಸಮರ್ಥ ವಾಗಿ ಪೂರೈಸುವಿರಿ. ಆದರೂ ನಿಮ್ಮಲ್ಲಿ ಯಾವುದೋ ಅತೃಪ್ತಿ ಉಳಿದುಕೊಳ್ಳುವುದು.

ಕುಂಭ
ನಿಮ್ಮ ಸಮಸ್ಯೆಗಳಿಗೆ ಇತರರನ್ನು ದೂರುತ್ತಾ ಕೂರದಿರಿ. ನಿಮ್ಮಲ್ಲೇ ಪರಾಮರ್ಶೆ ಮಾಡಿಕೊಳ್ಳಿ. ಕಾರಣ ಹಾಗೂ ಪರಿಹಾರ ಎರಡೂ ನಿಮ್ಮಲ್ಲಿದೆ.

ಮೀನ
ವ್ಯವಹಾರ ಜ್ಞಾನ ಕ್ಲಿಷ್ಟ ಪರಿಸ್ಥಿತಿಯಿಂದ ನಿಮ್ಮನ್ನು ಕಾಪಾಡುವುದು. ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ. ಒಟ್ಟಿನಲ್ಲಿ ಇಂದು ಸಂತೃಪ್ತಿಯ ದಿನ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!