ದಿನಭವಿಷ್ಯ| ಪರಿಹಾರ ಕಷ್ಟ ಎಂದು ಭಾವಿಸಿದ್ದ ಸಮಸ್ಯೆ ಸುಲಭದಲ್ಲಿ ಪರಿಹಾರ ಕಾಣುವುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಆರ್ಥಿಕ ಪರಿಸ್ಥಿತಿ ಕಷ್ಟಕರ ಎಂದೆನ್ನಿಸಬಹುದು. ಆದರೆ ಹತಾಶೆ ಬೇಡ, ಮುಂದಿನ ದಿನ ನಿಮಗೆ ಪೂರಕವಾಗಿದೆ. ಮನೆಯಲ್ಲಿ ಉತ್ತಮ ಸಹಕಾರ.

ವೃಷಭ
ಪರಿಹಾರ ಕಷ್ಟ ಎಂದು ಭಾವಿಸಿದ್ದ ಸಮಸ್ಯೆ ಸುಲಭದಲ್ಲಿ ಪರಿಹಾರ ಕಾಣುವುದು. ಬಂಧುಗಳ ಜತೆಗಿನ ಸಂಬಂಧ ಕೆಡದಂತೆ ನೋಡಿಕೊಳ್ಳಿ.

ಮಿಥುನ
ಪ್ರಯಾಣದ ಉದ್ದೇಶ ಇದ್ದರೆ  ಎಲ್ಲ ವ್ಯವಸ್ಥೆ ಸರಿಯಾಗಿ ಮಾಡಿಕೊಳ್ಳಿ. ಇಲ್ಲವಾದರೆ ಸಮಸ್ಯೆಗೆ ಸಿಲುಕುವಿರಿ. ವೃತ್ತಿಯಲ್ಲಿ ಏರುಪೇರು.

ಕಟಕ
ಕುಟುಂಬ ಸದಸ್ಯರು ನಿಮ್ಮ ಮೇಲೆ ಇಟ್ಟಿರುವ ನಿರೀಕ್ಷೆಗೆ ನಿರಾಶೆ ಮಾಡದಿರಿ. ಅವರ ಮಾತು ಧಿಕ್ಕರಿಸಬೇಡಿ. ಮಾತಿನ ಸಂಘರ್ಷ ತಪ್ಪಿಸಿರಿ.

ಸಿಂಹ
ಮನೆಯವರ ಜತೆ ಪ್ರಾಮಾಣಿಕವಾಗಿ ವರ್ತಿಸಿ. ಸೌಹಾರ್ದತೆ ಕಾಪಾಡಲು ವಾದ ಗಳಿಂದ ದೂರವಿರಿ. ನಿಮ್ಮ ಕೆಲಸದಲ್ಲಿ ಏಕಾಗ್ರತೆಯಿರಲಿ.

ಕನ್ಯಾ
ಮಕ್ಕಳಿಂದ ಸಂತೋಷ. ಭಾವನಾತ್ಮಕ ನೋವಿಗೆ ಉಪಶಮನ. ವ್ಯಕ್ತಿಯೊಬ್ಬರ ನಡೆನುಡಿ ನಿಮಗೆ ಪ್ರೇರಣೆ ನೀಡಬಹುದು. ಆರ್ಥಿಕ ಸ್ಥಿತಿ ಸುಧಾರಣೆ.

ತುಲಾ
ಫಲಪ್ರದ ದಿನ. ನಿಮ್ಮ ಕಾರ್ಯವೈಖರಿ ಇತರರಿಗೂ ಪ್ರೇರಣೆ. ಕುಟುಂಬದಲ್ಲಿ ಅಭಿಪ್ರಾಯ ಹಂಚಿಕೆ ಯಿಂದ ಭಿನ್ನಮತ ನಿವಾರಣೆ.

ವೃಶ್ಚಿಕ
ದಿನವಹಿ ಕಾರ್ಯದಿಂದ ಹೊರತಾದ ಕೆಲಸದಲ್ಲಿ ತೊಡಗುವಿರಿ. ಇದು ನಿಮಗೆ ಉಲ್ಲಾಸ ನೀಡಲಿದೆ. ಕಾಲೆಳೆಯುವವರ ಕುರಿತು ಎಚ್ಚರವಿರಲಿ.

ಧನು
ಕೌಟುಂಬಿಕ ಶಾಂತಿ, ಸಮಾಧಾನ. ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಬಲ್ಲವರ ಸಲಹೆ ಪಡೆಯಿರಿ. ಟೀಕಾಕಾರರನ್ನು ಕಡೆಗಣಿಸಿರಿ.

ಮಕರ
ಕುಟುಂಬದಲ್ಲಿ ಸಣ್ಣಪುಟ್ಟ ವಾಗ್ವಾದ ಉಂಟಾದೀತು. ಅದನ್ನು ವಿಕೋಪಕ್ಕೆ ಕೊಂಡು ಹೋಗದಿರಿ.ಇತರರ ಮಾತು ಆಲಿಸುವ ಅಭ್ಯಾಸ ಬೆಳೆಸಿಕೊಳ್ಳಿ.

ಕುಂಭ
ನಿಮ್ಮ ಕಾರ್ಯವನ್ನು ಸಂತೋಷದಿಂದ ನಿರ್ವಹಿಸಿ. ಫಲಿತಾಂಶ ಉತ್ತಮವಾಗುವುದು. ಉದಾಸೀನತೆ  ಬಿಟ್ಟುಬಿಡಿ. ಕೌಟುಂಬಿಕ ಸಹಕಾರ.

ಮೀನ
ಆರೋಗ್ಯದತ್ತ ಹೆಚ್ಚು ಗಮನ ಹರಿಸಿ. ನಿಮ್ಮ ಜೀವನಶೈಲಿ ಬದಲಿಸುವ ಅಗತ್ಯವೂ ಬಂದೀತು. ನೆರೆಕರೆ ಜತೆ ವಾಗ್ವಾದ ನಡೆದೀತು. ಸಹನೆಯಿಂದ ವರ್ತಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!