Wednesday, March 29, 2023

Latest Posts

ದಿನಭವಿಷ್ಯ| ನಿಮ್ಮ ಮನಸ್ಸನ್ನು ಬೇರೆಡೆ ಸೆಳೆಯಬಲ್ಲ ಸಣ್ಣ ಘಟನೆ ಸಂಭವಿಸಬಹುದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಒಂದೆಡೆ ಯಶಸ್ಸು. ಮತ್ತೊಂದೆಡೆ ಸಮಸ್ಯೆ. ಯಶಸ್ಸಿನಿಂದ ಸಂತೋಷ ಪಡುವಂತಿಲ್ಲ. ಒಟ್ಟಿನಲ್ಲಿ ಮಿಶ್ರಭಾವದ ದಿನವಿದು.   ಸ್ಫೂರ್ತಿಯಿಂದ ಎಲ್ಲವನ್ನು ಸ್ವೀಕರಿಸಿ.

ವೃಷಭ
ಗಂಭೀರ ವಿಷಯದ ಮಧ್ಯೆಯೂ ನಿಮ್ಮ ಮನಸ್ಸನ್ನು ಬೇರೆಡೆ ಸೆಳೆಯಬಲ್ಲ ಸಣ್ಣ ಘಟನೆ ಸಂಭವಿಸಬಹುದು. ಮನಸ್ಸು ದೃಢವಾಗಿ ಇಟ್ಟುಕೊಳ್ಳಿ.

ಮಿಥುನ
ಪ್ರೀತಿಪಾತ್ರರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ಆದರೆ ಅದರ ಮಧ್ಯೆಯೂ ವೃತ್ತಿಯ ಒತ್ತಡವು ನಿಮ್ಮ ನೆಮ್ಮದಿ ಹಾಳು ಮಾಡಬಹುದು. ಸಂಯಮ ಇರಲಿ.

ಕಟಕ
ನಿಮ್ಮ ಕಾರ್ಯದಲ್ಲಿ ಉತ್ತಮ ನಿರ್ವಹಣೆ. ಇತರರ ಮೆಚ್ಚುಗೆ ಗಳಿಸುವಿರಿ. ಆದರೂ ನಿಮಗೆ ತೃಪ್ತಿಯಿಲ್ಲ. ಏನೋ ಕೊರಗು ಕಾಡುವುದು.

ಸಿಂಹ
ಹಣದ ವಿಚಾರದಲ್ಲಿ ಸಮಸ್ಯೆ ಎದುರಿಸುವಿರಿ. ಇಂದು ಕೊಟ್ಟ ಹಣ ಮರಳಿ ಬಾರದು. ನೆರವು ನೀಡುವ ಭರದಲ್ಲಿ ನಿಮ್ಮ ಹಿತಾಸಕ್ತಿಗೆ ಭಂಗ ತಂದುಕೊಳ್ಳದಿರಿ.

ಘಿ ಕನ್ಯಾ
ಹೆಚ್ಚುವರಿ ಕೆಲಸದ ಹೊರೆ. ಇದು ನಿಮ್ಮ ಆತ್ಮವಿಶ್ವಾಸ ಕುಂದಿಸದಂತೆ ನೋಡಿಕೊಳ್ಳಿ. ಅನಾರೋಗ್ಯಕರ ಆಹಾರ ಸೇವಿಸದಿರಿ.

ತುಲಾ
ಕೆಲಸದಲ್ಲಿ ಏಕಾಗ್ರತೆಯ ಕೊರತೆ. ಯಾವುದೇ ಕಾರ್ಯ ಸರಿಯಾಗಿ ಮುಗಿಸಲಾರಿರಿ. ಸಮಸ್ಯೆ ಬದಿಗಿಟ್ಟು  ಸಮಚಿತ್ತದಿಂದ ಯೋಚಿಸಲು ಕಲಿಯಿರಿ.

ವೃಶ್ಚಿಕ
ಸಮಸ್ಯೆಯ ಕುರಿತಂತೆ ಚಿಂತಿಸುತ್ತಾ ಕೂರುವ ಬದಲಾಗಿ ನಿಮ್ಮ ಪ್ರಾಕ್ಟಿಕಲ್ ವರ್ತನೆ ಫಲ ನೀಡುವುದು. ಬಂಧುಗಳಿಂದ ಸೂಕ್ತ ಸಹಕಾರ.

ಧನು
ನಿಮ್ಮ ಬಹುಸಮಯದ ಪರಿಶ್ರಮಕ್ಕೆ ಉತ್ತಮ ಪ್ರತಿಫಲ ದೊರಕುವುದು. ಕೌಟುಂಬಿಕ ಬಿಕ್ಕಟ್ಟು ಪರಿಹಾರ. ಆರ್ಥಿಕ ಸ್ಥಿತಿ ಅಭಿವೃದ್ಧಿ.

ಮಕರ
ಹಲವಾರು ಮಂದಿಯ ಹಿತಾಸಕ್ತಿಯ ಕುರಿತಂತೆ ನೀವು ಕಾಳಜಿ ವಹಿಸಬೇಕಾದ ಪ್ರಸಂಗ. ಇದರಿಂದಾಗಿ ನೀವು ಬಸವಳಿಯುವಿರಿ. ವಿಶ್ರಾಂತಿ ಅವಶ್ಯ.

ಕುಂಭ
ಪ್ರತೀ ವಿಷಯವನ್ನೂ ನೆಗೆಟಿವ್ ದೃಷ್ಟಿಕೋನ ದಿಂದ ನೋಡಬೇಡಿ. ಅದರ ಜತೆಗಿರುವ ಒಳ್ಳೆಯ ಅಂಶಗಳನ್ನೂ ಪರಿಗಣಿಸಿ. ಆಪ್ತರ ಸಂಗದಲ್ಲಿ ಸಂತೋಷ.

ಮೀನ
ನಿರೀಕ್ಷೆಯೊಂದು ಈಡೇರಲಿದೆ. ಚಿಂತೆಗೆ ಕಾರಣವಾಗಿದ್ದ ಸಮಸ್ಯೆ ಪರಿಹಾರ ಕಾಣಲಿದೆ. ಆತ್ಮೀಯರ ಸಹಕಾರ ಪಡೆಯುವಿರಿ. ಕೌಟುಂಬಿಕ ತೃಪ್ತಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!