ಭಾರತದ ಬೌಲಿಂಗ್ ದಾಳಿಗೆ ನ್ಯೂಜಿಲೆಂಡ್ ತತ್ತರ: ಸರಣಿ ಗೆದ್ದ ಖುಷಿಯಲ್ಲಿ ಹಾರ್ದಿಕ್ ಟೀಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ ಟೀಮ್ ಇಂಡಿಯಾ ಬೌಲಿಂಗ್ ನಲ್ಲೂ ಉತ್ತಮ ದಾಳಿ ನಡೆಸಿದ್ದು, ನ್ಯೂಜಿಲೆಂಡ್ ಕೇವಲ 66 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಭಾರತ 168 ರನ್ ಭರ್ಜರಿ ಗೆಲುವು ದಾಖಲಿಸಿದೆ. ಭಾರತ 3 ಪಂದ್ಯದ ಟಿ20 ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿದೆ.

ಭಾರತ ನೀಡಿದ 235 ರನ್ ಬೃಹತ್ ಟಾರ್ಗೆಟ್ ಬೆನ್ನತ್ತಿದ್ದ ನ್ಯೂಜಿಲೆಂಡ್, 4 ರನ್ ಗಳಿಸುವ ವೇಳೆ ಮೊದಲ ವಿಕೆಟ್ ಪತನಗೊಂಡಿತು.ಕಾನ್ವೇ 1 ರನ್ ಸಿಡಿಸಿ ನಿರ್ಗಮಿಸಿದರೆ, ಮಾರ್ಕ್ ಚಾಪ್‌ಮಾನ್ ಡಕೌಟ್ ಆದರು. ಕೇವಲ 5 ರನ್ ಸಿಡಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಗ್ಲೆನ್ ಪಿಲಿಪ್ಸ್ ಕೇವಲ 2 ರನ್ ಸಿಡಿಸಿ ನಿರ್ಗಮಿಸಿದರು.

ಡರಿಲ್ ಮಿಚೆಲ್ ಹೋರಾಟದ ಸೂಚನೆ ನೀಡಿದರು. ಆದರೆ ಮಿಚೆಲ್ ಬ್ರೇಸ್‌ವೆಲ್ 8 ರನ್ ಸಿಡಿಸಿ ನಿರ್ಗಮಿಸಿದರು. ಡರಿಲ್ ಮಿಚೆಲ್ ಹೊರತು ಪಡಿಸಿದರೆ ಇತರರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿ ಬರಲಿಲ್ಲ. ನಾಯಕ ಮಿಚೆಲ್ ಸ್ಯಾಂಟ್ನರ್ 13 ರನ್ ಸಿಡಿಸಿ ಬೌಂಡರಿ ಲೈನ್‌ನಲ್ಲಿ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಏಕಾಂಗಿ ಹೋರಾಟ ನೀಡಿದ ಡರಿಲ್ ಮಿಚೆಲ್ 25 ಎಸೆತದಲ್ಲಿ 35 ರನ್ ಸಿಡಿಸಿ ಔಟಾದರು. ಈ ಮೂಲಕ ನ್ಯೂಜಿಲೆಂಡ್ 12.1 ಓವರ್‌ಗಳಲ್ಲಿ ಕೇವಲ 66 ರನ್‌ಗೆ ಆಲೌಟ್ ಆಯಿತು. ಭಾರತ 168 ರನ್ ಭರ್ಜರಿ ಗೆಲುವು ದಾಖಲಿಸಿತು. ಟಿ20 ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!