Tuesday, March 28, 2023

Latest Posts

ದಿನಭವಿಷ್ಯ| ಹಳೆಯ ನೆನಪಲ್ಲೇ ಸಾಗಬೇಡಿ ಅತಿಯಾದ ಭಾವುಕತೆ ಒಳಿತಲ್ಲ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನಿಮಗೆ ಪೂರಕ ಬೆಳವಣಿಗೆ ಸಂಭವಿಸುವುದು. ವ್ಯವಹಾರದಲ್ಲಿ  ಅವಸರದ ನಿರ್ಧಾರ ತಾಳಬೇಡಿ. ಕೌಟುಂಬಿಕ ಬಿಕ್ಕಟ್ಟು ಪರಿಹಾರ.

ವೃಷಭ
ಕೌಟುಂಬಿಕ ವಿಚಾರವೊಂದು ಚಿಂತೆಗೆ ಕಾರಣವಾಗುವುದು. ಅದಕ್ಕೆ ಸುಲಭ ಪರಿಹಾರವಿದೆ.  ಆದರೆ ನೀವು ಅದನ್ನು ಕಂಡುಕೊಳ್ಳುತ್ತಿಲ್ಲ.

ಮಿಥುನ
ಆಪ್ತೇಷ್ಟರ ಸಂಗದಲ್ಲಿ ಸಂತೋಷ ಅನುಭವಿಸುವಿರಿ. ಕೆಲಸದ ಜಂಜಾಟ ವಿಲ್ಲ. ಇಂದಿನ ದಿನ ನಿಮಗೆ ಹಳೆ ನೆನಪು ಕೆದಕಲು ಸಹಕಾರಿ.

ಕಟಕ
ಉತ್ಸಾಹದಿಂದ ಕಾರ್ಯ ಎಸಗುವಿರಿ. ಎಲ್ಲವೂ ನೀವು ನಿರೀಕ್ಷಿಸಿದಂತೆ ನಡೆಯುವುದು. ಕೌಟುಂಬಿಕ ಸಹಕಾರ, ಸಮಾಧಾನ.  ವೃತ್ತಿಯಲ್ಲಿ ಉನ್ನತಿ.

ಸಿಂಹ
ಹಳೆಯ ನೆನಪಿನಲ್ಲೆ ಬದುಕು ಸಾಗಿಸಬೇಡಿ. ಕೆಲವು ವಿಷಯಗಳನ್ನು  ಮರೆತು ಮುಂದೆ ಹೋಗಬೇಕು. ಅತಿಯಾದ ಭಾವುಕತೆ ಒಳಿತಲ್ಲ.

ಕನ್ಯಾ
ಮಾನಸಿಕ ಉದ್ವಿಗ್ನತೆ. ಏನೋ ಒತ್ತಡ.ಹಾಗಾಗಿ ದಿನವನ್ನು ಸಂತೋಷದಿಂದ ಕಳೆಯಲು ಆಗುವುದಿಲ್ಲ. ಆರೋಗ್ಯದ ಚಿಂತೆ.

ತುಲಾ
ಇತರರು ನಿಮ್ಮ ಕಾರ್ಯವನ್ನು ಗಮನಿಸುತ್ತಿರುತ್ತಾರೆ. ಹಾಗಾಗಿ ವಂಚನೆಯ ದಾರಿ ಹಿಡಿಯಬೇಡಿ. ಕೆಲಸವನ್ನು ಗಂಭೀರವಾಗಿ ನಿರ್ವಹಿಸಿ.

ವೃಶ್ಚಿಕ
ಅನವಶ್ಯವಾಗಿ ಮಾನಸಿಕ ಒತ್ತಡ ಅನುಭವಿಸುವಿರಿ. ಅದಕ್ಕೆ ಕಾರಣ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಗಣಿ ಸುವ ನಿಮ್ಮ ಸ್ವಭಾವ. ಅದನ್ನು ತ್ಯಜಿಸಿರಿ.

ಧನು
ದೇವರ ಅನುಗ್ರಹ ನಿಮಗಿದೆ. ಹಾಗಾಗಿ ಕಷ್ಟದ ಪರಿಸ್ಥಿತಿಯನ್ನೂ ಸುಲಭದಲ್ಲಿ ನಿಭಾಯಿಸುವಿರಿ. ಕೌಟುಂಬಿಕ ಸಹಕಾರ ದೊರಕುವುದು.

ಮಕರ
ಇತರರ ವ್ಯವಹಾರದಲ್ಲಿ ಮೂಗು ತೂರಿಸಲು ಹೋಗಬೇಡಿ.ಅದರಿಂದ ನಿಮಗೇ ತೊಂದರೆ ಉಂಟಾದೀತು. ಕುಟುಂಬ ಸದಸ್ಯರ ಜತೆ ದಿನ ಕಳೆಯಿರಿ.

ಕುಂಭ
ಸಂಬಂಧದಲ್ಲಿ ಮಹತ್ತರ ತಿರುವೊಂದು ಉಂಟಾದೀತು. ತಪ್ಪು ನಡೆ ಇಟ್ಟರೆ ಅದು ಪ್ರಮಾದ ಉಂಟು ಮಾಡೀತು.  ವಿವೇಕವಿರಲಿ.

ಮೀನ
ನಿಮ್ಮ ಬದುಕಲ್ಲಿ ಸಂಘರ್ಷದ ಸಂಕೇತ ತೋರಿ ಬರುತ್ತಲಿದೆ. ಅದನ್ನು ಸಾಧ್ಯವಾದಷ್ಟು ತಪ್ಪಿಸಲು ಪ್ರಯತ್ನ ಪಡಿ.   ಮಾನಸಿಕ ಕ್ಷೆಭೆ ಸಂಭವ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!