ದಿನಭವಿಷ್ಯ| ನಿಮ್ಮ ಕಠಿಣ ದುಡಿಮೆಗೆ ಉತ್ತಮ ಫಲ ದೊರಕುವುದು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಇತರರ ವರ್ತನೆಯನ್ನು  ನೀವು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಅವರ ವರ್ತನೆ ನಿಮ್ಮ ಮೇಲೂ ಪರಿಣಾಮ ಬೀರಬಹುದು. ಹಣ ಹೂಡಿಕೆಯಿಂದ ಲಾಭ.

ವೃಷಭ
ನಿಮ್ಮ ಕಠಿಣ ದುಡಿ ಮೆಗೆ ಉತ್ತಮ ಫಲ ದೊರಕುವುದು. ಮೇಲ ಧಿಕಾರಿಗಳ ಮೆಚ್ಚುಗೆ. ಉದ್ಯಮಿಗಳಿಗೆ ಲಾಭ. ವಿದ್ಯಾರ್ಥಿ ಗಳಿಗೆ ಯಶಸ್ಸು.

ಮಿಥುನ
ವೃತ್ತಿ ಮತ್ತು ಖಾಸಗಿ ಬದುಕು ಎರಡರಲ್ಲೂ ಯಶಸ್ಸು. ಆತ್ಮವಿಶ್ವಾಸ ವೃದ್ಧಿ. ದೂರ ಪ್ರಯಾಣವನ್ನು ತಪ್ಪಿಸಿ. ಆರೋಗ್ಯದ ಮೇಲೆ ಪರಿಣಾಮವಾದೀತು.

ಕಟಕ
ನಿಮ್ಮ ಹೊಂದಾಣಿಕೆ ಸ್ವಭಾವವು ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ. ಕಾರ್ಯವು ಸುಲಭದಲ್ಲಿ ಈಡೇರುತ್ತದೆ. ಕೌಟುಂಬಿಕ ಸಂತೋಷ.

ಸಿಂಹ
ವೃತ್ತಿಯಲ್ಲಿ ಸಹೋದ್ಯೋಗಿಗಳ ಜತೆ ಸಮಸ್ಯೆ. ಭಿನ್ನಾಭಿಪ್ರಾಯ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಅವಶ್ಯ ನೆರವು ಒದಗುವುದು.

ಕನ್ಯಾ
ಉದ್ವಿಗ್ನತೆ, ಅಸಹನೆ, ಆತಂಕಗಳು ಕಾಡುತ್ತವೆ. ಸಂವಹನದ ಕೊರತೆ ಇದಕ್ಕೆ ಕಾರಣ. ನಿಮ್ಮ ಅಹಂ ಬಿಟ್ಟು ವರ್ತಿಸಿ. ಇತರರ ಭಾವನೆಗೆ ಸ್ಪಂದಿಸಿರಿ.

ತುಲಾ
ಉತ್ತಮ ಫಲಿತಾಂಶದ ದಿನ. ನಿಮ್ಮ ಹಿಂದಿನ ಪರಿಶ್ರಮಕ್ಕೆ ಇಂದು ಪ್ರತಿಫಲ ಸಿಗುವುದು. ಕುಟುಂಬದಲ್ಲಿ ಸಂಭ್ರಮದ ವಾತಾವರಣ.

ವೃಶ್ಚಿಕ
ವೃತ್ತಿಯಲ್ಲಿ ಅಥವಾ ಅಧ್ಯಯನದಲ್ಲಿ ಉತ್ತಮ ಫಲ ಪಡೆಯಬೇಕಾದರೆ ಕಠಿಣ ಪರಿಶ್ರಮ ಅವಶ್ಯ. ಕೆಲಸ ಮಾಡದೆ ಪ್ರತಿಫಲ ಸಿಗಬೇಕು ಎಂದು ಕಾಯದಿರಿ.

ಧನು
ಇಂದಿನ ಪ್ರತಿಯೊಂದು ಕಾರ್ಯವೂ ಸಫಲವಾಗುವುದು. ಕೌಟುಂಬಿಕ ವ್ಯವಹಾರದಲ್ಲಿ ಎಲ್ಲರ ಬೆಂಬಲ ಪಡೆಯುವಿರಿ. ಆರೋಗ್ಯ ಸುಧಾರಣೆ.

ಮಕರ
ಇಂದು ಪ್ರಮುಖ ನಿರ್ಧಾರ ತೆಗೆದು ಕೊಳ್ಳದಿರಿ. ಅದು ಒಳಿತು ತಾರದು. ವಿವಾಹದ ವಿಷಯದಲ್ಲಿ ತುಸು ಕಾದು ನೋಡುವುದು ವಿಹಿತ.

ಕುಂಭ
ವೃತ್ತಿಯಲ್ಲಿ ಯಶಸ್ಸು. ಸಂಗಾತಿಯ ಜತೆಗೆ ಅವಿಸ್ಮರಣೀಯ ಕ್ಷಣ ಕಳೆಯುವಿರಿ. ಶೇರು ಹೂಡಿಕೆಗೆ ಸಕಾಲವಲ್ಲ. ಆರೋದತ್ತ ಗಮನಕೊಡಿ.

ಮೀನ
ಹಳೆಯ ಹೂಡಿಕೆ ಯಿಂದ ಧನಲಾಭ ಉಂಟಾಗಬಹುದು.ಶಾಪಿಂಗ್ ಸಂಭವ. ಕುಟುಂಬಸ್ಥರಿಗೆ  ತುಸು ಹೆಚ್ಚು ವ್ಯಯಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!