Friday, March 24, 2023

Latest Posts

ದಿನಭವಿಷ್ಯ| ಅದೃಷ್ಟ ನಂಬಿ ಕೂರಬೇಡಿ, ಫಲ ಸಿಗಬೇಕಾದರೆ ಕಠಿಣ ಶ್ರಮ ಬೇಕು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ಇಂದು ನಿಮ್ಮ ಸುತ್ತಲಿನ ಪ್ರತಿಯೊಂದು ಬೆಳವಣಿಗೆ ಮೇಲೆ  ಗಮನ ಕೊಡಿ. ಅದು ನಿಮ್ಮ ವ್ಯವಹಾರ ಅಥವಾ ಬದುಕಿನ  ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

ವೃಷಭ
ನಿಮ್ಮ ಉದ್ದೇಶ ಸಾಧಿಸಬೇಕಿದ್ದರೆ ಹೆಚ್ಚು ಶ್ರಮ ಪಡಬೇಕು. ಸಂಗಾತಿ ಜತೆ ಭಿನ್ನಾಭಿಪ್ರಾಯ ಉಂಟಾದೀತು. ಕಾರಣವಿಲ್ಲದೇ ಖರ್ಚು ಬರಬಹುದು.

ಮಿಥುನ
ಕೆಲವು ವಿಷಯಗಳ ಕುರಿತಂತೆ ಅತಿಯಾಗಿ ಚಿಂತಿಸುತ್ತೀರಿ. ಆ ಮೂಲಕ ಅತಿರೇಕದ ಪ್ರತಿಕ್ರಿಯೆ ತೋರುವಿರಿ. ಇದು ನಿಮಗೆ ಒಳಿತನ್ನು ತರಲಾರದು.

ಕಟಕ
ಪ್ರಮುಖ ಕಾರ್ಯ ಇವತ್ತು ಮುಗಿಸಬೇಕೆಂದು ಯೋಜನೆ ಹಾಕುತ್ತೀರಿ. ಆದರೆ ಅದು ನೀವು ನಿರೀಕ್ಷಿಸಿದಂತೆ ಆಗುವುದಿಲ್ಲ, ನಿರಾಶೆ.

ಸಿಂಹ
ಪ್ರತಿಯೊಂದು ವಿಷಯದಲ್ಲೂ ಎಚ್ಚರಿಕೆಯಿಂದ ವರ್ತಿಸಿ. ನಿಮಗೆ ಕೆಟ್ಟ ಹೆಸರು ತರಲು ಕೆಲವರು ಯತ್ನಿಸುವರು. ಆರ್ಥಿಕ ನಷ್ಟ ಉಂಟಾದೀತು

ಕನ್ಯಾ
ಅದೃಷ್ಟ ನಂಬಿ ಕೂರಬೇಡಿ. ಯಾವುದೇ ಫಲ ಸಿಗಬೇಕಾದರೆ ಕಠಿಣ ಶ್ರಮ ಬೇಕು. ಇತರರು ನೆರವಿಗೆ ಬಂದಾರೆಂದು ಕಾದು ಕೂರಬೇಡಿ..

ತುಲಾ
ನಿಮ್ಮ ಇಷ್ಟಕೆ ವಿರುದ್ಧವಾದ ಬೆಳವಣಿಗೆ ಸಂಭವಿಸಬಹುದು. ನೀವು ಸಹನೆ ಕಾಯ್ದುಕೊಳ್ಳುವುದು ಅವಶ್ಯ. ಆತುರದ ಪ್ರತಿಕ್ರಿಯೆ ತೋರಬೇಡಿ.

ವೃಶ್ಚಿಕ
ಆತ್ಮೀಯರ ಜತೆ ಭಿನ್ನಮತ, ವಾಗ್ವಾದ ಸಂಭವ. ಆದರೆ ಅದು ಅಲ್ಪಕಾಲದ್ದು. ಮತ್ತೆ ಎಲ್ಲ ಸರಿಯಾಗುವುದು. ಮನದಲ್ಲಿ ಕಹಿ ಇಟ್ಟುಕೊಳ್ಳದಿರುವುದು ಮುಖ್ಯವಾಗುತ್ತದೆ.

ಧನು
ಇಂದಿನ ದಿನವು ಸುಗಮವಾಗಿ ಸಾಗುವುದು. ಎಲ್ಲರ ಜತೆ ಸಂಬಂಧ ಸುಧಾರಿಸುವುದು. ಕೌಟುಂಬಿಕ ಸಾಮರಸ್ಯ, ಸಹಕಾರ.

ಮಕರ
ಆರ್ಥಿಕ ಕೊರತೆ ಎದುರಿಸುವಿರಿ. ಕೌಟುಂಬಿಕ ಬದುಕಿನಲ್ಲಿ ಕೆಲವು ಸಮಸ್ಯೆ ಎದುರಿಸುವಿರಿ. ಅದನ್ನು ನಾಜೂಕಿನಿಂದ ನಿಭಾಯಿಸಬೇಕು.

ಕುಂಭ
ಪ್ರತಿಯೊಂದು ವಿಚಾರದಲ್ಲೂ ಇಂದು ನಿಮಗೆ ಪೂರಕ ಫಲಿತಾಂಶ ಒದಗುವುದು. ಈ ದಿನವನ್ನು ಹೆಚ್ಚು ಸದುಪಯೋಗಪಡಿಸಿ.

ಮೀನ
ವೈಯಕ್ತಿಕ ಬದುಕಿನಲ್ಲಿ  ಹರ್ಷದ ಬೆಳವಣಿಗೆ. ಬಂಧುಮಿತ್ರರ ಜತೆಗೂಡಿ ದಿನ ಕಳೆಯುವ ಅವಕಾಶ. ದಿನದಂತ್ಯಕ್ಕೇ ಏನೋ ಸಾಧಿಸಿದ ತೃಪ್ತಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!